ಅಧಿವೇಶನಕ್ಕೆ ಸಜ್ಜು
ಅಧಿವೇಶನ ತಯಾರಿ ಕುರಿತು ಸಚಿವ ಸಹೋದ್ಯೋಗಿಗಳ ಜತೆ ರ್ಚಚಿಸಿರುವೆ. ಸದನದ ಮೂಲಕ ವಾಸ್ತವಾಂಶ ಜನರ ಮುಂದಿಡಲು ಸಜ್ಜಾಗಿದ್ದೇವೆ. ಆಯಾ ಇಲಾಖೆಗಳ ಸಚಿವರಿಗೆ ಏನೆಲ್ಲ ತಯಾರಿ ಮಾಡಿಕೊಳ್ಳಬೇಕೆಂಬ ಮಾರ್ಗದರ್ಶನ ನೀಡಿರುವೆ. ಕರೊನಾ ನಿಯಂತ್ರಣ, ಅತಿವೃಷ್ಟಿ ಹಾಗೂ ನೆರೆ ಪರಿಹಾರ ಕಾರ್ಯಕ್ಕೆ ಕೈಗೊಂಡ ಕ್ರಮಗಳ ಕುರಿತು ಅಂಕಿ-ಅಂಶಗಳ ಸಹಿತ ವಿವರಿಸುತ್ತೇವೆ ಎಂದು ಬಿಎಸ್​ವೈ ಹೇಳಿದರು.
ಬೆಂಗಳೂರು:ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಚಿವ ಪದವಿ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದ್ದಾರೆ. ಮುಂದಿನ ವಾರ ಬಿಎಸ್​ವೈ ನವದೆಹಲಿಗೆ ತೆರಳಿ, ವರಿಷ್ಠರ ಒಪ್ಪಿಗೆ ಪಡೆಯುತ್ತಾರೆ. ವಿಧಾನಮಂಡಲ ಮಳೆಗಾಲದ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಿಸುವರು ಎಂದು ನಿರೀಕ್ಷಿಸಿದವರಿಗೆ ತಣ್ಣೀರು ಎರಚಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿ ಭೇಟಿ ಇನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಅತಿವೃಷ್ಟಿ, ನೆರೆ ಹಾನಿ ಸಮೀಕ್ಷೆಗೆ ಕೇಂದ್ರ ಅಧ್ಯಯನ ತಂಡ 2 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ರಾಜ್ಯದ ಅಧಿಕಾರಿಗಳು ಜತೆಗಿದ್ದಾರೆ. ವಸ್ತುಸ್ಥಿತಿ ಪರಿಶೀಲನೆಗೆ ತೆರಳುವ ಮುನ್ನ ಈ ತಂಡಕ್ಕೆ ಕಳೆದ ವರ್ಷ ಏನಾಗಿತ್ತು, ಈ ವರ್ಷ ಏನಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಈ ತಂಡ ಏನು ವರದಿ ಸಲ್ಲಿಸುತ್ತದೋ ನೋಡೋಣ. ನಂತರ ದೆಹಲಿಗೆ ತೆರಳಿ ವಾಸ್ತವಾಂಶ ಮನವರಿಕೆ ಮಾಡಿಕೊಡುವ ಚಿಂತನೆಯಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ ಎಂದರು.
ರೈಲ್ವೆ ಟಿಕೆಟ್ ಕನ್​ಫರ್ಮ್ ಮಾಡ್ತಾ ಇದ್ದ ‘ರಿಯಲ್ ಮ್ಯಾಂಗೋ’ ಆರ್​ಪಿಎಫ್ ಬಲೆಗೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 9 =
Remember me
