– ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿ– ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ವಿಥ್ ಡ್ರಾ ಮಾಡಿಕೊಂಡು ಕ್ಷಮೆ ಕೇಳಬೇಕು
ಚಿಕ್ಕಮಂಗಳೂರು:ಕಾಂಗ್ರೆಸ್ ದೇಶದ ಸಮಗ್ರತೆಗೆ ಅಪಾಯಕಾರಿಯಾಗಿದೆ. ಆ ಅಪಾಯಕಾರಿ ಮಾನಸಿಕ ಸ್ಥಿತಿ ದೇಶವನ್ನು ಉಳಿಸಲು ಸಾಧ್ಯವಿಲ್ಲ. ಈ ದೇಶದಿಂದಲೇ ಕಾಂಗ್ರೆಸ್​​ ತೊಲಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಸಿ ಟಿ ರವಿ ವಾಗ್ದಾಳಿ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಾಂಧೀಜಿಯವರು ಕಾಂಗ್ರೆಸ್ ವಿಸರ್ಜಿಸಿ ಅಂದಿದ್ದರು. ಇವರು ಮಾಡಬಾರದ ಹಲ್ಕಟ್ ಕೆಲಸವನ್ನು ಮಾಡುತ್ತಾರೆ ಎಂದು ಮನಗಂಡು ಹೇಳಿದ್ದರು ಎನ್ನಿಸುತ್ತದೆ. ಇವರ ಯೋಗ್ಯತೆಗೆ ಅಯೋಧ್ಯೆಯಲ್ಲಿ ಮಂದಿರ ಕಟ್ಟಲು ಬಿಟ್ಟಿರಲಿಲ್ಲ. ಕಾಶಿ ಕಾರಿಡಾರ್ ಯೋಜನೆ ಮೋದಿ ಬಂದ ಮೇಲೆ ಆಗಿದ್ದು ಎಂದು ಕಾಂಗ್ರೆಸ್​​ ವಿರುದ್ಧವಾಗಿ ಕಿಡಿ ಕಾರಿದ್ದಾರೆ.
ಇದನ್ನೂ ಓದಿ:ಅವಿವಾಹಿತ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಘೋಷಿಸಿದ ಪಕ್ಷೇತರ ಅಭ್ಯರ್ಥಿ!
ಭಾರತ ಬಿಟ್ಟರೆ ಭಾರತೀಯತೆ ಎಲ್ಲಿ ಇರುತ್ತೆದೆ :ಕಾಂಗ್ರೆಸ್ ನೀತಿಯೇ ಅಲ್ಪಸಂಖ್ಯಾತರನ್ನ ಹೋಲಿಕೆ ಮಾಡಿ, ಹಿಂದುಗಳನ್ನು ತುಳಿಯುವುದಾಗಿದೆ. ಅವನ್ಯಾರೋ.. ಆಂಜನೇಯ ಹುಟ್ಟಿದ್ದೇ ಇಲ್ಲಿ ಅಲ್ಲ ಅಂತಾನೆ. ರಾಮನ ಅಸ್ತಿತ್ವವನ್ನೇ ಪ್ರಶ್ನೆ ಮಾಡಿದವರು ಆಂಜನೇಯನನ್ನು ಒಪ್ಪಿಕೊಳ್ಳುತ್ತಾರೆ. ಬಜರಂಗದಳ ಭಜರಂಗಿ ಬೇರೆ ಬೇರೆ ಅಂತಾರೆ. ಹಾಗಾದ್ರೆ, ಭಾರತ ಬಿಟ್ಟರೆ ಭಾರತೀಯತೆ ಎಲ್ಲಿ ಇರುತ್ತೆದೆ ಎಂದು ಪ್ರಶ್ನೆ ಮಾಡಿದ್ದಾರೆ.
ಭಜರಂಗಿಯನ್ನ ಕೆಣಕಿ ಯಾರು ಉಳಿದವರಿಲ್ಲ. ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ವಿಥ್ ಡ್ರಾ ಮಾಡಿಕೊಂಡು ಕ್ಷಮೆ ಕೇಳಬೇಕು. ತ್ರೇತಾಯುಗದಲ್ಲಿ ರಾವಣ ಭಜರಂಗಿಯನ್ನು ಕೆಣಕಿದ್ದ, ರಾವಣನ ಸರ್ವ ನಾಶವಾಯ್ತು. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚುವುದರಿಂದ, ಆಂಜನೇಯ ಅದೇ ಬೆಂಕಿಯಿಂದ ಲಂಕೆಯನ್ನು ಸುಟ್ಟ. ಈಗ ಬಜರಂಗದಳವನ್ನು ಕೆಣಕಿದ್ದಾರೆ, ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ಕಾಂಗ್ರೆಸ್​ ವಿರುದ್ಧವಾಗಿ ಆಕ್ರೋಶ ಹೊರ ಹಾಕಿದ್ದಾರೆ.
ಬೆನ್ನಟ್ಟಿ ಬಂದ ಮಂಗಗಳ ಗುಂಪು; ಭಯದಲ್ಲಿ ಟೆರೇಸ್‌ನಿಂದ ಬಿದ್ದು ಪ್ರಾಣ ಕಳೆದುಕೊಂಡ!



ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − seven =
Remember me
