ಬೆಂಗಳೂರು:ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ನಡೆಯುವ ಬಗ್ಗೆ ಮತ್ತೆ ಚರ್ಚೆಗಳು ಗರಿಗೆದರಿದ್ದು, ಗಣೇಶ ಚತುರ್ಥಿ ಆಸುಪಾಸಿನಲ್ಲಿ ಮುಹೂರ್ತ ಕೂಡಿಬರುವ ಸಾಧ್ಯತೆ ಇದೆ. ಇದೇ ನಿರೀಕ್ಷೆಯಲ್ಲಿ ತೆರೆಮರೆಯಲ್ಲಿ ರಾಜಕೀಯ ಕಸರತ್ತು ಜೋರಾಗಿದೆ. ಸಚಿವಾಕಾಂಕ್ಷಿಗಳು ಶತಾಯಗತಾಯ ಪ್ರಯತ್ನ ನಡೆಸಿದ್ದರೆ, ಕೆಲ ಹಾಲಿ ಸಚಿವರು ತಮ್ಮ ಸ್ಥಾನ ಉಳಿಸಿಕೊಳ್ಳಲು ದೆಹಲಿ ಮಟ್ಟದಲ್ಲಿ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ.
ಸಿಎಂ ಬಿ.ಎಸ್. ಯಡಿಯೂರಪ್ಪ ಇದೇ ತಿಂಗಳು ದೆಹಲಿಗೆ ತೆರಳಿ ಪಕ್ಷದ ನಾಯಕರ ಜತೆ ಚರ್ಚೆ ನಡೆಸಲಿದ್ದಾರೆ. ದೆಹಲಿ ನಾಯಕರ ಭೇಟಿಗೆ ಸಮಯ ನಿಗದಿ ಮಾಡುವ ಪ್ರಕ್ರಿಯೆಯೂ ನಡೆಯುತ್ತಿದೆ. ಸಿಎಂ ದೆಹಲಿ ಯಾತ್ರೆ ಸಂಪುಟ ಸರ್ಜರಿ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷದ ಹೈಕಮಾಂಡ್ ಜತೆ ಸಂವಹನ ಹಾಗೂ ಸಂಪರ್ಕ ಕೊರತೆ ಉಂಟಾದಲ್ಲಿ ತಪ್ಪು ಸಂದೇಶಕ್ಕೆ ಕಾರಣವಾಗಲಿದೆ. ಹೀಗಾಗಿ ವರಿಷ್ಠರ ಜತೆ ನೇರ ಮಾತುಕತೆಗೆ ಸಿಎಂ ನಿರ್ಧರಿಸಿದ್ದಾರೆ. ಇದರಿಂದ ಹೈಕಮಾಂಡ್ ಇಚ್ಛೆ ಏನಿದೆ ಎಂಬುದೂ ತಿಳಿದಂತಾಗುತ್ತದೆ ಎಂಬುದು ಸಿಎಂ ನಿಲುವಾಗಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ, ಆಗಸ್ಟ್ ಅಂತ್ಯದೊಳಗೆ ಸಚಿವ ಸಂಪುಟ ಪುನಾರಚನೆಗೆ ಮೂಹೂರ್ತ ನಿಗದಿಯಾಗುವ ಸಾಧ್ಯತೆಗಳಿವೆ.
ಸಿಎಂ ನಿಲುವೇನು?:ಮೂಲ ಬಿಜೆಪಿಗರಿಗೆ ಅವಕಾಶ ಕೊಟ್ಟು ಎಲ್ಲ 6 ಸ್ಥಾನಗಳನ್ನು ತುಂಬಲು ಬಿಎಸ್​ವೈ ಬಯಸಿದ್ದಾರೆ. ಆದರೆ, ವಾಗ್ದಾನವಿತ್ತಂತೆ ಒಂದಿಬ್ಬರ ಸೇರ್ಪಡೆಗೆ ಮಾತ್ರ ಹೈಕಮಾಂಡ್ ಸಮ್ಮತಿಸಿದೆ. ಹೀಗಾಗಿ ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಸಿಎಂ ಒಲವು ಹಾಗೂ ಹೈಕಮಾಂಡ್ ನಿಲುವು ಹೊಂದಾಣಿಕೆಯಾಗುತ್ತಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರ ಪೈಕಿ ಮುನಿರತ್ನ ಹಾಗೂ ಪ್ರತಾಪಗೌಡ ಪಾಟೀಲ್​ರಿಗೂ ಅವಕಾಶ ಕಲ್ಪಿಸಬೇಕಾಗಿದೆ. ಕೋರ್ಟ್​ನಲ್ಲಿರುವ ವ್ಯಾಜ್ಯ ಬಗೆಹರಿದ ನಂತರವೇ ಇವರಿಬ್ಬರು ಪ್ರತಿನಿಧಿಸುವ ಕ್ಷೇತ್ರಗಳ ಉಪಚುನಾವಣೆಗೆ ರಹದಾರಿ ಸಿಗುತ್ತದೆ. ಉಪಚುನಾವಣೆ ನಡೆದು ಫಲಿತಾಂಶ ಬರುವ ತನಕ ಖಾಲಿ 6 ಸ್ಥಾನಗಳನ್ನು ತುಂಬುವುದು. ನಂತರದ ಪರಿಸ್ಥಿತಿ ನೋಡಿಕೊಂಡು ಮುಂದಿನ ನಡೆ ನಿರ್ಧರಿಸಬಹುದು. ಅಷ್ಟೊತ್ತಿಗೆ ಕರೊನಾ ಸಂಕಷ್ಟ ತಿಳಿಯಾಗಿ ಸಚಿವ ಸಂಪುಟಕ್ಕೆ ಸರ್ಜರಿ ಮಾಡಲು ಕಾಲ ಪಕ್ವವಾಗಿರುತ್ತದೆ ಎನ್ನುವುದು ಸಿಎಂ ಯೋಚನೆಯಾಗಿದೆ ಎಂದು ಮೂಲಗಳು ಹೇಳಿವೆ.
ಹೈಕಮಾಂಡ್ ತೀರ್ಮಾನ ಅಂತಿಮ:ಸಂಪುಟ ಪುನಾರಚನೆಗೆ ಹೈಕಮಾಂಡ್ ಒಲವು ತೋರಿಸುತ್ತಿದೆ. ಐದರಿಂದ ಆರು ಹಿರಿಯ ಸಚಿವರ ಕೈಬಿಟ್ಟು, 10 ಸಚಿವರನ್ನು ಹೊಸದಾಗಿ ಸೇರಿಸಿಕೊಳ್ಳಬೇಕು. ಬಿಜೆಪಿ ಸರ್ಕಾರ ಬರಲು ಕಾರಣರಾದ ವಿಶ್ವನಾಥ್, ಎಂ.ಟಿ.ಬಿ. ನಾಗರಾಜ್ ಹಾಗೂ ಆರ್. ಶಂಕರ್​ಗೆ ಅವಕಾಶ ನೀಡಲು ಹೈಕಮಾಂಡ್ ಒಪು್ಪವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ತಡರಾತ್ರಿ ಸಭೆ?:ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಶುಕ್ರವಾರ ತಡರಾತ್ರಿ ಆಯ್ದ ಸಚಿವರು ಮತ್ತು ಶಾಸಕರೊಂದಿಗೆ ಬಿಎಸ್​ವೈ ಸಭೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಸಿಎಂ ನಿಕಟ ಮೂಲಗಳ ಪ್ರಕಾರ, ಕೆಲವು ದಿನಗಳ ಹಿಂದೆ ಸಚಿವತ್ರಯರು, ಕೆಲವು ಶಾಸಕರ ಜತೆಗೆ ಸಿಎಂ ಔಪಚಾರಿಕವಾಗಿ ಮಾತುಕತೆ ನಡೆಸಿದ್ದಾರೆ. ಆದರೆ, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಯಂತಹ ಗಂಭೀರ ವಿಷಯ ಚರ್ಚೆ ಆಗಿಲ್ಲ.
ಎಂಎಲ್​ಎಗಳ ಜತೆ ರ್ಚಚಿಸಲಿರುವ ಸಿಎಂ:ನಿಗಮ ಮತ್ತು ಮಂಡಳಿ ನೇಮಕದ ನಂತರ ಅಸಮಾಧಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಸಕರೊಂದಿಗೆ ಚರ್ಚೆ ನಡೆಸಲು ಸಿಎಂ ಉದ್ದೇಶಿಸಿದ್ದಾರೆ. ಒಂದೆರಡು ದಿನಗಳಲ್ಲಿ ಬಹುತೇಕ ಎಲ್ಲ ಶಾಸಕರನ್ನು ವೈಯಕ್ತಿಕವಾಗಿ ಕರೆದು ಮಾತನಾಡಲಿದ್ದಾರೆ. ನಿಗಮಗಳನ್ನು ಒಪ್ಪಲು ಸಿದ್ಧರಿಲ್ಲದ ಶಾಸಕರ ಜತೆ ಸಿಎಂ ಯಡಿಯೂರಪ್ಪ ಹಾಗೂ ಪುತ್ರ ವಿಜಯೇಂದ್ರ ಮಾತುಕತೆ ನಡೆಸಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಸಂಪುಟ ಪುನಾರಚನೆಗೆ ಸಂಬಂಧಿಸಿದಂತೆ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅವರ ಉದ್ದೇಶವೆನ್ನಲಾಗಿದೆ.
https://www.vijayavani.net/russia-preparing-mass-vaccination-against-coronavirus-for-october/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + fifteen =
Remember me
