ಬೆಂಗಳೂರು:ಸಚಿವರಾಗಿ ನಿಟ್ಟುಸಿರು ಬಿಟ್ಟವರು ಈಗ ಖಾತೆಗಾಗಿ ಎದುರು ನೋಡುತ್ತಿದ್ದು, ಸೋಮವಾರ ಅವರ ಕುತೂಹಲಕ್ಕೆ ತೆರೆ ಬೀಳಲಿದೆ. ಖುದ್ದು ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ ಸೋಮವಾರ ಖಾತೆ ಹಂಚಿಕೆ ಮಾಡುವುದಾಗಿ ಪ್ರಕಟಿಸಿದ್ದರೂ, ಪ್ರಮುಖ ಖಾತೆಗಳಿಗಾಗಿ ರಾಜಕೀಯ ಲಾಬಿ ಮತ್ತು ಒತ್ತಡ ತಂತ್ರ ಅನುಸರಿಸುವ ಪ್ರಯತ್ನಗಳು ನಡೆದಿವೆ.
ರಮೇಶ್ ಜಾರಕಿಹೊಳಿ ಬ್ರದರ್ಸ್ ಸಿಎಂ ಭೇಟಿ ಮಾಡಿದ್ದು, ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದಾರೆ. ಮತ್ತೊಂದೆಡೆ ಬಿ.ಸಿ.ಪಾಟೀಲ್ ಗೃಹ ಖಾತೆ, ಡಾ.ಸುಧಾಕರ್ ಇಂಧನ, ಭೈರತಿ ಬಸವರಾಜು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಸಾರಿಗೆ ಮತ್ತು ಲೋಕೋಪಯೋಗಿ ಮೇಲೆ ಆನಂದ್​ಸಿಂಗ್ ಹಾಗೂ ಎಸ್.ಟಿ. ಸೋಮಶೇಖರ್ ಕಣ್ಣು ಬಿದ್ದಿದೆ.
ಸಿಎಂ ಯಾವ ಖಾತೆ ನೀಡಿದರೂ ಅದನ್ನು ಬದ್ದತೆಯಿಂದ ನಿಭಾಯಿಸುವೆ ಎಂದು ನಾರಾಯಣಗೌಡ ಹೇಳಿದ್ದರೆ, ಶ್ರೀಮಂತ ಪಾಟೀಲ್ ಕೂಡ ಇದೇ ಹಾದಿ ಹಿಡಿದಿದ್ದಾರೆ. ಯಾರ್ಯಾರಿಗೆ ಯಾವ ಖಾತೆ ನೀಡಬೇಕು ಎನ್ನುವುದರ ಬಗ್ಗೆ ಈಗಾಗಲೇ ನಿರ್ಧಾರಕ್ಕೆ ಬಂದಿರುವ ಸಿಎಂ, ಒಂದು ಸುತ್ತು ಪಕ್ಷದ ವರಿಷ್ಠರು ಮತ್ತು ಮುಖಂಡರ ಜತೆ ಮಾತನಾಡಿ ಸೋಮವಾರ ಅಂತಿಮ ನಿರ್ಣಯಕ್ಕೆ ಬರಲಿದ್ದಾರೆಂದು ಮೂಲಗಳು ತಿಳಿಸಿವೆ.
16 ಸಚಿವರ ಬಳಿ ಇರುವ ಹೆಚ್ಚುವರಿ ಖಾತೆಗಳನ್ನು ವಾಪಸ್ ಪಡೆದುಕೊಂಡು ಈಗ ಹೊಸದಾಗಿ ಸಚಿವರಾಗಿರುವ 10 ಮಂದಿಗೆ ಹಂಚಿಕೆ ಮಾಡಲು ಕ್ರಮ ಕೈಗೊಂಡಿರುವ ಸಿಎಂ, ತಮ್ಮ ಬಳಿ ಇರುವ ಕೆಲ ಖಾತೆಯನ್ನು ಹಂಚಿಕೆ ಮಾಡಲಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಹಿರಿಯ ಸಚಿವರ ಜತೆ ಚರ್ಚೆ: ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಯಡಿಯೂರಪ್ಪ ಶನಿವಾರ ಬೆಂಗಳೂರಿನಲ್ಲಿ ಸಚಿವರಾದ ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಹಾಗೂ ಇತರರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದರು.
ಕುಮಠಳ್ಳಿಗೆ ಸಮಾಧಾನ
ಮಂತ್ರಿ ಸ್ಥಾನ ಸಿಗದೆ ಅಸಮಾಧಾನ ಗೊಂಡಿರುವ ಮಹೇಶ್ ಕುಮಠಳ್ಳಿ ಜತೆ ಯಡಿಯೂರಪ್ಪ ಚರ್ಚೆ ನಡೆಸಿದರು. ಆ ಸಂದರ್ಭ ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಸಹ ಉಪಸ್ಥಿತರಿದ್ದರು. ಕುಮಠಳ್ಳಿ ಇಷ್ಟ ಪಡುವಂತಹ ನಿಗಮ-ಮಂಡಳಿಯಲ್ಲಿ ಅವಕಾಶ ಕಲ್ಪಿಸುವುದಾಗಿ ಸಿಎಂ ಭರವಸೆ ನೀಡಿದರೆಂದು ತಿಳಿದುಬಂದಿದೆ.
ಯಡಿಯೂರಪ್ಪ ಅವರು ಆಲದ ಮರವಿದ್ದಂತೆ. ನಾವೆಲ್ಲ ರೆಂಬೆ ಕೊಂಬೆಗಳಾಗಿ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ವೈಮನಸ್ಸಿಲ್ಲ. ಮುಂದೊಂದು ದಿನ ಎಲ್ಲರಿಗೂ ಒಳ್ಳೆಯ ಅವಕಾಶ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಡಿಸಿಎಂ ಸ್ಥಾನ ಕೊಡಿ ಅಂತ ಕೇಳುವುದಿಲ್ಲ.
| ಶ್ರೀರಾಮುಲು ಸಚಿವ
ಸಿಎಂ ಮೇಲೆ ವಿಶ್ವಾಸವಿದೆ. ನಾನಾಗಲಿ, ಗೋಪಾಲಯ್ಯ ಆಗಲಿ, ಭೈರತಿ ಬಸವರಾಜು ಆಗಲಿ ಇಂಥದ್ದೆ ಖಾತೆ ಬೇಕು ಎಂದು ಡಿಮಾಂಡ್ ಮಾಡಿಲ್ಲ. ಯಾವ ಖಾತೆ ನೀಡಿದರೂ ನಿಭಾಯಿಸುತ್ತೇವೆ.
| ಎಸ್.ಟಿ.ಸೋಮಶೇಖರ್ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + five =
Remember me
