ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ ಮುನ್ನ, ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಡೆಯುವುದು ಬಹುತೇಕ ಖಚಿತವಾಗಿದೆ. ಸೆ.17ರ ಮಹಾಲಯ ಅಮಾವಾಸ್ಯೆ ಬಳಿಕ ಪಿತೃಪಕ್ಷ ಮುಕ್ತಾಯವಾಗಲಿದೆ. ಸೆ.21ರಿಂದ ಹತ್ತು ದಿನ ಅಧಿವೇಶನ ನಡೆಯಲಿದ್ದು, ಈ ಮಧ್ಯದ ಅವಧಿಯಲ್ಲಿ ಸೆ.19ರ ಶನಿವಾರ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಬಹುದೆಂದು ಬಿಜೆಪಿಯ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಅವಕಾಶ ಸಾಧ್ಯತೆ
*ಎಂಟಿಬಿ ನಾಗರಾಜ್
*ಆರ್.ಶಂಕರ್
*ಯೋಗೇಶ್ವರ್
*ಉಮೇಶ್ ಕತ್ತಿ
*ಅರವಿಂದ ಲಿಂಬಾವಳಿ
ಸದ್ಯ ಸಂಪುಟದಲ್ಲಿ ಆರು ಸ್ಥಾನ ಖಾಲಿ ಇವೆ. ಈ ಪೈಕಿ ನಾಲ್ಕನ್ನು ಭರ್ತಿ ಮಾಡಲಾಗುತ್ತದೆ. ಈ ಸಚಿವ ಸ್ಥಾನಗಳಿಗೆ ಬಿಜೆಪಿಯಲ್ಲಿ ಎರಡು ಡಜನ್​ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಅವರನ್ನು ಸಮಾಧಾನಪಡಿಸುವ ಉದ್ದೇಶದಿಂದಲೇ ಎರಡು ಸ್ಥಾನಗಳನ್ನು ಖಾಲಿಬಿಡಲಾಗುತ್ತದೆ.
ಇದನ್ನೂ ಓದಿ:ಮದುವೆಯಾದ 3ನೇ ದಿನ ತವರಿಗೆ ದಬ್ಬಿದ… 8ನೇ ದಿನ ತಲಾಖ್​… ತಲಾಖ್​… ತಲಾಖ್​… ಎಂದ!
ಸಿಎಂ ಜತೆ ಚರ್ಚೆರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾಗಿರುವ ಎಂಟಿಬಿ ನಾಗರಾಜ್, ಆರ್. ಶಂಕರ್ ಹಾಗೂ ಸಿ.ಪಿ.ಯೋಗೇಶ್ವರ್ ಒಟ್ಟಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಂಪುಟ ಸ್ಥಾನಕ್ಕಾಗಿ ಒತ್ತಡ ಹಾಕಿದ್ದಾರೆ. ಇನ್ನೂ ಎಷ್ಟು ದಿನ ಅಧಿಕಾರವಿಲ್ಲದೆ ಕಾಯಬೇಕೆಂಬ ಪ್ರಶ್ನೆಯನ್ನೆತ್ತಿದ್ದಾರೆ. ಪಿತೃಪಕ್ಷ ಮುಗಿದ ಕೂಡಲೇ ವಿಸ್ತರಣೆ ಮಾಡುವ ಭರವಸೆ ಜತೆಗೆ ಈ ವಾರದ ಕೊನೆಗೆ ದೆಹಲಿಗೆ ತೆರಳುವುದಾಗಿ ಸಿಎಂ ಹೇಳಿದ್ದಾರೆನ್ನಲಾಗಿದೆ.
ವಿಶ್ವನಾಥ್​ಗಿಲ್ಲ ಅವಕಾಶ?
ವಿಧಾನ ಪರಿಷತ್ ಸದಸ್ಯರಾಗಿರುವ ಅಡಗೂರು ಎಚ್. ವಿಶ್ವನಾಥ್​ಗೆ ಸಚಿವ ಸಂಪುಟ ಸೇರುವ ಅವಕಾಶ ಕ್ಷೀಣಿಸಿದೆ ಎನ್ನಲಾಗಿದೆ. ಮುಂದೆ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಅವರಿಗೆ ಅವಕಾಶ ಕಲ್ಪಿಸಬಹುದೆಂದು ಮೂಲಗಳು ಹೇಳುತ್ತವೆ.
ಹೈಕಮಾಂಡ್ ಭೇಟಿಕರೊನಾ ಗೆದ್ದು ಬಂದಾಗಿನಿಂದ ಯಡಿಯೂರಪ್ಪ ದೆಹಲಿಗೆ ತೆರಳಿ ಹೈಕಮಾಂಡ್ ಜತೆ ರ್ಚಚಿಸಲು ಉತ್ಸುಕರಾಗಿದ್ದಾರೆ. ಆದರೆ ಹೈಕಮಾಂಡ್​ನಿಂದ ಕರೆ ಬಂದಿಲ್ಲ. ಈ ವಾರದ ಕೊನೆಗೆ ದೆಹಲಿಗೆ ಬುಲಾವ್ ಬರಬಹುದೆಂಬ ನಿರೀಕ್ಷೆ ಹಿನ್ನೆಲೆಯಲ್ಲಿ ಸಿಎಂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದ ನೆರೆ ಹಾನಿಗೆ ಹೆಚ್ಚಿನ ಪರಿಹಾರ ಕೇಳುವುದು, ಬಾಕಿ ಯೋಜನೆಗಳಿಗೆ ವಿವಿಧ ಸಚಿವಾಲಯಗಳಿಂದ ಒಪ್ಪಿಗೆ ಪಡೆಯುವುದು ಸಿಎಂ ಉದ್ದೇಶವಾಗಿದೆ. ಸಂಸತ್ ಅಧಿವೇಶನ ಸಹ ನಡೆಯುತ್ತಿರುವ ಕಾರಣದಿಂದ ರಾಜ್ಯದ ಸಂಸದರ ಜತೆಗೂ ಸಭೆ ನಡೆಸಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತುವಂತೆಯೂ ಮನವಿ ಮಾಡಲಿದ್ದಾರೆಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ನಿತ್ಯ ಭವಿಷ್ಯ: ಈ ರಾಶಿಯವರಿಗೆ ಆಕಸ್ಮಿಕ ಬೆಳವಣಿಗೆಯಲ್ಲಿ ಹಳೆಯ ಸಂಕಟಗಳು ದೂರಾಗಲಿವೆ
ಡಿಸೆಂಬರ್​ನಲ್ಲಿ ಪುನಾರಚನೆ
ಆಗಸ್ಟ್​ನಲ್ಲೇ ಸಂಪುಟ ಪುನಾರಚನೆ ನಡೆಯಬೇಕಾಗಿತ್ತಾದರೂ ಕರೊನಾ, ನೆರೆ ಕಾರಣಕ್ಕಾಗಿ ಮುಂದಕ್ಕೆ ಹೋಗಿತ್ತು. ಮಾಹಿತಿ ಪ್ರಕಾರ ಈ ಮುಹೂರ್ತ ಡಿಸೆಂಬರ್​ಗೆ ನಿಗದಿಯಾಗುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ ಅವಧಿಯಿಂದ ಮಂತ್ರಿಗಳಾಗಿದ್ದ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.
ಹೈಕಮಾಂಡ್ ವಿವೇಚನೆಗೆಎಂಟಿಬಿ ನಾಗರಾಜ್, ಆರ್. ಶಂಕರ್, ಯೋಗೇಶ್ವರ್, ಉಮೇಶ್ ಕತ್ತಿ ಹಾಗೂ ಅರವಿಂದ ಲಿಂಬಾವಳಿ ಹೆಸರನ್ನು ಸಿಎಂ ಹೈಕಮಾಂಡ್​ಗೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಅದರಲ್ಲಿ ನಾಲ್ಕಕ್ಕೆ ಅನುಮತಿ ಸಿಗಬಹುದೆಂಬ ನಿರೀಕ್ಷೆ ರಾಜ್ಯ ಮುಖಂಡರಲ್ಲಿದೆ. ಯಾವ ಹೆಸರನ್ನು ಕೈಬಿಡಲಾಗುತ್ತದೆಂಬುದು ಹೈಕಮಾಂಡ್ ವಿವೇಚನೆಗೆ ಸೇರಿದೆ.
ಇದನ್ನೂ ಓದಿ:ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ !
ನಿಗಮ, ಮಂಡಳಿ ನೇಮಕಪಕ್ಷದ ಕಾರ್ಯಕರ್ತರನ್ನು ನಿಗಮ ಮತ್ತು ಮಂಡಳಿಗಳಿಗೆ ನೇಮಕ ಮಾಡುವ ಪ್ರಕ್ರಿಯೆ ಸಹ ನಿಂತಿದೆ. ಸಿಎಂಗೆ ಈಗಾಗಲೇ ಪಕ್ಷದ ಕಡೆಯಿಂದ ಪಟ್ಟಿ ಸಲ್ಲಿಕೆಯಾಗಿದೆ. ಸಿಎಂ ದೆಹಲಿ ಭೇಟಿಯಿಂದ ಹಿಂತಿರುಗಿದ ನಂತರ ನೇಮಕ ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
ಮುಂದುವರಿದ ಡ್ರಗ್ಸ್ ಜಾಲದ ಬೇಟೆ: ವಿದೇಶಿ ಡ್ರಗ್ಸ್ ಪೆಡ್ಲರ್ ಲೂಮ್ ಪೆಪ್ಪರ್ ಬಾಯ್ಬಿಟ್ಟ ರಹಸ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + two =
Remember me
