ಬೆಂಗಳೂರು:ಸಚಿವ ಸಂಪುಟ ವಿಸ್ತರಣೆಯ ಪಟ್ಟಿ ಸೋಮವಾರವೇ ಅಂತಿಮವಾಗಲಿದೆ ಎಂಬ ಮಾಹಿತಿ ಜಾಡು ಹಿಡಿದು ಆಕಾಂಕ್ಷಿಗಳ ಸವಾರಿ ಹೊರಟಿದ್ದು, ಮುಖ್ಯಮಂತ್ರಿ ಬಿಎಸ್​ವೈಗೆ ಭೇಟಿಯಾಗಿ ತರಹೇವಾರಿ ಮಾನದಂಡ ಮಂಡಿಸಿ ಮಂತ್ರಿ ಮಾಡಲು ನಿವೇದಿಸಿಕೊಂಡಿದ್ದಾರೆ.
ಸೋತ ಎಂ.ಟಿ.ಬಿ.ನಾಗರಾಜ್, ಸಚಿವ ಸಿ.ಸಿ.ಪಾಟೀಲ್, ಪಕ್ಷ ಮೂಲದ ಆಕಾಂಕ್ಷಿಗಳಾದ ಎಸ್.ಎ.ರಾಮದಾಸ್, ನೆಹರೂ ಓಲೇಕಾರ್, ನೂತನ ಶಾಸಕ ಮಹೇಶ್ ಕುಮಠಳ್ಳಿ ದೌಡಾಯಿಸಿ ಮಂತ್ರಿ ಅಭಿಲಾಷೆ ತೋಡಿಕೊಂಡಿದ್ದಾರೆ.
ರಮೇಶ ಜಾರಕಿಹೊಳಿ ಜತೆಗೆ ಸಿಎಂ ಪ್ರತ್ಯೇಕ ಮಾತುಕತೆ ನಡೆಸಿದ್ದಾರೆ. ಪಕ್ಷ ಮೂಲದ ಸಂಭವನೀಯ ಸಚಿವರ ಯಾದಿಯಲ್ಲಿ ಉಮೇಶ ಕತ್ತಿ, ಹಾಲಪ್ಪ ಆಚಾರ್, ಅರವಿಂದ ಲಿಂಬಾವಳಿ/ ಎಸ್. ಎ.ರಾಮದಾಸ್/ ಸಿ.ಪಿ.ಯೋಗೇಶ್ವರ್ ಹೆಸರುಗಳಿವೆ. ಇವರ ಜತೆಗೆ ಜಿಲ್ಲೆ, ಪ್ರದೇಶ, ಜಾತಿ, ಹಿರಿತನ ಆಧರಿಸಿ ಡಜನ್​ಗೂ ಹೆಚ್ಚು ಪಕ್ಷ ಮೂಲದ ಆಕಾಂಕ್ಷಿಗಳಿದ್ದಾರೆ.
ಈ ಪೈಕಿ ತಿಪ್ಪಾರೆಡ್ಡಿ, ಸುನೀಲ್ ಕುಮಾರ್, ಹಾಲಾಡಿ ಶ್ರೀನಿವಾಸಶೆಟ್ಟಿ, ಅಂಗಾರ, ಕೆ.ಜಿ.ಬೋಪಯ್ಯ, ನರಸಿಂಹ ನಾಯಕ (ರಾಜೂಗೌಡ), ದತ್ತಾತ್ರೇಯ ರೇವೂರ, ಶಿವನಗೌಡ ನಾಯಕ್, ನೆಹರೂ ಓಲೇಕಾರ್, ಪೂರ್ಣಿಮಾ, ಗೂಳಿಹಟ್ಟಿ ಶೇಖರ್ ಸೇರಿ ಹಲವರು ಸಚಿವ ಸ್ಥಾನಕ್ಕಾಗಿ ಪ್ರಬಲ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ. ಜತೆಗೆ ಜಲ ಸಂಪನ್ಮೂಲ, ನಗರಾಭಿವೃದ್ಧಿ, ಗೃಹ, ವೈದ್ಯಕೀಯ, ಬೆಂಗಳೂರು ನಗರಾಭಿವೃದ್ಧಿ ಮುಂತಾದ ಕೆಲವು ಖಾತೆಗಳು ಹಾಗೂ ವಿಧಾನ ಸೌಧದಲ್ಲಿ ನಿರ್ದಿಷ್ಟವಾಗಿ ಇಂಥದ್ದೇ ಕೊಠಡಿಬೇಕೆಂದು ಕೆಲವರು ಪಟ್ಟು ಹಿಡಿದಿದ್ದಾರೆ.
ಭಾವುಕರಾದ ಕುಮಠಳ್ಳಿ
ಸಚಿವ ಸ್ಥಾನದ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲವೆಂಬ ಸುಳಿವು ಪಡೆದ ನೂತನ ಶಾಸಕ ಮಹೇಶ್ ಕುಮಠಳ್ಳಿ ಭಾವುಕರಾಗಿ ಆಪ್ತರ ಬಳಿ ನೋವು ತೋಡಿಕೊಂಡಿದ್ದಾರೆ. ಮಂತ್ರಿ ಮಾಡುತ್ತೇನೆ ಎನ್ನುವ ಭರವಸೆ ಈಡೇರಿಸಬೇಕು, ಪಕ್ಷದ ಕಚೇರಿಯಲ್ಲಿ ಕಸಗೂಡಿಸುವ ಕೆಲಸ ಕೊಟ್ಟರೂ ಮಾಡುವೆ ಎಂದು ಬಿಎಸ್​ವೈ ನಿಕಟವರ್ತಿಯೊಬ್ಬರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಸಿ.ಸಿ.ಪಾಟೀಲ್ ಒತ್ತಡ
ಸಚಿವ ಸಂಪುಟದಿಂದ ಕೈಬಿಡಲಿದ್ದಾರೆ ಎಂಬ ಗುಮಾನಿಯಿಂದ ಬಿಎಸ್​ವೈರನ್ನು ಸಚಿವ ಸಿ.ಸಿ.ಪಾಟೀಲ್ ಭೇಟಿಯಾಗಿ ಸಚಿವ ಸ್ಥಾನದಿಂದ ಕೈಬಿಡಬೇಡಿ ಎಂಬ ಒತ್ತಡ ಹೇರಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
