ಬೆಂಗಳೂರು:ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಬೇಕು, ಬಿಡಬೇಕು ಎನ್ನುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಸಂಪುಟ ವಿಸ್ತರಣೆ ಅಥವಾ ಪುನಾರಚನೆ ವಿಷಯದಲ್ಲಿ ಮುಖ್ಯಮಂತ್ರಿಯದೇ ಪರಮಾಧಿಕಾರ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಪುನರುಚ್ಚರಿಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯದಮವರಿಗೆ ಶನಿವಾರ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಅದೇನಿದ್ದರೂ ಕಾಂಗ್ರೆಸ್​ನಲ್ಲಿದೆ, ಸದಾ ಗೊಂದಲದಲ್ಲಿ ಆ ಪಕ್ಷ ಮುಳುಗಿರುತ್ತದೆ ಎಂದರು. ‘ವರಿಷ್ಠರ ಒಪ್ಪಿಗೆಯಂತೆ ಮುಂದಿನ ನಡೆ ಎಂದು ಸಿಎಂ ಹೇಳುತ್ತಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ನಿಮ್ಮ (ಮಾಧ್ಯಮದವರು) ಪ್ರಶ್ನೆ ಬದಲಾಗುವ ತನಕ ನನ್ನ ಉತ್ತರದಲ್ಲೂ ಬದಲಾವಣೆಯಾಗದು ಎಂದು ಸಿಂಗ್ ನುಣುಚಿಕೊಂಡರು.
ದೆಹಲಿಯಲ್ಲೇ ಫೈನಲ್:ಕೋರ್ ಕಮಿಟಿ ಸಭೆಯಲ್ಲಿ ವಿಧಾನಪರಿಷತ್, ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳ ಹೆಸರುಗಳ ಬಗ್ಗೆ ರ್ಚಚಿಸಿ ಶಿಫಾರಸು ಮಾಡಲಾಗಿದೆ. ಅಲ್ಲದೆ, ಚುನಾವಣಾ ಕಾರ್ಯತಂತ್ರ, ಸಂಘಟನಾತ್ಮಕ ಚಟುವಟಿಕೆಗಳ ಬಗ್ಗೆಯೂ ಚರ್ಚೆಯಾಗಿದೆ ಎಂದ ಅರುಣ್ ಸಿಂಗ್, ಕೋರ್ ಕಮಿಟಿ ಶಿಫಾರಸು ಮಾಡಿದರೂ ಪಕ್ಷದ ಕೇಂದ್ರ ಚುನಾವಣೆ ಸಮಿತಿ ನಿರ್ಧಾರವೇ ಅಂತಿಮ ಎನ್ನುವ ಮೂಲಕ ದೆಹಲಿಯಲ್ಲೇ ಫೈನಲ್ ಎಂಬ ಸುಳಿವು ನೀಡಿದರು.
ಈ ಹಿಂದೆ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ಮತ್ತು ನೇಮಕಕ್ಕೆ ಕೋರ್ ಕಮಿಟಿ ಶಿಫಾರಸು ಮಾಡಿದ ಪಟ್ಟಿಯನ್ನು ವರಿಷ್ಠರು ಬದಿಗಿಟ್ಟು ಅಚ್ಚರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದರು. ರಾಜ್ಯಸಭೆಗೆ ಈರಣ್ಣ ಕಡಾಡಿ, ಅಶೋಕ್ ಗಸ್ತಿ ಆಯ್ಕೆಯಾಗಿದ್ದರು. ಕರೊನಾ ಕಾರಣಕ್ಕೆ ಗಸ್ತಿ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ನಾರಾಯಣ ಹೆಸರನ್ನು ವರಿಷ್ಠರು ಅಂತಿಮಗೊಳಿಸಿದ್ದರು. ಪರಿಷತ್​ಗೆ ಶಾಂತಾರಾಮ ಬುಡ್ನಿಸಿದ್ಧಿ, ಸಾಬಣ್ಣ ತಳವಾರ, ಪ್ರತಾಪಸಿಂಹ ನಾಯಕ ನೇಮಕ ಕೂಡ ವರಿಷ್ಠರದೇ ಆಗಿತ್ತು. ಇದೀಗ ವಿಧಾನಸಭೆಯಿಂದ ರಾಜ್ಯಸಭೆ ಮತ್ತು ವಿಧಾನ ಪರಿಷತ್​ಗೆ ನಡೆಯುವ ಚುನಾವಣೆಗೂ ಅಭ್ಯರ್ಥಿ ಗಳ ಪಟ್ಟಿ ದೆಹಲಿಯಲ್ಲೇ ಫೈನಲ್ ಆಗುವುದು ನಿಚ್ಚಳ.
ಕೋರ್ ಕಮಿಟಿ ಸಭೆಗೆ ಮುನ್ನ ಪಕ್ಷದ ರಾಜ್ಯ ಕಚೇರಿಯಲ್ಲಿ ಅರುಣ್ ಸಿಂಗ್ ಕೆಲವು ಸಂಘಟನಾ ಸಭೆಗಳನ್ನು ನಡೆಸಿ, ಕಾರ್ಯವೈಖರಿ ಜಾಲಾಡಿದ್ದಾರೆ. ಸರ್ಕಾರದ ಮೇಲೆ ಪ್ರತಿಪಕ್ಷಗಳು ನಡೆಸುವ ದಾಳಿಗೆ ಪ್ರತಿದಾಳಿ ದುರ್ಬಲವಾಗಿದೆ. ಸಚಿವರು ಹಾಗೂ ಪದಾಧಿಕಾರಿಗಳು ಸ್ಪಷ್ಟೀಕರಣ ನೀಡುವುದಕ್ಕೆ ಸೀಮಿತರಾಗಿದ್ದಾರೆ ಎಂಬ ಅಸಮಾಧಾನ ಹೊರ ಹಾಕಿದ್ದಾರೆ. ಆಕ್ರಮಣಕಾರಿ ಶೈಲಿಯಲ್ಲಿ ರೂಢಿಸಿಕೊಳ್ಳದಿದ್ದರೆ ತಪು್ಪ ಮಾಡದಿದ್ದರೂ ಜನರ ಮುಂದೆ ‘ಅಪರಾಧಿ’ ಸ್ಥಾನದಲ್ಲಿ ನಿಲ್ಲುವ ಪರಿಸ್ಥಿತಿ ನೀವೇ ಸೃಷ್ಟಿಸಿದಂತಾಗಲಿದೆ ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ. ಆರೋಪ-ಟೀಕೆಗಳಿಗೆ ತಕ್ಷಣವೇ ಪ್ರತ್ಯುತ್ತರ ನೀಡುವ ಜತೆಗೆ ಜನರು ಒಪು್ಪವ ರೀತಿಯಲ್ಲಿ ಹೇಳಿಕೆ ನೀಡಬೇಕು. ಪೂರ್ವಾಪರ ಮಾಹಿತಿ, ಒಂದಿಷ್ಟು ಅಧ್ಯಯನ, ಪ್ರತಿಪಕ್ಷಗಳ ಹಿಂದಿನ ನಿರ್ಧಾರಗಳ ಮಾಹಿತಿ ಸಹಿತ ಮುಗಿಬೀಳುವುದರಲ್ಲಿ ಹಿಂದೆ ಬಿದ್ದಿದ್ದೀರಿ ಎಂದು ಎತ್ತಿ ತೋರಿಸಿದ್ದಾರೆ. ಸಮರ್ಥವಾಗಿ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದಿದ್ದರೆ ಬಿಟ್ಟು ಹೊರಡಿ. ಮುಂಬರುವ ಚುನಾವಣೆಗೆ ಬೇಕಾದ ತಂಡವನ್ನು ಸಜ್ಜುಗೊಳಿಸಲು ಪಕ್ಷ ಸಮರ್ಥವಾಗಿದೆ ಎಂದು ಅರುಣ್ ಸಿಂಗ್ ನಿಷ್ಠೂರವಾಗಿಯೇ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಪರಿಷತ್ ಮತ್ತು ರಾಜ್ಯಸಭೆಗೆ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಿದ್ದು, ಕೇಂದ್ರದ ನಾಯಕರಿಗೆ ಪಟ್ಟಿ ಕಳಿಸಿಕೊಡಲಾಗುವುದು. 1:5 ಅನುಪಾತವನ್ನು ಅನುಸರಿಸಲು ಸೂಚನೆಯಿದೆ. ಹಿಂದುಳಿದ ವರ್ಗದವರಿಗೆ ಮತ್ತು ಪಕ್ಷಕ್ಕಾಗಿ ದುಡಿದವರ ಹೆಸರನ್ನು ಪರಿಗಣಿಸಲಾಗುತ್ತಿದೆ.
|ಆರ್.ಅಶೋಕ್ಸಚಿವ
ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ರಾಜಕೀಯ ಮೀಸಲಿಗೆ ಕಾಂಗ್ರೆಸ್ ನಿಂದಲೇ ಕುತ್ತು ಬಂದಿದೆ. ಸರ್ಕಾರದ ನಡೆಯಿಂದ ಹಿಂದುಳಿದ ವರ್ಗಗಳಿಗೆ ಮೀಸಲು ತಪ್ಪುತ್ತಿದೆ ಎಂಬ ಸಿದ್ದರಾಮಯ್ಯ ಆರೋಪ ಶುದ್ಧ ಸುಳ್ಳು, ನಿರಾಧಾರ.
|ಸಿ.ಟಿ.ರವಿಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಬೆಂಗಳೂರು:ಸ್ವಿಟ್ಜರ್ಲೆಂಡ್​ನ ದಾವೋಸ್​ನಲ್ಲಿ ಮೇ 21ರಿಂದ 26ರವರೆಗೆ ನಡೆಯಲಿರುವ ವಿಶ್ವ ಆರ್ಥಿಕ ಶೃಂಗಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳುವುದು ಖಚಿತವಾಗಿದೆ. ದಾವೋಸ್ ಶೃಂಗಕ್ಕೆ ಕರ್ನಾಟಕ ಹಾಗೂ ತೆಲಂಗಾಣ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿದ್ದು, ಮೇ 21ರ ರಾತ್ರಿ ದಾವೋಸ್​ಗೆ ತೆರಳಿ 26ಕ್ಕೆ ಮರಳುವ ಬೊಮ್ಮಾಯಿ ಪ್ರವಾಸಪಟ್ಟಿಯು ದೆಹಲಿಗೆ ರವಾನೆಯಾಗಿದೆ. ಸದ್ಯಕ್ಕೆ ಸಿದ್ಧಪಡಿಸಿರುವ ಪ್ರವಾಸದ ವೇಳಾಪಟ್ಟಿಗೆ ವರಿಷ್ಠರು ಅಸ್ತು ಎನ್ನುವುದು ಬಾಕಿ ಇದೆ. ಆರ್ಥಿಕ ಶೃಂಗ ಸಭೆಯಲ್ಲಿ ಮೇ 23ರಂದು ಬೊಮ್ಮಾಯಿ ಭಾಷಣ ಮಾಡಲಿದ್ದಾರೆ. ನಂತರದ ಎರಡು ದಿನ ವಿವಿಧ ಉದ್ಯಮಿಗಳ ಜತೆಗೆ ಚರ್ಚೆ, ಕರ್ನಾಟಕದಲ್ಲಿ ಹೂಡಿಕೆ ಮತ್ತು ಉದ್ಯಮಸ್ನೇಹಿ ವಾತಾವರಣ ಹಾಗೂ ನೀತಿಗಳ ಕುರಿತು ಮನವರಿಕೆ ಮಾಡಿಕೊಡಲು ಸಜ್ಜಾಗಿದ್ದಾರೆ. ಬಿಜೆಪಿ ಆಂತರಿಕ ಬೆಳವಣಿಗೆ ಕಾರಣಕ್ಕೆ ಶುಕ್ರವಾರದವರೆಗೂ ಬೊಮ್ಮಾಯಿ ದಾವೋಸ್ ಪ್ರವಾಸ ಅನಿಶ್ಚಿತ ಸ್ಥಿತಿಯಲ್ಲಿತ್ತು. ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿದೆ ಎಂದು ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ದಾವೋಸ್ ಪ್ರವಾಸಕ್ಕೆ ರಾಜಕೀಯವಾಗಿ ಬೊಮ್ಮಾಯಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ದೆಹಲಿ ನಾಯಕರು ಒಪ್ಪಿಗೆ ನೀಡುವ ಸಾಧ್ಯತೆಗಳಿವೆ.
ಆಸಿಡ್ ದಾಳಿ ಸಂತ್ರಸ್ತರ ಬೇಡಿಕೆಗೆ ಶುಕ್ರವಾರ ಸ್ಪಂದಿಸಿ ರಾಜ್ಯದ ಗಮನ ಸೆಳೆದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶನಿವಾರ ಅಂಗವಿಕಲರೊಬ್ಬರ ಬೇಡಿಕೆಗೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ. ಬಿಜೆಪಿ ಕೋರ್ ಕಮಿಟಿ ಸಭೆ ನಂತರ ಹೊರಗೆ ಬಂದ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಕೊಪ್ಪಳ ಜಿಲ್ಲೆಯ ಕನಕಗಿರಿ ಕ್ಷೇತ್ರದ ಅಡವಿಬಾವಿ ಗ್ರಾಮದ ಶಿವಪ್ಪ ಎಂಬ ವಿಕಲಚೇತನ ಯುವಕ, ತನ್ನ ತ್ರಿಚಕ್ರ ವಾಹನ ಅಪಘಾತಕ್ಕೆ ಈಡಾಗಿದ್ದು, ಹೊಸ ತ್ರಿಚಕ್ರ ವಾಹನದ ಅವಶ್ಯಕತೆ ಇದೆ ಎಂದು ಮನವಿ ಮಾಡಿದರು. ತಕ್ಷಣವೇ ಸ್ಪಂದಿಸಿದ ಬೊಮ್ಮಾಯಿ, ಕೊಪ್ಪಳ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ, ಶಿವಪ್ಪಗೆ ಕೂಡಲೇ ತ್ರಿಚಕ್ರ ವಾಹನದ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
