ಹುಬ್ಬಳ್ಳಿ:ಸಾಮಾನ್ಯವಾಗಿ ತನ್ನ ಹೇಳಿಕೆಗಳಿಂದಲೇ ಹೆಚ್ಚಾಗಿ ಗಮನ ಸೆಳೆಯುವ ರಾಜಕಾರಣಿ ಸಿ.ಎಂ. ಇಬ್ರಾಹಿಂ. ಇದೀಗ ಅವರು ಅಂಥದ್ದೇ ಒಂದು ಹೇಳಿಕೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಹುಬ್ಬಳ್ಳಿಯಲ್ಲಿ ಶನಿವಾರ ಅವರು ಸುದ್ದಿಗಾರರಿಗೆ ಪ್ರತಿಕ್ರಿಯಿಸುತ್ತ ಹೇಳಿದ ಮಾತು ಈಗ ಬಹಳಷ್ಟು ಜನರ ಗಮನ ಸೆಳೆದಿದ್ದು, ಚರ್ಚೆಗೂ ಒಳಪಡಲಾರಂಭಿಸಿದೆ.
ಮೈತ್ರಿ ಸರ್ಕಾರ, ಲವ್ ಜಿಹಾದ್, ಗೋ ಹತ್ಯಾ ನಿಷೇಧ.. ಹೀಗೆ ಹಲವು ವಿಷಯಗಳಿಗೆ ಪ್ರತಿಕ್ರಿಯಿಸಿರುವ ಇಬ್ರಾಹಿಂ, ಎಲ್ಲದಕ್ಕೂ ತಮ್ಮದೇ ಧಾಟಿಯಲ್ಲಿ ವಿಭಿನ್ನವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜೆಡಿಎಸ್​-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಕುರಿತು ಇತ್ತೀಚೆಗೆ ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ನೀಡಿದ್ದ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಇಬ್ರಾಹಿಂ, ಮೈತ್ರಿ ಸರ್ಕಾರ ಪತನಕ್ಕೆ ಯಾರು ಕಾರಣ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ, ಆ ಬಗ್ಗೆ ನಾನ್ಯಾಕೆ ವಿಶ್ಲೇಷಣೆ ಮಾಡಲಿ ಎಂಬುದಾಗಿ ಹೇಳಿದ್ದಾರೆ. ನಾವೇನಿದ್ದರೂ ಸೇರಿಸುವುದಕ್ಕೆ ನೋಡುವವರೇ ಹೊರತು ಮುರಿಯವವರಲ್ಲ ಎಂದಿರುವ ಅವರು, ಮತ್ತೆ ಪುನರ್ ವಿವಾಹಕ್ಕೆ ಸಾಧ್ಯ ಇದೆಯಾ ಎನ್ನುವುದನ್ನೂ ನೋಡುತ್ತಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ:ಮೂರು ತಿಂಗಳಲ್ಲಿ 25,000 ಕೋಟಿ ರೂಪಾಯಿ ಸಂಗ್ರಹಿಸಲಿವೆ ಸಾರ್ವಜನಿಕ ಬ್ಯಾಂಕುಗಳು
ರಾಜಕೀಯ ಒಂದು ರೀತಿ ರೈಲ್ವೇ ಜಂಕ್ಷನ್ ಥರ ಆಗಿದೆ. ಯಾರು ಹತ್ತಿ ಹೋಗುತ್ತಾರೋ ಅವರು ದಡ ಸೇರುತ್ತಾರೆ ಎಂದಿರುವ ಅವರು ಲವ್ ಜಿಹಾದ್ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಲವ್ ಜಿಹಾದ್ ಕಾನೂನು ತಂದು ಏನು ಮಾಡಲು ಸಾಧ್ಯ? ಲವ್ ಜಿಹಾದ್ ಗಂಡ-ಹೆಂಡತಿ ರಾಜಿಯಾದರೆ ಯಾರು ಏನು ಮಾಡುವುದಕ್ಕೆ ಆಗುತ್ತದೆ? ಒತ್ತಾಯಪೂರ್ವಕವಾಗಿ ಮಾಡಿದರೆ ಮಾತ್ರ ಕ್ರಮಕೈಗೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಬಳಿಕ ಗೋಹತ್ಯಾ ನಿಷೇಧದ ಕುರಿತೂ ಸಿ.ಎಂ. ಇಬ್ರಾಹಿಂ ಮಾತನಾಡಿದ್ದಾರೆ. ಗೋಹತ್ಯೆ ನಿಷೇಧಕ್ಕೆ ನಮ್ಮ ಬೆಂಬಲ ಇದೆ. ಮುಸ್ಲಿಮರಿಗೆ ನಾನು ಕೈ ಮುಗಿದು ಬೇಡಿಕೊಳ್ಳುತ್ತೇನೆ, ಯಾರೂ ಗೋವನ್ನು ತಿನ್ನಬಾರದು ಎಂದು ಕೇಳಿಕೊಂಡರು. ಜತೆಗೆ ಬಂಜೆಯಾದ ಗೋವನ್ನು ನೋಡಿಕೊಳ್ಳುವವರು ಯಾರು? ಎಂದು ಪ್ರಶ್ನಿಸಿದ ಅವರು, ಸರ್ಕಾರ ಅದಕ್ಕಾಗಿ ಪ್ರತಿ ಪಂಚಾಯತ್​ಗೆ ಒಂದು ಗೋಶಾಲೆ ತೆರೆಯಬೇಕು. ಗೋಸಾಕಣಿಕೆಯ ವ್ಯವಸ್ಥೆಯನ್ನು ಸರ್ಕಾರ ಮಾಡಿಕೊಡಲಿ ಎಂದು ಹೇಳಿದರು. ಇನ್ನು ಕೊಡವರ ಗೋಮಾಂಸ ಸೇವನೆ ಸಂಬಂಧ ಸಿದ್ದರಾಮಯ್ಯ ಅವರ ಆರೋಪ ಸಂಬಂಧ ಪ್ರತಿಕ್ರಿಯಿಸಿದ ಇಬ್ರಾಹಿಂ, ಅದು ನನಗೆ ಗೊತ್ತಿಲ್ಲ, ಯಾವುದೇ ವಿವಾದದ ಬಗ್ಗೆ ನಾನು ಮಾತನಾಡುವುದಿಲ್ಲ. ಅದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ:ಇನ್ನೂ ಆರು ತಿಂಗಳು ಮಾಸ್ಕ್​ ಬಿಡುವಂತಿಲ್ಲ! ಲಾಕ್​ಡೌನ್​ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್​
ಇನ್ನೂ ಆರು ತಿಂಗಳು ಮಾಸ್ಕ್​ ಬಿಡುವಂತಿಲ್ಲ! ಲಾಕ್​ಡೌನ್​ ಮಾಡಲ್ಲ; ಸರ್ಕಾರದ ಹೊಸ ರೂಲ್ಸ್​

ನೀವು ಪದವೀಧರರಾ? ಹಾಗಿದ್ದರೆ ಏರ್​ಪೋರ್ಟ್​ ಅಥಾರಿಟಿಯಲ್ಲಿವೆ 368 ಹುದ್ದೆಗಳು

ಗಂಡನ ರಾಸಲೀಲೆ ವೃತ್ತಾಂತ ಬಿಚ್ಚಿಟ್ಟ ಹೆಂಡತಿ! ಈತನ ಚಾನ್ಸ್​ ಆಸೆಗೆ ಬಲಿಯಾದ್ರೆ ಬದುಕೇ ನರಕ…

‘ಅಯ್ಯೋ ನಿಂಗೆ ಕ್ಯಾನ್ಸರ್​ ಇದೆ! ಟ್ರೀಟ್ಮೆಂಟ್​ ತಗೊಳ್ದಿದ್ರೆ ಸತ್ತೇ ಹೋಗ್ತೀಯ’ ಅಂತ ಹೇಳುತ್ತಲೇ 1.47 ಕೋಟಿ ರೂ. ವಂಚಿಸಿದ ವೈದ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
