ಬೆಂಗಳೂರು:ಬಿಜೆಪಿ ಸರ್ಕಾರದ ಬಹುನಿರೀಕ್ಷಿತ ಮತ್ತು ಗಜಪ್ರಸವದಂತಾಗಿ ರುವ ಸಂಪುಟ ವಿಸ್ತರಣೆ ನಡೆಸಲು ಸಿಎಂ ಯಡಿಯೂರಪ್ಪ ಉತ್ಸುಕರಾಗಿದ್ದು, ಉಪಚುನಾವಣೆ ಬಳಿಕ ನವದೆಹಲಿಗೆ ತೆರಳಿ ಪಕ್ಷದ ಒಪ್ಪಿಗೆ ಪಡೆಯಲು ಬಯಸಿದ್ದಾರೆ.
ಸಂಪುಟ ವಿಸ್ತರಣೆ ಮಾಡಿ ಸದ್ಯಕ್ಕೆ ಕೈತೊಳೆದುಕೊಳ್ಳಲು ಸಿಎಂ ಬಯಸಿದ್ದರೂ, ಪುನಾರಚನೆಗೆ ವರಿಷ್ಠರು ಆಸಕ್ತಿ ತೋರಿದ ಹಿನ್ನೆಲೆ ಸಂಪುಟ ಭರ್ತಿ ಪ್ರಕ್ರಿಯೆ ಮುಂದೂಡಲ್ಪಟ್ಟಿತ್ತು. ಇದೀಗ ಮತ್ತೆ ಈ ವಿಷಯ ಮುನ್ನೆಲೆಗೆ ಬಂದಿದೆ. ಈಗ ಖಾಲಿ ಇರುವ ಸಚಿವ ಸ್ಥಾನದ ಜತೆಗೆ ಸಕ್ರಿಯರಲ್ಲದ ಸಚಿವರನ್ನು ಕೈಬಿಟ್ಟು ಮತ್ತೊಂದಿಷ್ಟು ಸ್ಥಾನಗಳನ್ನು ಖಾಲಿ ಮಾಡಿ ಸಕ್ರಿಯ ಸಂಪುಟ ತಂಡ ಕಟ್ಟಲು ವರಿಷ್ಠರು ಬಯಸಿದ್ದಾರೆನ್ನಲಾಗಿದೆ. ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಸಂಪುಟ ವಿಸ್ತರಣೆ ಸಂಬಂಧ ಉಪಚುನಾವಣೆ ಮುಗಿದ ಮೇಲೆ ದೆಹಲಿಗೆ ಹೋಗಿ ವರಿಷ್ಠರ ಜತೆ ರ್ಚಚಿಸುತ್ತೇನೆ. ಬಳಿಕ ವಿಸ್ತರಣೆಗೆ ದಿನಾಂಕ ನಿಗದಿ ಮಾಡುತ್ತೇನೆ ಎಂದರು.
ಅಡಿಗಡಿಗೆ ಅಡೆತಡೆ:ಮುಖ್ಯಮಂತ್ರಿ ಯಡಿಯೂರಪ್ಪ ಬಹುದಿನಗಳಿಂದ ಸಂಪುಟ ವಿಸ್ತರಿಸಲು ಬಯಸಿದ್ದರಾದರೂ ವಿವಿಧ ಕಾರಣದಿಂದ ಅವಕಾಶ ದೊರೆತಿರಲಿಲ್ಲ. ಮೊದಲು ಕರೊನಾ ಸಾಂಕ್ರಾಮಿಕ ತೀವ್ರತೆ, ಬಳಿಕ ವಿಧಾನಸಭೆ ಅಧಿವೇಶನ, ನಂತರ ಉಪಚುನಾವಣೆ ಎದುರಾದ ಹಿನ್ನೆಲೆ ಸತತವಾಗಿ ಅಡ್ಡಿಯಾಗುತ್ತಲೇ ಇದೆ. ಸೆಪ್ಟೆಂಬರ್​ನಲ್ಲಿ ದೆಹಲಿಗೆ ತೆರಳಿ ವರಿಷ್ಠರೊಡನೆ ರ್ಚಚಿಸಿದ್ದರಾದರೂ, ಅತ್ತಲಿಂದ ಯಾವುದೇ ಉತ್ತರ ಬಂದಿರಲಿಲ್ಲ.
ನ.3ರಂದು ಎರಡೂ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಬಳಿಕ ಸಿಎಂ ದೆಹಲಿ ನಾಯಕರ ಭೇಟಿಗೆ ಸಮಯ ಕೇಳಲಿದ್ದಾರೆನ್ನಲಾಗಿದೆ. ಈ ಉಪಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಲಿದೆ. ಸದ್ಯಕ್ಕೆ ಆರು ಸ್ಥಾನಗಳು ಖಾಲಿ ಇದ್ದು, ನಾಲ್ಕು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಸಿಎಂ ಬಯಸಿದ್ದಾರೆ. ಒಂದೊಮ್ಮೆ ವರಿಷ್ಠರು ಸಂಪುಟ ಪುನಾರಚನೆಗೆ ಅನುಮತಿ ನೀಡಿದರೆ 4-5 ಸಚಿವರನ್ನು ಕೈಬಿಟ್ಟು 7-8 ಮಂದಿಯನ್ನು ಹೊಸದಾಗಿ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಸಿಎಂ ಆಶಯ:ಎಂಟಿಬಿ ನಾಗರಾಜ್, ಆರ್.ಶಂಕರ್, ಎಚ್.ವಿಶ್ವನಾಥ್, ಮುನಿರತ್ನ ಹಾಗೂ ಪಕ್ಷದ ಇಬ್ಬರಿಗೆ ಅವಕಾಶ ನೀಡಿ ಸಂಪುಟ ವಿಸ್ತರಿಸಿ ಮುಗಿಸುವುದು.
ವರಿಷ್ಠರ ಬಯಕೆ:ಕನಿಷ್ಠ 7-8 ಮಂದಿಯನ್ನು ಹೊಸದಾಗಿ ಸಂಪುಟಕ್ಕೆ ಸೇರ್ಪಡೆ. ಈಗಿರುವ 6 ಖಾಲಿ ಸ್ಥಾನದ ಜತೆ 5-6 ಹಾಲಿ ಸಚಿವರನ್ನು ಕೈಬಿಟ್ಟು ಪುನಾರಚನೆ ಮಾಡುವುದು.
ಉಪಚುನಾವಣೆ ಮುಗಿದ ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ. ಕಾಂಗ್ರೆಸ್ ಮತ್ತು ಜೆಡಿಎಸ್​ಗೆ ದೊಡ್ಡ ಮುಖಭಂಗ ಆಗುತ್ತದೆ. ದೊಡ್ಡ ಅಂತರದಲ್ಲಿ ಎರಡೂ ಕ್ಷೇತ್ರದಲ್ಲಿ ಗೆಲ್ಲುತ್ತೇವೆ.
| ಬಿ.ಎಸ್​.ಯಡಿಯೂರಪ್ಪಸಿಎಂ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 9 =
Remember me
