ಬೆಂಗಳೂರು: ಬಹುನಿರೀಕ್ಷಿತ ಸಚಿವ ಸಂಪುಟ ಪರಿಷ್ಕರಣೆ ಸಂಬಂಧ ಮೂರು ದಿನಗಳಲ್ಲಿ ದೆಹಲಿಗೆ ತೆರಳುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡುವುದರೊಂದಿಗೆ ಪಕ್ಷದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಸಂಪುಟ ಕೇವಲ ವಿಸ್ತರಣೆಯೇ ಅಥವಾ ಪುನಾರಚನೆಯೇ ಎಂಬ ಕುತೂಹಲವೂ ಹೆಚ್ಚಿದ್ದು, ಸಚಿವಾಕಾಂಕ್ಷಿಗಳ ಪಟ್ಟಿಯೂ ಬೆಳೆಯುತ್ತಿದೆ.
ಪಕ್ಷದ ವರಿಷ್ಠರ ಆಹ್ವಾನದ ಮೇರೆಗೆ ಬಿಎಸ್​ವೈ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಲು ವರಿಷ್ಠರು ಬಯಸಿದ್ದರೆ, ವಿಸ್ತರಣೆಯತ್ತ ಬಿಎಸ್​ವೈ ಒಲವಿದೆ. ವಿಸ್ತರಣೆ ಆಗುವುದಿದ್ದರೆ ಸಿಎಂ ಮತ್ತೆ ದೆಹಲಿಗೆ ಹೋಗಬೇಕಾದ ಪ್ರಮೇಯ ಬರುತ್ತಿರಲಿಲ್ಲ ಎಂಬ ಮಾತೂ ಬಲವಾಗಿ ಕೇಳಿಬರುತ್ತಿದೆ. ಅಧಿವೇಶನ ಕೊನೆಗೊಳ್ಳುವ ಹಿಂದಿನ ರಾತ್ರಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರ್ಚಚಿತ ಅಂಶಗಳು, ವರಿಷ್ಠರ ಪ್ರತಿನಿಧಿಯಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಂಡಿದ್ದು ಮೇಜರಿ ಸರ್ಜರಿ ಕಡೆಗೆ ಬೆರಳು ತೋರಿಸುತ್ತಿವೆ.
ಸಚಿವ ಸ್ಥಾನಕ್ಕೆ ಲಾಬಿ ನಡೆಸುತ್ತಿರುವ ಆಕಾಂಕ್ಷಿಗಳ ಸಂಖ್ಯೆ 25ಕ್ಕೂ ಹೆಚ್ಚಿದೆ. ಪುನಾರಚನೆ ಆದಲ್ಲಿ ಅಧಿಕಾರ ಕೈತಪ್ಪಿ ಹೋಗುವ ಆತಂಕ ಹಲವು ಸಚಿವರನ್ನು ಕಾಡಲಾರಂಭಿಸಿದೆ. ಸಚಿವರ ಕಾರ್ಯಸಾಧನೆ ವರದಿಯ ಮೌಲ್ಯಮಾಪನವನ್ನು ದೆಹಲಿ ನಾಯಕರು ಈಗಾಗಲೇ ಪೂರ್ಣಗೊಳಿಸಿದ್ದಾರೆ.ಇದನ್ನೂ ಓದಿ:ಶಾಲೆ ತೆರೆಯಲು ಶುರುವಾಗಿದೆ ಸಿದ್ಧತೆ; ಏನೆಲ್ಲ ನಿಯಮ ಪಾಲನೆಯಾಗಬೇಕು ಎಂದು ಹೇಳಿದ ಶಿಕ್ಷಣ ಇಲಾಖೆ
ಪಕ್ಷದ ರಾಷ್ಟ್ರೀಯಪ್ರಧಾನ ಕಾರ್ಯದರ್ಶಿಯಾಗಿರುವ ಸಿ.ಟಿ. ರವಿ, ಶಶಿಕಲಾ ಜೊಲ್ಲೆ, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ ಸೇರಿ 6-7 ಸಚಿವರನ್ನು ಕೈಬಿಡುವ ಸಾಧ್ಯತೆಗಳಿವೆ. ಸದ್ಯಕ್ಕೆ 6 ಸ್ಥಾನಗಳು ಖಾಲಿಯಿದ್ದು, ಕೈಬಿಡುವವರ ಹೆಸರುಗಳನ್ನು ಪರಿಗಣಿಸಿದರೆ 12 ಜನ ಹೊಸಬರಿಗೆ ಸ್ಥಾನ ಕಲ್ಪಿಸಲು ಅವಕಾಶವಾಗಲಿದೆ. ಆದರೆ 2 ಸ್ಥಾನ ಖಾಲಿ ಉಳಿಸಿಕೊಂಡು, 10 ಹೊಸ ಮುಖಗಳನ್ನು ಸೇರಿಸಿಕೊಳ್ಳುವ ಚಿಂತನೆ ನಡೆದಿದೆ. ಜಾತಿವಾರು ಪ್ರಾತಿನಿಧ್ಯಕ್ಕಿಂತಲೂ ಪ್ರದೇಶ ಹಾಗೂ ಜಿಲ್ಲೆಗೆ ಆದ್ಯತೆ ನೀಡುವುದು, ಸರ್ಕಾರ ಮತ್ತು ಪಕ್ಷ ನೆಲೆಯಲ್ಲಿ ಸಮತೋಲಿತ ಸಂಪುಟ ರಚಿಸುವುದು ದೆಹಲಿ ನಾಯಕರ ಇಚ್ಛೆಯಾಗಿದೆ ಎಂದು ಮೂಲಗಳು ಹೇಳಿವೆ.
ಅಧಿವೇಶನಕ್ಕೆ ಮುನ್ನ ದೆಹಲಿಗೆ ತೆರಳಿದ್ದ ಬಿಎಸ್​ವೈ, ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನು ಭೇಟಿಯಾಗಿದ್ದರು. ಸಂಪುಟ ವಿಸ್ತರಣೆಯ ಪಟ್ಟಿ ಸಲ್ಲಿಸಿ ವಾಪಸಾಗಿದ್ದರು. ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಿಸುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದರು. ವರಿಷ್ಠರ ಸಂದೇಶಕ್ಕಾಗಿ ಕಾಯುತ್ತಿರುವೆ ಎಂದಿದ್ದರು. ಆದರೆ, ವಿಧಾನ ಮಂಡಲದ ಅಧಿವೇಶನ ಮುಗಿಯಿತಾದರೂ ವರಿಷ್ಠರಿಂದ ಯಾವುದೇ ಸಂದೇಶ ಬರಲಿಲ್ಲ.ಇದನ್ನೂ ಓದಿ:ಕೃಷಿಕರಿಗೆ ಅನ್ಯಾಯ ಆಗಲು ಬಿಡಲ್ಲ, ರೈತ ಮುಖಂಡರೇ ಚರ್ಚೆಗೆ ಬನ್ನಿ: ಸಿಎಂ ಯಡಿಯೂರಪ್ಪ
ಸಂಪುಟ ವಿಸ್ತರಣೆಗೆ ಯಾವುದೇ ಸಮಸ್ಯೆ ಇಲ್ಲ. ಇನ್ನು 3 ದಿನದಲ್ಲಿ ದೆಹಲಿಗೆ ಹೋಗು ತ್ತೇನೆ. ಅಲ್ಲಿ ಚರ್ಚೆ ಮಾಡಿ ಬಂದ ಬಳಿಕ ಸಂಪುಟ ವಿಸ್ತರಣೆ ಮಾಡುತ್ತೇನೆ.
| ಬಿ.ಎಸ್.ಯಡಿಯೂರಪ್ಪಸಿಎಂ
ವಾಟ್ಸ್​ಆ್ಯಪ್​ನಿಂದಲೂ ಬ್ಯಾಂಕ್​ ಖಾತೆಗೆ ಕನ್ನ- ಎಸ್​ಬಿಐ ನೀಡಿರುವ ಎಚ್ಚರಿಕೆ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 4 =
Remember me
