ಬೆಂಗಳೂರು: ಪಕ್ಷದಿಂದ ಒಂದು ಕಾಲು ಹೊರಗಿಟ್ಟವರನ್ನು ಹಿಡಿದಿಡಲು ಹಾಗೂ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಬಿಜೆಪಿ ವರಿಷ್ಠರು ಗಮನ ಕೇಂದ್ರೀಕರಿಸಿದ್ದಾರೆ. ಇದೇ ಕಾರಣಕ್ಕೆ ಸಚಿವ ಸಂಪುಟ ಸರ್ಜರಿ ವಿಷಯದಲ್ಲಿ ವಿಳಂಬ ಮಾಡುತ್ತಿದ್ದಾರೆ. ವಿಸ್ತರಣೆಗಿಂತ ಪುನಾರಚನೆಗೆ ಹೆಚ್ಚಿನ ಒಲವು ತೋರಿದ್ದು, ನಾಲ್ಕರಿಂದ ಐದು ಜನರನ್ನು ಕೈಬಿಟ್ಟು, ಖಾಲಿಯಿರುವ ಐದು ಸ್ಥಾನಗಳು ಸೇರಿ ಒಂಭತ್ತು ಹೊಸಬರಿಗೆ ಮಣೆ. ಸಚಿವರ ಖಾತೆಗಳ ಅದಲು ಬದಲು ಮಾಡಿ, ಮೇ ಎರಡನೇ ವಾರದೊಳಗೆ ಈ ಕಸರತ್ತು ಪೂರ್ಣಗೊಳಿಸಲು ವರಿಷ್ಠರು ಯೋಚಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಮೊದಲು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದು, ವಿಧಾನಸಭೆ ಬಜೆಟ್​ ಅಧಿವೇಶನ ಬಳಿಕ ಸಚಿವ ಸಂಪುಟದಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದ್ದರು. ಇದಕ್ಕಾಗಿ ಸಂದ ಪ್ರಮುಖರು ಹಾಗೂ ಹಿರಿಯ ನಾಯಕರು ಸಭೆ ನಡೆಸಿದ್ದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಈ ಪ್ರಸ್ತಾಪ ಮಂಡಿಸಲು ಉತ್ಸುಕರಾಗಿದ್ದರು. ಅಷ್ಟರೊಳಗೆ ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ರವಾನೆಯಾದ ಸಮೀಾ ವರದಿಯಲ್ಲಿ ವಲಸೆ, ಹೊಂದಾಣಿಕೆ ರಾಜಕಾರಣ ಇತ್ಯಾದಿ ಗಮನಸೆಳೆಯುವ ಅಂಶಗಳಿದ್ದವು. ಈ ವರದಿ ಆಧರಿಸಿ ಅಡ್ಡ ತಪಾಸಣೆ ನಡೆಸಿದಾಗ ವೈಯಕ್ತಿಕ ಕಾರಣ, ಭವಿಷ್ಯದ ರಾಜಕೀಯ ಅರಸಿ ಕೆಲವರು ಪದಿಂದ ಹೊರ ಹೋಗಲು ತಯಾರಿ ನಡೆಸಿರುವ ಗೌಪ್ಯ ಮಾಹಿತಿ ದೆಹಲಿ ನಾಯಕರಿಗೆ ತಲುಪಿದ್ದು, ಹೀಗಾಗಿ ಉದ್ದೇಶಿತ ಸರ್ಜರಿ ತಡೆಹಿಡಿದಿದ್ದಾರೆ. ಪ ಬಿಟ್ಟು ಹೋಗುವವರು, ಅಧಿಕಾರಕ್ಕಾಗಿ ಹಂಬಲಿಸುತ್ತಿರುವವರ ಬಗ್ಗೆ ಹಿರಿಯ ನಾಯಕರು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ ಪುನಾರಚನೆ ನಂತರ ತಲೆದೋರುವ ಪರಿಸ್ಥಿತಿ ನಿಭಾವಣೆ, ಮುಂಬರುವ ವಿಧಾನಸಭೆ ಸಾರ್ವತ್ರಿಕ ಚುನಾವಣೆ ಸಮರ್ಥ ನಿರ್ವಹಣೆಗೆ ಮೊದಲ ಪ್ರಾಶಸ ನೀಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮಾಹಿತಿ ತರಿಸಿಕೊಂಡು ಭೂಮಿಕೆ ಸಜ್ಜು:ಸರ್ಕಾರ, ಸಚಿವರ ಕಾರ್ಯವೈಖರಿ, ಆಡಳಿತ ಯಂತ್ರ ಕಾರ್ಯದತೆ, ವಿಧಾನಸಭೆ ೇತ್ರಾವಾರು ಮಾಹಿತಿ ತರಿಸಿಕೊಂಡ ನಂತರ ಚುನಾವಣಾ ಸಂಪುಟಕ್ಕೆ ಭೂಮಿಕೆ ಸಜ್ಜುಗೊಳಿಸಿದ್ದಾರೆ. ಚುನಾವಣೆಗೆ ಮಾರ್ಗದರ್ಶನ, ನೇತೃತ್ವ ಯಾರದ್ದೇ ಇರಲಿ. ರಾಜ್ಯದಲ್ಲಿ ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬೇಕಾದ ರಣತಂತ್ರಹೆಣೆಯುವುದು, ಮೇಲ್ವಿಚಾರಣೆ, ಅಭ್ಯರ್ಥಿಗಳ ಆಯ್ಕೆ ಎಲ್ಲವನ್ನು ವರಿಷ್ಠರು ನೋಡಿಕೊಳ್ಳ ಲಿದ್ದು, ಅನುಷ್ಠಾನ ಮಾತ್ರ ರಾಜ್ಯ ನಾಯಕರ ಹೆಗಲೇರಲಿದೆ ಎಂದು ಮೂಲಗಳು ಹೇಳಿವೆ.
ಅಸ್ಪಷ್ಟ ನಿಲುವು, ಒಲವುಸಚಿವ ಸಂಪುಟ ಪುನಾರಚನೆಗೆ ಹಿರಿಯ ನಾಯಕರ ಒಲವಿದ್ದರೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಿಲುವು ಅಸ್ಪಷ್ಟವಾಗಿದೆ. ಸಿಎಂ ಬದಲಾವಣೆಗೆ ಪಟ್ಟಿ ಮಾಡಿರುವ ನ್ಯೂನತೆಗಳನ್ನು ಸರಿದೂಗಿ ಸಬಲ್ಲ ಸಮರ್ಥರು, ಪರ್ಯಾಯ ನಾಯಕತ್ವದ ತಲಾಷೆ ನಡೆದಿದ್ದು, ಒಮ್ಮತದ ನಾಯಕ ಹೊರ ಹೊಮ್ಮಿಲ್ಲ ಎಂದು ತಿಳಿದಿದೆ. ಅಭಿವೃದ್ಧಿ ಕೆಲಸಗಳು, ಜನಪರ ಯೋಜನೆಗಳಿಗಿಂತ ಬಿಟ್​ಕಾಯಿನ್​, ಪರ್ಸೆಂಟೇಜ್​ ಆರೋಪ, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ, ಪಿಎಸ್​ಐ ನೇಮಕ ಪರೀಾ ಅಕ್ರಮ ಹೀಗೆ ಸರಣಿ ರೂಪದ ಕಹಿ ವಿದ್ಯಮಾನಗಳ ಮಾಹಿತಿ ಪಡೆದ ಮೋದಿ ಅಸಂತುಷ್ಟರಾಗಿದ್ದಾರೆ. ಇದರಿಂದಾಗಿ ಕರ್ನಾಟಕ ರಾಜಕೀಯಕ್ಕೆ ಸಂಬಂಧಿಸಿದ ಪ್ರಸ್ತಾವನೆಗಳ ಬಗ್ಗೆ ಅಳೆದು ಸುರಿದು ನೋಡುತ್ತಿದ್ದು, ಸಂದ ಪ್ರಮುಖರು, ವರಿಷ್ಠರು ಎರಡನೇ ಸುತ್ತಿನ ಸಭೆ ನಡೆಸಿ ಸಲ್ಲಿಸಿದ ಪಟ್ಟಿಗೆ ಇನ್ನೂ ಒಪ್ಪಿಗೆ ನೀಡಿಲ್ಲ ಎಂದು ಮೂಲಗಳು ಮಾಹಿತಿ ನೀಡಿವೆ.
ಯತ್ನಾಳ್​ ವಿರುದ್ಧ ಕ್ರಮಕ್ಕೆ ಚಿಂತನೆಬೆಂಗಳೂರು: ಮುಖ್ಯಮಂತ್ರಿ ಹುದ್ದೆಯೇ 2500 ಕೋಟಿ ರೂ.ಗಳಿಗೆ ಬೀಕರಿಗಿದೆ ಎಂಬ ಆರೋಪ ಮಾಡಿದ್ದ ಹಿರಿಯ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ವಿರುದ್ಧ ಕ್ರಮ ಕೈಗೊಳ್ಳಲು ಬಿಜೆಪಿ ವರಿಷ್ಠರು ನಿರ್ಧರಿಸಿದ್ದಾರೆ. ಯತ್ನಾಳ್​ ಮಾತು ನೇರವಾಗಿ ಬಿಜೆಪಿ ವರಿಷ್ಠರತ್ತ ಬೊಟ್ಟು ಮಾಡುವುದರಿಂದ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಹಿಂದೆ ಸಾಕಷ್ಟು ಬಾರಿ ಯತ್ನಾಳ್​ ಪಕ್ಷದ ನಾಯಕರ ವಿರುದ್ಧ ಮಾತನಾಡಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ವರಿಷ್ಠರಿಗೆ ನೇರವಾಗಿ ತಟ್ಟುವಂತೆ ಆರೋಪ ಮಾಡಿದ್ದಾರೆ. ಆದ್ದರಿಂದಲೇ ಶ್ರೀದಲ್ಲಿ ಯತ್ನಾಳ್​ ಅವರನ್ನು ನವದೆಹಲಿಗೆ ಕರೆಸಿಕೊಂಡು ಮಾಹಿತಿ ಪಡೆದು ಶಿಸ್ತುಕ್ರಮ ಕೈಗೊಳ್ಳುತ್ತಾರೆಂದು ಪಕ್ಷದ ಮೂಲಗಳು ತಿಳಿಸಿವೆ.
| ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ
ಬಿಜೆಪಿ ಹೊಸ್ತಿಲಲ್ಲಿ ಕೈ, ದಳ ಶಾಸಕರುಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವ ಮತ್ತು ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಬಿಜೆಪಿ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವುದು ಖಾತರಿಯಾಗಿರುವುದರಿಂದ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಗಳ ಅತಿ ಹೆಚ್ಚು ಶಾಸಕರು ಪಕ್ಷದ ಬಾಗಿಲು ತಟ್ಟುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ತಿಳಿಸಿದ್ದಾರೆ. ಮಲ್ಲೆಶ್ವರದ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಭಾನುವಾರ ಬಿಜೆಪಿ ಯುವ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಯಾರನ್ನು ಪಕ್ಕೆ ತೆಗೆದುಕೊಳ್ಳಬೇಕು ಎಂದು ಪಟ್ಟಿ ಮಾಡಲು ಪುರುಸೊತ್ತಿಲ್ಲದಷ್ಟು ಮುಖಂಡರು ನಮ್ಮ ಪ ಸೇರಲು ಮುಂದಾಗಿದ್ದಾರೆ ಎಂದರು. ಸಿದ್ದರಾಮಯ್ಯ ಸರ್ಕಾರದಲ್ಲಿ ನಡೆದಷ್ಟು ಭ್ರಷ್ಟಾಚಾರ ಬೇರೆ ಸರ್ಕಾರದಲ್ಲಿ ನಡೆದಿಲ್ಲ. ಸಾಮಾನ್ಯರಾಗಿ ರಾಜಕಾರಣಕ್ಕೆ ಬಂದ ಪ್ರಿಯಾಂಕ್​ ರ್ಖಗೆ ಕುಟುಂಬ ಸಾವಿರಾರು ಕೋಟಿಯ ಧನಿಕರಾದುದು ಎಲ್ಲಿಂದ? ಪ್ರಿಯಾಂಕ್​ ಸುಳ್ಳನ್ನೇ ಹೇಳುತ್ತಾರೆ. ಅವರು ದಾಖಲೆಗಳನ್ನು ಕೊಡಬೇಕು ಎಂದು ಆಗ್ರಹಿಸಿದರು.
| ಪ್ರತಾಪ್​ ಸಿಂಹ ಸಂಸದ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × four =
Remember me
