ಬೆಂಗಳೂರು:ಸ್ಯಾಂಟ್ರೋ ರವಿ ಜೀವಕ್ಕೆ ಸರ್ಕಾರದಿಂದಲೇ ಅಪಾಯವಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಆರೋಪಿಸಿದ್ದು, 12 ಜನರ ಸಿಡಿ ಕೇಸ್​ನ ಪ್ರಮುಖ ಸಾಕ್ಷಿಯೇ ಸ್ಯಾಂಟ್ರೋ ರವಿ. ಈತನಿಗೆ ರಾಜ್ಯ ಸರ್ಕಾರ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಇಬ್ರಾಹಿಂ, ಸ್ಯಾಂಟ್ರೋ ರವಿ ಬಳಿ 12 ಜನರ ಸಿಡಿ ಇದೆ. ಈ ಬಗ್ಗೆ ನಾನು ಪರಿಷತ್​ಲ್ಲಿ ಹೇಳಿದ್ದೆ. ಆಗ ಗೋಪಾಲಯ್ಯನವರು ‘ನನ್ನದು ಇಲ್ಲ’ ಅಂತ ಹೇಳಿದ್ದರು. ಹೋಂ ಮಿನಿಸ್ಟರ್ ಮನೆಯಲ್ಲಿ ಕಂತೆ ಕಂತೆ ಹಣ ಸಿಕ್ಕಿದೆ. 12 ಜನರ ಕ್ಯಾಸೆಟ್ ಸಿಕ್ಕಿದ್ದವರು ಸರ್ಕಾರದಲ್ಲಿದ್ದಾರೆ. ಸರ್ಕಾರದಿಂದಲೇ ಸ್ಯಾಂಟ್ರೋ ರವಿ ಜೀವಕ್ಕೆ ಅಪಾಯವಿದೆ. ಸಿಡಿ ಕೇಸ್​ನ ಪ್ರಮುಖ ಸಾಕ್ಷಿ ಸ್ಯಾಂಟ್ರೀ ರವಿ. ಹಾಗಾಗಿ ಅವನ ಜೀವ ರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ್ದು ಎಂದಿದ್ದಾರೆ.
ಸಿದ್ದರಾಮಯ್ಯ ಬಿರಿಯಾನಿ ತಿಂದ ಅಂತ ಯಡಿಯೂರಪ್ಪನವರು ವಿಧಾನಸೌಧ ತೊಳೆದ್ರು. ಈಗ ಲಂಚ ಮಂಚದವರು ವಿಧಾನಸೌಧದಲ್ಲಿ ಇದ್ದಾರೆ. ಆರ್​ಎಸ್​ಎಸ್ ನಾಯಕರೀಗ ದಯವಿಟ್ಟು ವಿಧಾನಸೌಧ ತೊಳೆಯಬೇಕು ಎಂದು ಇಬ್ರಾಹಿಂ ಅಣಕಿಸಿದ್ದಾರೆ.
ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ರಾಜ್ಯ ಸರ್ಕಾರ ಅಸ್ತು! ಪಕ್ಷ ಸ್ಥಾಪನೆ ಬೆನ್ನಲ್ಲೇ ರೆಡ್ಡಿಗೆ ಬಿಗ್​ ಶಾಕ್​

ಖಾಲಿ ಬಾಟಲಿ ಕೊಟ್ಟರೆ ಹಣ ವಾಪಸ್​! ಡಿಪಾಸಿಟ್​ ಇಟ್ಟು ನೀರಿನ ಬಾಟಲಿ ಪಡೆಯಬೇಕು, ಶಿವಗಂಗೆ ಬೆಟ್ಟದಲ್ಲಿ ನೂತನ ಪ್ರಯೋಗ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:3 + 5 =
Remember me
