ಬೆಂಗಳೂರು :ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಪುನಾರಚನೆಗೆ ಕಾಲ ಕೂಡಿ ಬರುವ ದಿನಗಳು ಹತ್ತಿರ ಬಂದಂತೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಪುಟ ಪುನಾರಚನೆ ಬಗ್ಗೆ ಮಾತನಾಡಿದ ಬೆನ್ನ ಹಿಂದೆಯೇ ಅನೇಕ ಸಚಿವಾಕಾಂಕ್ಷಿಗಳು ಅವರನ್ನು ಭೇಟಿ ಮಾಡಿ ಒತ್ತಡ ಹಾಕಿದ್ದಾರೆ.
ಉಪ ಚುನಾವಣೆಗಳಲ್ಲಿ ಯಾವ ಪಕ್ಷ ಆಡಳಿತದಲ್ಲಿ ಇರುವುದೋ ಅದೇ ಪಕ್ಷ ಗೆಲ್ಲುತ್ತದೆ. ಆದರೆ ಸಾರ್ವತ್ರಿಕ ಚುನಾವಣೆ ಆ ರೀತಿ ಆಗುವುದಿಲ್ಲ. ಆದ್ದರಿಂದ ಈಗ ಇರುವ ಸಚಿವರನ್ನು ಇಟ್ಟುಕೊಂಡು ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಮೊದಲು ಪುನಾರಚನೆ ಮಾಡಿ ಹೊಸಬರಿಗೆ ಅವಕಾಶ ನೀಡಬೇಕು.|ಅಡಗೂರು ಎಚ್. ವಿಶ್ವನಾಥ್ವಿಧಾನಪರಿಷತ್ ಸದಸ್ಯ
ನಾವು ಕೆಲ ಶಾಸಕರು ಬೆಳಗ್ಗೆ ಸಿಎಂ ಭೇಟಿ ಮಾಡಿದ್ದೆವು. ರಮೇಶ್ ಜಾರಕಿಹೊಳಿ ಮನೆಯಲ್ಲಿ ಊಟಕ್ಕೂ ಸೇರಿದ್ದೆವು. ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ಯೋಜನೆಗಳಿಗೆ ಅನುಮತಿ ಕೊಡಿಸುವಂತೆ ಕೋರಿದ್ದೇವೆ. ಮಂತ್ರಿ ಸ್ಥಾನ ಕೊಟ್ಟರೆ ಬೇಡ ಎನ್ನುವ ದೊಡ್ಡ ಗುಣವಿಲ್ಲ.|ರಾಜೂಗೌಡಶಾಸಕ
ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಸಿಎಂ ಹಾಗೂ ಪಕ್ಷ ವಹಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತೇನೆ. ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ.|ಎಂ.ಪಿ.ರೇಣುಕಾಚಾರ್ಯಸಿಎಂ ರಾಜಕೀಯ ಕಾರ್ಯದರ್ಶಿ
ಮುಖ್ಯಮಂತ್ರಿ ಅವರನ್ನು ಶಾಸಕರಾದ ಮುರುಗೇಶ ನಿರಾಣಿ, ರಾಜೂಗೌಡ, ಎಂ.ಪಿ.ರೇಣುಕಾಚಾರ್ಯ, ಬೆಳ್ಳಿ ಪ್ರಕಾಶ್, ಶಿವರಾಜ ಪಾಟೀಲ್ ಬುಧವಾರ ಭೇಟಿ ಮಾಡಿದ್ದರು. ಸಿಎಂ ಭೇಟಿ ಮಾಡದ ಅನೇಕ ಹಿರಿಯ ಶಾಸಕರು ತಾವೂ ಸಚಿವಸ್ಥಾನದ ಆಕಾಂಕ್ಷಿ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರೆ ಕಾಯುತ್ತಿರುವ ಸಿಎಂ:ಯಡಿಯೂರಪ್ಪ ಈಗಾಗಲೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ. ವರಿಷ್ಠರಿಂದ ಕರೆ ಬಂದ ಕೂಡಲೇ ದೆಹಲಿಗೆ ತೆರಳಿ ಚರ್ಚೆ ನಡೆಸಿ ಒಪ್ಪಿಗೆ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮೊದಲ ಬಾರಿಗೆ ಅಭಿನಂದನೆ:ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ಅಭಿನಂದಿಸಿರಲಿಲ್ಲ. ಹಿಂದೆ ಉಪಚುನಾವಣೆ ಗೆದ್ದಾಗ ಸಹ ಟ್ವೀಟ್ ಮಾಡಿರಲಿಲ್ಲ. ಮಂಗಳವಾರ 2 ಕ್ಷೇತ್ರಗಳಲ್ಲಿ ಗೆದ್ದ ಕೂಡಲೇ ಮೊದಲಿಗೆ ಟ್ವೀಟ್ ಮೂಲಕ ಅಭಿನಂದಿಸಿದ್ದು ಮೋದಿ. ಆದ್ದರಿಂದ ಯಡಿಯೂರಪ್ಪಗೆ ಸಂಪುಟ ಪುನಾರಚನೆಗೆ ಅನುಮತಿ ಸಿಗಬಹುದೆಂಬ ವಿಶ್ವಾಸ ಇಮ್ಮಡಿಯಾಗಿದೆ.
ಪುನಾರಚನೆ ಹೇಗೆ?:ಲಭ್ಯ ಮಾಹಿತಿ ಪ್ರಕಾರ, ವಿಸ್ತರಣೆಗಿಂತ ಪುನಾರಚನೆ ಬಗ್ಗೆಯೇ ಯಡಿಯೂರಪ್ಪರಿಗೆ ಒಲವಿದೆ. ಹಾಲಿ ಸಂಪುಟದಲ್ಲಿ ಇರುವವರಲ್ಲಿ 3 ರಿಂದ 4 ಸಚಿವರನ್ನು ಕೈಬಿಟ್ಟು 10 ಜನರನ್ನು ಸೇರಿಸಿಕೊಳ್ಳುವುದು ಅವರ ಉದ್ದೇಶವೆನ್ನಲಾಗಿದೆ. ಸಿ.ಟಿ.ರವಿ ರಾಜೀನಾಮೆ ಸೇರಿ ಸದ್ಯ ಏಳು ಸ್ಥಾನಗಳು ಖಾಲಿ ಇವೆ. ಸಂಪುಟದಲ್ಲಿ ಇರುವ ವಲಸಿಗರಿಗೆ ಯಾರಿಗೂ ಕೊಕ್ ನೀಡುವುದಿಲ್ಲ. ಬದಲಾಗಿ ಪಕ್ಷದಿಂದ ಸೇರ್ಪಡೆಯಾಗಿರುವ ಕೆಲ ಸಚಿವರನ್ನು ಮಾತ್ರ ಕೈ ಬಿಡಲಾಗುತ್ತದೆ ಎಂದು ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಮನೆಯಲ್ಲಿ ಆಕಾಂಕ್ಷಿಗಳ ಸಭೆಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿವಾಸದಲ್ಲಿ ಸಚಿವಾಕಾಂಕ್ಷಿಗಳು ಬುಧವಾರ ಸಭೆ ನಡೆಸಿದರು. ರೇಣುಕಾಚಾರ್ಯ, ಮುರುಗೇಶ ನಿರಾಣಿ, ಪೂರ್ಣಿಮಾ, ಬೆಳ್ಳಿ ಪ್ರಕಾಶ್, ರಾಜೂಗೌಡ, ಶಂಕರಪಾಟೀಲ್ ಮುನೇನಕೊಪ್ಪ, ಎಚ್.ವಿಶ್ವನಾಥ್ ಸೇರಿ 15ಕ್ಕೂ ಹೆಚ್ಚು ಜನ ಸಭೆಯಲ್ಲಿದ್ದರು. ಸಂಪುಟ ಪುನಾರಚನೆಗೆ ಸಿಎಂ ಮೇಲೆ ಒತ್ತಡ ಹಾಕಬೇಕು, ಕೆಲ ನಿಷ್ಕ್ರಿಯ ಸಚಿವರನ್ನು ಕೈಬಿಡಬೇಕು ಎಂಬುದು ಸೇರಿ ಕೆಲವೊಂದು ಮಹತ್ವದ ಚರ್ಚೆಗಳು ನಡೆದವು ಎನ್ನಲಾಗಿದೆ. ಸಚಿವಾಸ್ಥಾನದ ಆಕಾಂಕ್ಷಿಗಳ ಮನವಿ ಆಲಿಸಿರುವ ರಮೇಶ್ ಜಾರಕಿಹೊಳಿ, ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ನಡೆಸುವ ಭರವಸೆ ನೀಡಿದರೆಂದು ಮೂಲಗಳು ಖಚಿತಪಡಿಸಿವೆ.
ಯೋಗೇಶ್ವರ್ ಬಗ್ಗೆ ಒತ್ತಡ ಬೇಡವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನು ಸಂಪುಟಕ್ಕೆ ಸೇರಿಸುವಂತೆ ಒತ್ತಡ ತರಬಾರದು ಎಂದು ಅನೇಕ ಶಾಸಕರು ರಮೇಶ್ ಜಾರಕಿಹೊಳಿ ಮೇಲೆ ಒತ್ತಡ ಹೇರಿದರೆನ್ನಲಾಗಿದೆ. ಶಾಸಕರ ಒತ್ತಡಕ್ಕೆ ಮಣಿದ ಜಾರಕಿಹೊಳಿ ಈ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ಮಾಡುವುದಿಲ್ಲವೆಂಬ ಭರವಸೆ ನೀಡಿದರೆಂದು ಮೂಲಗಳು ಖಚಿತಪಡಿಸಿವೆ.
ವಿದೇಶಿ ದೇಣಿಗೆ ನಿಯಮ ಬಿಗಿ: ಪರಿಷ್ಕೃತ ನಿಬಂಧನೆ ಪಾಲಿಸಬೇಕು ಎನ್​ಜಿಒಗಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
