|ಮೃತ್ಯುಂಜಯ ಕಪಗಲ್ಬೆಂಗಳೂರು
ಕೇಂದ್ರದಲ್ಲಿ ಸಂಪುಟ ಪುನಾರಚನೆ ವೇಳೆ ಪ್ರಧಾನಿ ನರೇಂದ್ರ ಮೋದಿ ಹಲವು ಪ್ರಮುಖ ಸಚಿವರಿಗೆ ಕೊಕ್ ನೀಡಿ, ಹೊಸಬರು ಹಾಗೂ ಯುವ ಮುಖಂಡರಿಗೆ ಸ್ಥಾನ ನೀಡಿದ ಬೆನ್ನಲ್ಲೇ ರಾಜ್ಯದಲ್ಲೂ ಹಲವು ಸಚಿವರು ಹಾಗೂ ಆಕಾಂಕ್ಷಿಗಳಿಗೆ ತಳಮಳ ಶುರುವಾಗಿದೆ. ಕರೊನಾ ಹಿಡಿತದಿಂದ ರಾಜ್ಯ ಹೊರ ಬಂದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದಿಯಾಗಿ ಬಹುತೇಕರು ನಿರಾಳವಾಗಿದ್ದರೆ, ಕೆಲವು ಹಿರಿಯ ಸಚಿವರಿಗೆ ಸ್ಥಾನ ಕೈತಪ್ಪುವ ಆತಂಕ ಶುರುವಾಗಿದೆ. ಕೇಂದ್ರ ಸಂಪುಟದ ರೀತಿಯಲ್ಲೇ ರಾಜ್ಯದಲ್ಲೂ ಕೆಲ ಅಚ್ಚರಿಯ ಬದಲಾವಣೆ ಮಾಡಲು ಪಕ್ಷದ ವರಿಷ್ಠರು ಮುಂದಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದ್ದು, ಸರ್ಕಾರ ಮತ್ತು ಪಕ್ಷದೊಳಗೆ ಹಲವು ಲೆಕ್ಕಾಚಾರಗಳಿಗೆ ಇದು ಎಡೆಮಾಡಿಕೊಟ್ಟಿದೆ.
ಸಚಿವರ ಮೇಲೆ ತೂಗುಗತ್ತಿ:ಕೇಂದ್ರ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಇನ್ನಿತರ ವರಿಷ್ಠರು ಅನುಸರಿಸಿದ ಮಾನದಂಡವನ್ನೇ ರಾಜ್ಯದಲ್ಲೂ ಅನುಸರಿಸಿದರೆ, ಹಲವು ಸಚಿವರ ತಲೆದಂಡವಾಗುವ ಸಾಧ್ಯತೆ ಇದೆ. ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವಡೇಕರ್, ಡಾ. ಹರ್ಷವರ್ಧನ್, ಸದಾನಂದಗೌಡರಂತಹ ಘಟಾನುಘಟಿಗಳನ್ನು ಸಚಿವ ಸಂಪುಟದಿಂದ ಕೈಬಿಡಲಾಗಿದೆ. ಬೆರಳೆಣಿಕೆಯಷ್ಟು ಸಚಿವರ ಹೊರತುಪಡಿಸಿ ಉಳಿದ ಸಚಿವರ ಖಾತೆಗಳಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಗುಜರಾತ್, ಉತ್ತರಪ್ರದೇಶ ಸೇರಿ ಕೆಲವು ರಾಜ್ಯಗಳ ಚುನಾವಣೆ, 2024ರ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಸಂಪುಟಕ್ಕೆ ಹೊಸ ಆಯಾಮ ನೀಡಲಾಗಿದೆ. ರಾಜ್ಯದಲ್ಲೂ ಇಂಥದೇ ಬದಲಾವಣೆ ಆಗಬಹುದು ಎಂಬುದು ಹಲವು ನಾಯಕರ ನಿರೀಕ್ಷೆಯಾಗಿದೆ.
10 ಸಚಿವರ ಸ್ಥಾನಕ್ಕೆ ಕುತ್ತು ಸಾಧ್ಯತೆ:ರಾಜ್ಯದಲ್ಲಿ ಕನಿಷ್ಠ ಹತ್ತು ಸಚಿವರನ್ನು ಕೈ ಬಿಟ್ಟು ಖಾಲಿ ಇರುವ ಎರಡು ಸ್ಥಾನಗಳ ಜತೆಗೆ ಹನ್ನೆರಡು ಜನರನ್ನು ಸಂಪುಟಕ್ಕೆ ಸೇರಿಸುವ ಮೂಲಕ ಪುನಾರಚನೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಹತ್ತು ಜನ ಯಾರು ಎಂಬುದು ಈಗ ಪಕ್ಷ ಹಾಗೂ ಸರ್ಕಾರದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ವರ್ಚಸ್ಸು ವೃದ್ಧಿಯೇ ಕಾರ್ಯಸೂಚಿ:ರಾಜ್ಯ ಸರ್ಕಾರ ಮತ್ತು ಪಕ್ಷದ ವರ್ಚಸ್ಸು ವೃದ್ಧಿ ವರಿಷ್ಠರ ಪ್ರಧಾನ ಕಾರ್ಯಸೂಚಿಯಾಗಿದ್ದು, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಈ ಅಂಶವನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಕಾರ್ಯಸೂಚಿ ಭಾಗವಾಗಿ ಸಂಘಟನಾತ್ಮಕ ಚಟುವಟಿಕೆಗಳು ಚುರುಕುಗೊಂಡಿವೆ. ಇಲಾಖಾವಾರು ‘ಜನಪ್ರಿಯ’ ಕಾರ್ಯಕ್ರಮ ರೂಪಿಸಬೇಕೆಂಬ ಸೂಚನೆಯನ್ನು ಬಹುತೇಕ ಸಚಿವರು ಪಾಲಿಸಿ, ಪಟ್ಟಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಂದಿನ ಹಂತದಲ್ಲಿ ಸಚಿವ ಸಂಪುಟ ಪುನಾರಚನೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ. ಕರೊನಾ ಸೋಂಕು ಪೂರ್ಣ ನಿಯಂತ್ರಣಕ್ಕೆ ಬಂದ ನಂತರ ಈ ಕೆಲಸಕ್ಕೆ ಹಾಕುವ ಮುನ್ಸೂಚನೆ ಇತ್ತು. ಬಿಎಸ್​ವೈ ನೇತೃತ್ವದ ಸರ್ಕಾರ ಇದೇ ಜುಲೈ 26ಕ್ಕೆ ಎರಡು ವರ್ಷ ಪೂರ್ಣಗೊಳಿಸಲಿದ್ದು, ಇದೇ ಸಂದರ್ಭದಲ್ಲಿ ದೆಹಲಿ ನಾಯಕರು ಕಾರ್ಯಾಚರಣೆಗೆ ಇಳಿಯಲಿದ್ದಾರೆ ಎಂದು ರ್ತಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
