ಬೆಂಗಳೂರು:ಸಂಪುಟ ವಿಸ್ತರಣೆಗೆ ವರಿಷ್ಠರ ಅನುಮತಿ ಪಡೆದುಕೊಂಡೇ ಬರುವ ವಿಶ್ವಾಸದೊಂದಿಗೆ ದೆಹಲಿ ಯಾತ್ರೆ ಕೈಗೊಂಡಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್​ನಿಂದ ಸ್ಪಷ್ಟ ಭರವಸೆ ಸಿಗದ ಕಾರಣ, ಶುಕ್ರವಾರ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ.
ವರಿಷ್ಠರು ಒಪ್ಪಿದರೆ ಭಾನುವಾರ ಸಂಪುಟ ವಿಸ್ತರಿಸಲು ಯಡಿಯೂರಪ್ಪ ದೆಹಲಿಯಲ್ಲಿ ಎಲ್ಲ ಕಸರತ್ತು ನಡೆಸುತ್ತಿದ್ದಾರೆ. ಗುರುವಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾದರಾದರೂ ಇಬ್ಬರೂ ಸಹ ದೆಹಲಿ ಚುನಾವಣೆ ಪ್ರಚಾರದಲ್ಲಿ ಬಸವಳಿದ ಕಾರಣ ಹೆಚ್ಚಿನ ಚರ್ಚೆ ಸಾಧ್ಯವಾಗಿಲ್ಲ. ಆದ್ದರಿಂದಲೇ ಶುಕ್ರವಾರ ಬೆಳಗ್ಗೆ ಮತ್ತೊಂದು ಸುತ್ತಿನ ಮಾತುಕತೆಗೆ ಸಿಎಂ ನಿರ್ಧರಿಸಿದ್ದಾರೆ.
ಗುರುವಾರ ರಾತ್ರಿಯೇ ಎಲ್ಲ ಚರ್ಚೆ ಮುಗಿಯಲಿದೆ ಎಂಬ ಕಾರಣಕ್ಕೆ ಶುಕ್ರವಾರ ಬೆಳಗ್ಗೆ 8.30ರ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ ಬರಲು ನಿರ್ಧರಿಸಿದ್ದರಾದರೂ ತಡರಾತ್ರಿ ನಿರ್ಧಾರ ಬದಲಿಸಿದ್ದಾರೆ. ಒಂದೊಮ್ಮೆ ವರಿಷ್ಠರು ದೆಹಲಿ ಚುನಾವಣೆ ಮುಗಿದ ನಂತರ ಮತ್ತೊಮ್ಮೆ ಬರುವಂತೆ ತಿಳಿಸಿದರೆ ವಿಸ್ತರಣೆ ಪ್ರಕ್ರಿಯೆ ಕೂಡ ಅಲ್ಲಿಯ ತನಕ ಮುಂದೂಡಲ್ಪಡುತ್ತದೆ.
ಪುತ್ರ ರಾಘವೇಂದ್ರ ಅವರ ಜತೆ ದೆಹಲಿಗೆ ತೆರಳಿದ್ದ ಬಿಎಸ್​ವೈ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್ ಅವರನ್ನು ಭೇಟಿ ಮಾಡಿ ರಾಜ್ಯದ ಪರವಾಗಿ ಬೇಡಿಕೆಗಳನ್ನು ಸಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಭದ್ರಾವತಿ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ವಿಚಾರವಾಗಿಯೂ ಚರ್ಚೆ ನಡೆಸಿದರು. ಬಳಿಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆ, ಅಭಿವೃದ್ಧಿ ಯೋಜನೆ ಬಗ್ಗೆ ರ್ಚಚಿಸಿದರು.
ಅಮಿತ್ ಷಾ ಮತ್ತು ನಡ್ಡಾ ಜತೆ ರ್ಚಚಿಸಿದ್ದೇನೆ. ಶುಕ್ರವಾರ ಮತ್ತೊಮ್ಮೆ ಮಾತುಕತೆ ನಡೆಸಿ ಎಲ್ಲ ವಿಚಾರಗಳ ಬಗ್ಗೆ ತೀರ್ವನಿಸಲಾಗುವುದು.
| ಬಿ.ಎಸ್. ಯಡಿಯೂರಪ್ಪ, ಸಿಎಂ
ಉಪ ಚುನಾವಣೆಯಲ್ಲಿ ಗೆದ್ದ ಎಷ್ಟು ಜನರನ್ನು ಮಂತ್ರಿ ಮಾಡಬೇಕು, ಮೂಲ ಬಿಜೆಪಿಗರಲ್ಲಿ ಎಷ್ಟು ಜನರಿಗೆ ಸಚಿವ ಸ್ಥಾನ ನೀಡಬೇಕೆಂಬ ವಿಚಾರದಲ್ಲಿ ವರಿಷ್ಠರು ಹಾಗೂ ಯಡಿಯೂರಪ್ಪ ನಡುವೆ ಸಹಮತ ಇಲ್ಲದೇ ಇರುವುದೇ ಮಾತುಕತೆ ಮುಂದೂಡಲ್ಪಡುವುದಕ್ಕೆ ಕಾರಣ ಎನ್ನಲಾಗಿದೆ. ವರಿಷ್ಠರು ಖಾಲಿ ಇರುವ ಮಂತ್ರಿ ಸ್ಥಾನಗಳಲ್ಲಿ ಎಂಟನ್ನು ಮಾತ್ರ ವಲಸಿಗರಿಗೆ ನೀಡಿ, ಉಳಿದವನ್ನು ಮೂಲ ಬಿಜೆಪಿಗರಿಗೆ ನೀಡುವಂತೆ ಹೇಳಿದ್ದಾರೆ. ಆದರೆ ಯಡಿಯೂರಪ್ಪ ಅದಕ್ಕೆ ಸಿದ್ಧರಿಲ್ಲ. ಆದ್ದರಿಂದಲೇ ಶುಕ್ರವಾರ ಮತ್ತೊಮ್ಮೆ ಚರ್ಚೆ ನಡೆಸೋಣ ಎಂದು ಹೇಳಿ ಕಳುಹಿಸಿದ್ದಾರೆನ್ನಲಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ನಡ್ಡಾ ಹಾಗೂ ಬಿ.ಎಲ್. ಸಂತೋಷ್ ಚರ್ಚೆ ನಡೆಸಿ ಯಡಿಯೂರಪ್ಪ ನೀಡಿರುವ ಪಟ್ಟಿಗೆ ಒಪ್ಪಿಗೆ ನೀಡಬೇಕಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 5 =
Remember me
