ಕುಣಿಗಲ್:ಕರ್ತವ್ಯ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ನರ್ಸ್​ವೊಬ್ಬರು ಮಾರ್ಗಮಧ್ಯೆ ದುರಂತ ಅಂತ್ಯ ಕಂಡ ಘಟನೆ ಶುಕ್ರವಾರ ಸಂಜೆ ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿಯ ಇಪ್ಪಾಡಿ ಗ್ರಾಮದ ಬಳಿ ಸಂಭವಿಸಿದೆ.
ಲಕ್ಷ್ಮೀಬಾಯಿ ಜಾದವ್(36) ಮೃತ ದುರ್ದೈವಿ. ಇಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ನರ್ಸ್ ಆಗಿ ಕೆಲಸ ಮಾಡುತ್ತಿದ್ದಳು. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲ್ಲೂಕಿನ ಚಿಂಚಲಕಟ್ಟೆ ಮೂಲದ ಲಕ್ಷ್ಮೀಬಾಯಿ ಜಾದವ್ ಅವರು ಅಂಗವಿಕಲೆ. ಕಡುಬಡತನದಿಂದ ಬಂದ ಲಕ್ಷ್ಮೀಬಾಯಿ ಅವರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಹಲವು ಸಮಸ್ಯೆಗಳನ್ನ ಮೆಟ್ಟಿನಿಂತು ವಿದ್ಯಾಭ್ಯಾಸ ಮಾಡಿದ್ದರು. 2016ರ ಡಿಸೆಂಬರ್ನಲ್ಲಿ ನರ್ಸ್ ಆಗಿ ಇಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯಕ್ಕೆ ಸೇರಿದ್ದರು.
ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರುತ್ತಿದ್ದ ಇಪ್ಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರೊಂದಿಗೆ ಆತ್ಮೀಯವಾಗಿ ನಡೆದುಕೊಳ್ಳುತ್ತಲೇ ಅಚ್ಚುಕಟ್ಟಾಗಿ ಕರ್ತವ್ಯನಿರ್ವಹಿಸುತ್ತಾ ಮೆಚ್ಚುಗೆಗೆ ಪಾತ್ರವಾಗಿದ್ದರು ನರ್ಸ್ ಲಕ್ಷ್ಮೀಬಾಯಿ.
ಪ್ರಾಣಕ್ಕೆ ಕಂಠಕವಾಯ್ತು ಕೇಬಲ್ ವೈರ್:ಕುಣಿಗಲ್ ಪಟ್ಟಣದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಲಕ್ಷ್ಮೀಬಾಯಿ ಅವರು ಡ್ಯೂಟಿ ಮುಗಿಸಿ ಇಪ್ಪಾಡಿಯಿಂದ ಮನೆಗೆ ಹೊರಟಿದ್ದರು. ಅದೇ ವೇಳೆ ಬೈಕ್ನಲ್ಲಿ ತೆರಳುತ್ತಿದ್ದ ಇಪ್ಪಾಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಮುಖ್ಯಶಿಕ್ಷಕ ಲಕ್ಷ್ಮಣ್ ಅವರ ಬೈಕ್ ಹತ್ತಿದ ಲಕ್ಷ್ಮೀಬಾಯಿ ಅವರು ಹಿಂಬದಿಯಲ್ಲಿ ಕುಳಿತಿದ್ದರು. ದಾರಿ ಮಧ್ಯೆ ಯಮರೂಪಿಯಾಗಿ ಅಪ್ಪಳಿಸಿದ ಕೇಬಲ್ ವೈರ್ ನರ್ಸ್ನ ಪ್ರಾಣವನ್ನೇ ಬಲಿ ಪಡೆದಿದೆ. ರಸ್ತೆಬದಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ಕೇಬಲ್ ವೈಯರ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ತುಂಡಾಗಿ ಬೈಕ್ನಲ್ಲಿ ಹೋಗುತ್ತಿದ್ದ ಮುಖ್ಯಶಿಕ್ಷಕರ ಮೇಲೆ ಬಿದ್ದಿದೆ. ಸವಾರನ ನಿಯಂತ್ರಣ ತಪ್ಪಿದ ಬೈಕ್ನಿಂದ ಕೆಳಗೆ ಬಿದ್ದ ನರ್ಸ್ ಲಕ್ಷ್ಮೀಬಾಯಿ ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮುಖ್ಯಶಿಕ್ಷಕರ ಕುತ್ತಿಗೆಗೆ ಗಾಯವಾಗಿದದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇತ್ತೀಚಿಗೆ ಲಕ್ಷ್ಮೀಬಾಯಿ ಅವರಿಗೆ ಮದುವೆ ಕೂಡ ನಿಶ್ಚಿತವಾಗಿತ್ತು. ಇನ್ನೇನು ಹಸೆಮಣೆ ಏರಿ ದಾಂಪತ್ಯಕ್ಕೆ ಕಾಲಿಡಬೇಕಿದ್ದ ಮಗಳು ಬಾರದ ಲೋಕಕ್ಕೆ ಹೋಗಿದ್ದಾಳೆ ಎಂಬ ಸುದ್ದಿ ಕೇಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − four =
Remember me
