ರಾಮನಗರ:ಮಹಾಮಾರಿ ಕರೊನಾ ವೈರಸ್​ ಸೋಂಕು ಹರಡಲು ರಾಜಕೀಯ ವಿರೋಧಿಗಳೇ ಕಾರಣ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್​ ಅವರು ಗಂಭೀರ ಆರೋಪ ಮಾಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಅವರು ಸೋಂಕಿನ ವಾತಾವರಣದ ರಾಜಕೀಯ ಲಾಭ ಪಡೆಯಲು ಹಲವು ಹೇಳಿಕೆಗಳನ್ನು ಕೊಟ್ಟರು. ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದರು. ಲಸಿಕೆಯಿಂದ ದುಷ್ಪರಿಣಾಮ ಆಗುತ್ತದೆ ತಗೋಬೇಡಿ ಎಂದರು. ಇದರಿಂದ ಭಯಗೊಂಡ ಜನ ಆಸ್ಪತ್ರೆ ಕಡೆ ಮುಖ‌ ಮಾಡಲೇ ಇಲ್ಲ ಎಂದು ಹೇಳಿದರು.
ಈಗ ಜನರಿಗೆ ಅರಿವಾಗಿದೆ. ಲಸಿಕೆಯಿಂದ ಸೋಂಕು ತಡೆಯಲು ಸಾಧ್ಯ ಎಂದು ಗೊತ್ತಾಗಿದೆ. ಹೀಗಾಗಿ ಲಸಿಕೆಗಾಗಿ ಜನ ಮುಗಿ ಬಿದ್ದಿದ್ದಾರೆ. ಇದರಿಂದ ಸರ್ಕಾರಕ್ಕೆ ವೈದ್ಯಕೀಯ ಸೌಲಭ್ಯ ಕೊಡುವ ಸವಾಲು ಎದುರಾಗಿದೆ ಎಂದರು.
ಇಂತಹ ಕಠಿಣ ಸಂದರ್ಭದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಭ್ರಷ್ಟ ಎಂದು ಬಿಂಬಿಸುತ್ತಿದ್ದಾರೆ. ಜನರ ಜತೆ ನಿಲ್ಲಬೇಕಾದ ರಾಜಕಾರಣಿಗಳು ಈ ಸಮಯದಲ್ಲಿ ಕರುಣೆಯಿಂದ ವರ್ತಿಸಬೇಕು. ಕರೊನಾ ಪರಿಸ್ಥಿತಿಯನ್ನು ರಾಜಕೀಯವಾಗಿ ಬಳಸಿಕೊಂಡ ವಿರೋಧಿಗಳನ್ನು ಖಂಡಿಸುತ್ತೇನೆಂದು ಹೇಳಿದರು.(ದಿಗ್ವಿಜಯ ನ್ಯೂಸ್​)
ಕರೊನಾ ಆತಂಕ: ಸಗಣಿ, ಗೋಮೂತ್ರ ಬಳಸುವವರಿಗೆ ತಜ್ಞರು ನೀಡಿದ ಭಯಾನಕ ಎಚ್ಚರಿಕೆ ಹೀಗಿದೆ!

ಟ್ಯೂಶನ್​ಗೆ ಹೋದ ಬಾಲಕಿ ಮೇಲೆ ಶಿಕ್ಷಕಿಯ ಗಂಡನಿಂದ ರೇಪ್​: ಎರಡು ವರ್ಷದ ಬಳಿಕ ಆರೋಪಿ ಬಂಧನ

ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಸಂಬಳ ಓರ್ವ ಸಿಇಒಗಿಂತಲೂ ಹೆಚ್ಚಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
