ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ಗೆ ಸಚಿವ ಸ್ಥಾನ ನೀಡುವುದಕ್ಕೆ ಬಿಜೆಪಿಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು, ಪಕ್ಷಕ್ಕೆ ಅವರ ಕೊಡುಗೆ ಏನು ಎಂದು ಶಾಸಕರು ಪ್ರಶ್ನಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಗೆದ್ದ ಶಾಸಕರ ಮೂಲಕ ಯೋಗೇಶ್ವರ್ ಪ್ರಯತ್ನ ಆರಂಭಿಸುತ್ತಿದ್ದಂತೆ ಶಾಸಕರು ಪ್ರತ್ಯೇಕ ಸಭೆ ಸೇರಿ, ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸದಂತೆ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಲು ನಿರ್ಧರಿಸಿದ್ದಾರೆ. ಚುನಾವಣೆಯಲ್ಲಿ ಸೋತ ಯೋಗೇಶ್ವರ್​ಗೆ ಅವಕಾಶ ನೀಡುವುದಾದರೆ, ಗೆದ್ದಿರುವ ನಮಗೆ ಮೊದಲು ಅವಕಾಶ ನೀಡಿ. ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ್ಕೆ ಆಗಿರುವ ಮತ್ತು ಆಗುತ್ತಿರುವ ಅನ್ಯಾಯ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.
ಯೋಗೇಶ್ವರ್ ಸರ್ಕಾರ ರಚನೆ ಸಂದರ್ಭ ತೋರಿಕೆಗಾಗಿ ಓಡಾಡಿದ್ದಾರಷ್ಟೇ. ಕಾಂಗ್ರೆಸ್-ಜೆಡಿಎಸ್ ಶಾಸಕರ ರಾಜೀನಾಮೆಯಲ್ಲಿಯೂ ಅವರ ಪಾತ್ರವೇನೂ ಇಲ್ಲ. ಅವರಿಗೆ ಮಂತ್ರಿ ಸ್ಥಾನ ನೀಡಿದರೆ ಬೇರೆಯವರಿಗೆ ತಪು್ಪ ಸಂದೇಶ ರವಾನೆ ಮಾಡಿದಂತಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶಾಸಕರ ಭವನದಲ್ಲಿ ಸೋಮವಾರ ಸೇಡಂ ಶಾಸಕ ರಾಜ್​ಕುಮಾರ್ ಪಾಟೀಲ್ ತೇಲ್ಕೂರ್ ಕೊಠಡಿಯಲ್ಲಿ ಸಭೆ ಸೇರಿದ್ದ ಮುರುಗೇಶ್ ನಿರಾಣಿ, ಎಂ.ಪಿ.ರೇಣುಕಾಚಾರ್ಯ, ದತ್ತಾತ್ರೇಯ ಪಾಟೀಲ್ ರೇವೂರ್, ಡಾ.ಶಿವರಾಜ್ ಪಾಟೀಲ್, ರಾಜೂಗೌಡ, ಪರಣ್ಣ ಮುನವಳ್ಳಿ, ಸೋತವರಿಗೆ ಅವಕಾಶ ಕೊಡೋದಾದ್ರೆ ವಿಶ್ವನಾಥ್ ಅಥವಾ ಎಂಟಿಬಿ ನಾಗರಾಜ್​ಗೆ ಕೊಡಿ,
ಯೋಗೇಶ್ವರ್​ಗೆ ಬೇಡ. ಯೋಗೇಶ್ವರ್​ಗೆ ಅವಕಾಶ ಕೊಟ್ಟಲ್ಲಿ ಮತ್ತೆ ಅಸಮತೋಲನ ಆಗುವುದಿಲ್ಲವೇ? ಹಾಗಾದರೆ ಸೋತಿರುವ 120 ಜನರನ್ನು ಏನು ಮಾಡ್ತೀರಿ? ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಭೆ ನಿರ್ಧಾರವನ್ನು ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷರಿಗೆ ತಲುಪಿಸಲು ನಿರ್ಧರಿಸಲಾಯಿತು. ಯೋಗೇಶ್ವರ್​ಗೆ ಅವಕಾಶ ಕೊಡಲೇಬೇಕು ಅಂತಾದರೆ ರಾಜ್ಯಸಭೆ ಇದೆ. ವಿಧಾನಪರಿಷತ್ ಇದೆ. ಅಲ್ಲಿ ಅವಕಾಶ ನೀಡಿದರೆ ನಮ್ಮ ತಕರಾರಿಲ್ಲ ಎಂಬ ಅಭಿಮತಕ್ಕೆ ಬರಲಾಯಿತು.
ರಾಜೂಗೌಡ ಆಕ್ರೋಶ:ಸಭೆ ಬಳಿಕ ಮಾತನಾಡಿದ ಸುರಪುರ ಶಾಸಕ ರಾಜೂಗೌಡ, ನಾವು ಯಾವುದೇ ರೆಸಾರ್ಟ್​ನಲ್ಲಿ ಸಭೆ ಮಾಡಿಲ್ಲ. ಶಾಸಕರ ಭವನದಲ್ಲೇ ಸಭೆ ಮಾಡಿದ್ದೇವೆ. ಈಗಾಗಲೇ ಸಿಎಂಗೆ ನಮ್ಮ ಬೇಡಿಕೆ ತಲುಪಿಸಿದ್ದೇವೆ. ಇಲ್ಲಿ ಯಾರೂ ನಾಯಕತ್ವ ವಹಿಸಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಮುಂದುವರಿಯುತ್ತಿದ್ದೇವೆ. ಪ್ರತ್ಯೇಕ ರಾಜ್ಯದ ಕೂಗು ಬಂದಾಗ ಸುಮ್ಮನಿರಿಸುತ್ತೀರಿ. ರಾಜಕೀಯ ಅಧಿಕಾರ ಸಿಗಲ್ಲ ಅಂದ್ರೆ ಹೇಗೆ? ನಾವು ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಅಧಿಕಾರ ಸಿಕ್ಕಿಲ್ಲ ಅಂದ್ರೆ ಕಷ್ಟ ಆಗಲಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಪಕ್ಷ ಬಲವರ್ಧನೆ ಮಾಡಬೇಕಿದೆ. ಅದಕ್ಕಾಗಿ ನಮ್ಮ ಭಾಗಕ್ಕೆ ಸಚಿವ ಸ್ಥಾನ ಕೊಡಿ ಎಂದು ಈ ಹಿಂದೆಯೇ ಸಿಎಂಗೆ ಮನವಿ ಸಲ್ಲಿಸಿದ್ದೇವೆ. ಇವತ್ತು ಕೆಲವರು ಸೇರಿದ್ದೇವೆ, ನಾಳೆಯೂ ಕೆಲವರು ಬರುತ್ತಾರೆ. ಎಲ್ಲರೂ ಸೇರಿ ಚರ್ಚೆ ಮಾಡುತ್ತೇವೆ. 371ಜೆನಲ್ಲಿ ಕೂಡ ರಾಜಕೀಯ ಪ್ರಾತಿನಿಧ್ಯ ಕೊಡಬೇಕು ಅಂತಿದೆ. ಕಲ್ಯಾಣ ಕರ್ನಾಟಕ ಅಂತ ಹೆಸರು ಬದಲಾಯಿಸಿದ ಮಾತ್ರಕ್ಕೆ ನಮ್ಮ ಹಣೆ ಬರಹ ಬದಲಾಗಲ್ಲ. ಇದು ಕೇವಲ ರಾಜೂಗೌಡನ ಧ್ವನಿ ಅಲ್ಲ, ನಮ್ಮ ಎಲ್ಲ ಶಾಸಕರ ಧ್ವನಿ. ನಾವು ಜನರ ಕೈಯಲ್ಲೂ ಬೈಸಿಕೊಳ್ಳಬೇಕು, ಇತ್ತ ಸಿಎಂ ಕಡೆಯಿಂದಲೂ ಏನೂ ಸಿಗುತ್ತಿಲ್ಲ. ನಾವು ಏನೇ ಮಾಡಿದರೂ ಪಕ್ಷದ ಚೌಕಟ್ಟಿನಲ್ಲೇ ಮಾಡುತ್ತೇವೆ. ನಾವು ಯಡಿಯೂರಪ್ಪ ಅವರನ್ನು ಕೇಳದೆ ಇನ್ಯಾರನ್ನು ಕೇಳಬೇಕು ಎಂದು ಪ್ರಶ್ನಿಸಿದರು.
ಗುರುವಾರದೊಳಗೆ ನಾಮಪತ್ರ:ವಿಧಾನಪರಿಷತ್ ಚುನಾವಣೆಗೆ ಪಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಗುರುವಾರದೊಳಗೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 3 =
Remember me
