ನಗರ ಪ್ರದೇಶಗಳಲ್ಲಿ ಆಹಾರ ಸಿಗದೆ ಪರದಾಡುವ ಬೀದಿನಾಯಿಗಳು, ಬಿಡಾಡಿ ಹಸುಗಳೆಂದರೆ ತಿರಸ್ಕಾರ ಅಸಹನೆ ವ್ಯಕ್ತಪಡಿಸುವವರ ಮಡುವೆ ಮೂಕಪ್ರಾಣಿಗಳಿಗಾಗಿ ಮಿಡಿಯುವವರು ವಿರಳ. ಬೆಳಗಾವಿಯ ಗಲ್ಲಿ-ಗಲ್ಲಿಗಳಲ್ಲಿ ಅಸಹಾಯಕತೆಯಿಂದ ಅಡ್ಡಾಡುವಂತಹ ಇಂಥ ಬೀದಿ ನಾಯಿಗಳು, ಬಿಡಾಡಿ ದನಗಳ ಪಾಲಿಗೆ ಮಾತೆಯಂತೆ ಮಮತೆ ತೋರಿಸುತ್ತಿರವವರು ಟಿಳಕವಾಡಿಯ ಲಕ್ಷ್ಮೀ ಕುಂಚೂರ. ಅವರ ಸೇವಾ ಮನೋಭಾವಕ್ಕೆ ಕ್ಯಾಡ್​ಬರಿ ಡೈರಿ ಮಿಲ್ಕ್​ ಧನ್ಯವಾದ ಅರ್ಪಿಸುತ್ತದೆ.
ನಗರ ಪ್ರದೇಶಗಳಲ್ಲಿ ಬೀದಿನಾಯಿಗಳು ಹಾಗೂ ಬೀಡಾಡಿ ದನಗಳೆಂದರೆ ಜನರಿಗೆ ಒಂದು ಬಗೆಯ ಅಸಹನೆ, ತಿರಸ್ಕಾರ ಹಾಗೂ ದ್ವೇಷ. ಪಾದಾಚಾರಿಗಳು ಹಾಗೂ ದ್ವಿಚಕ್ರವಾಹನ ಸವಾರರಿಗೆ ನಾಯಿಗಳು ಅಟ್ಟಿಸಿಕೊಂಡು ಬರುತ್ತವೆ ಎಂಬ ಭೀತಿಯಾದರೆ, ದನಗಳು ರಸ್ತೆ ಸಂಚಾರಕ್ಕೆ ಅಡಚಣೆಯಾಗುತ್ತವೆ ಎಂಬ ಕಿರಿಕಿರಿ. ಆದರೆ, ಆಹಾರ ಸಿಗದೆ, ಹಸಿವಿನಿಂದ ಪರದಾಡುತ್ತ ಬೀದಿಯಿಂದ ಬೀದಿಗೆ ಅಲೆಯುವ ಈ ಮೂಕ ಪ್ರಾಣಿಗಳ ಬಗ್ಗೆ ಅನುಕಂಪ ತೋರಿ ಮಾನವೀಯತೆಯಿಂದ ವರ್ತಿಸುವವರು ಬಹಳ ಕಡಿಮೆ. ಅಂಥ ವಿರಳ ವ್ಯಕ್ತಿಗಳ ಸಾಲಿಗೆ ಸೇರುವವರು ಬೆಳಗಾವಿಯ ಟಿಳಕವಾಡಿಯ ಲಕ್ಷ್ಮೀ ಕುಂಚೂರ.
ಬಾಲ್ಯದಿಂದಲೂ ಪ್ರಾಣಿ-ಪ್ರೀತಿ ಬೆಳೆಸಿಕೊಂಡು ಮೂಕಪ್ರಾಣಿಗಳ ಸೇವೆಯಲ್ಲೇ ಬದುಕಿನ ಸಾರ್ಥಕತೆ ಕಾಣುತ್ತಿರುವವರು ಲಕ್ಷ್ಮೀ. ಬೀದಿಬೀದಿಗಳಲ್ಲಿರುವ ನಾಯಿ, ದನಕರುಗಳಿಗೆ ಆಹಾರ ನೀಡುವ ಕಾರ್ಯವನ್ನು ಅವರು ಒಂದು ತಪಸ್ಸಿನಿಂತೆ ನಡೆಸಿಕೊಂಡು ಬರುತ್ತಿದ್ದಾರೆ. ಬೆಳಗಾವಿಯ ಗೋವಾವೇಸ್​, ಆರ್​ಪಿಡಿ ಕಾಲೇಜು, ಮಚ್ಛೆ ಪೀರನವಾಡಿ, ವಾಘವಾಡೆ ರಸ್ತೆಯಲ್ಲಿನ 300ಕ್ಕೂ ಅಧಿಕ ಬೀದಿನಾಯಿಗಳು, ಬೀಡಾಡಿ ದನಗಳಿಗೆ ಅವರು ನಿತ್ಯವೂ ಆಹಾರ, ಬಿಸ್ಕತ್ತು ನೀಡಿ ಮಾನವೀಯತೆ ಮೆರೆಯುತ್ತಾ ಬಂದಿದ್ದಾರೆ. ಮಳೆ ಬರಲಿ, ಬೇಸಿಗೆ-ಚಳಿ ಇರಲಿ ಲಕ್ಷ್ಮೀ ನಿತ್ಯದ ದಿನಚರಿ ಮಾತ್ರ ಬದಲಾಗುವುದಿಲ್ಲ ಎಂದು ನಗರವಾಸಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಮಹಾನಗರದಲ್ಲಿ ಬೀದಿನಾಯಿಗಳು ಅಪಘಾತಕ್ಕೀಡಾಗಿ ಗಾಯಗೊಂಡರೆ ತಕ್ಷಣವೇ ಅವುಗಳನ್ನು ಪಶು ವೈದ್ಯಕೀಯ ಆಸ್ಪತ್ರಗೆ ಕರೆದೊಯ್ದು ತಮ್ಮ ಸ್ವಂತ ಹಣದಲ್ಲೇ ಲಕ್ಷ್ಮೀ ಕುಂಚೂರ ಚಿಕಿತ್ಸೆ ಕೊಡಿಸುತ್ತಾರೆ. ಅಲ್ಲದೆ, ಈ ನಾಯಿಗಳು ಗುಣಮುಖವಾಗುವವರೆಗೆ ಅವುಗಳ ಲಾಲನೆ-ಪಾಲನೆಯನ್ನೂ ಮಾಡುತ್ತಾರೆ.
ನನಗೆ ಬಾಲ್ಯದಿಂದಲೂ ನಾಯಿ, ಬೆಕ್ಕುಗಳನ್ನು ಕಂಡರೆ ಬಲು ಪ್ರೀತಿ. ಯಾವುದಾದರೂ ಪ್ರಾಣಿ ವಾಹನಗಳಡಿ ಸಿಲುಕಿ ನರಳುತ್ತಿದ್ದರೆ, ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದೆ. ಈ ಸೇವೆಯಲ್ಲೇ ನೆಮ್ಮದಿ ಕಂಡಿದ್ದೆ. ಇತ್ತೀಚಿನ ವರ್ಷಗಳಲ್ಲಿ ನಗರ ವ್ಯಾಪ್ತಿಯಲ್ಲಿ ಪ್ರಾಣಿಗಳು ಅಪಘಾತಕ್ಕೀಡಾಗುವ ಸಂಕ್ಯೆ ಹೆಚ್ಚಾಗುತ್ತಿರುವುದು ಮನಸ್ಸಿಗೆ ಬೇಸರ ತಂದಿತು. ಹಾಗಾಗಿ, ಇಂಥ ಪ್ರಾಣಿಗಳಿಗೆ ನೆರವಾಗಲೆಂದು ನಾಲ್ಕೈದು ವರ್ಷಗಳ ಹಿಂದೆ ಬೆಳಗಾವಿ ತಾಲೂಕಿನ ವಾಘಡೆಯಲ್ಲಿ 1 ಎಕರೆ ಜಾಗದಲ್ಲೇ ಶೆಡ್​ ನಿರ್ಮಿಸಿದ್ದೇನೆ. ಅಲ್ಲಿಯೇ ಹತ್ತಾರು ಪ್ರಾಣಿಗಳಿಗೆ ಆಹಾರ ಒದಗಿಸುತ್ತಿದ್ದೇನೆ ಎಂದು ಲಕ್ಷ್ಮೀ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಮನುಷ್ಯ ಸ್ವಾರ್ಥಿಯಾಗಿ ತಾನು, ತನ್ನ ಕುಟುಂಬ ಎಂದು ಮಾತ್ರ ಯೋಚಿಸುತ್ತಾನೆ ಹೊರತು ಸುತ್ತಲಿನ ಸಮಾಜದ ಬಗ್ಗೆ ಕಾಳಜಿ ತೋರುವುದು ನಮ್ಮ ಕರ್ತವ್ಯ. ಮೂಕ ಪ್ರಾಣಿಗಳ ವೇದನೆಗೆ ಸ್ವಂದಿಸುವುದು ಸಮಾಜಕ್ಕೆ ತಮ್ಮ ಋಣ ತೀರಿಸುವ ವಿಧಾನ ಎಂದು ಲಕ್ಷ್ಮೀ ಹೇಳುತ್ತಾರೆ.
ಲಕ್ಷ್ಮೀ ಅವರ ಪತಿ ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಅವರಿಗೆ ಬರುವ ಮಾಸಿಕ ಪಿಂಚಣಿ ಮೊತ್ತ ಮತ್ತು ಸೀರೆ ಮಾರಾಟದಲ್ಲಿ ಬರುವ ಆದಾಯದಲ್ಲಿ ಈ ಸೇವೆ ಮಾಡುತ್ತಿದ್ದಾರೆ. ಸ್ವತಃ ಪ್ರಾಣಿಗಳ ಸೇವೆ ಮಾಡುವ ಜೊತೆಗೆ ಸುತ್ತಮುತ್ತಲಿನವರಿಗೆ ಅರಿವು ಮೂಡಿಸುವ ಕೆಲಸವನ್ನೂ ಲಕ್ಷ್ಮೀ ಮಾಡುತ್ತಾರೆ. ಅನೇಕ ಮಕ್ಕಳು, ಯುವಕರುಬೀದಿನಾಯಿಗಳು ಮೇಲೆ ಬೈಕ್​ ಹತ್ತಿಸುವುದು, ಕಲ್ಲು ಹೊಡೆಯುವುದು ಮಾಡುತ್ತಾರೆ. ಬೀಡಾಡಿ ದನಗಳನ್ನು ಓಡಿಸಲು ಮೊಳೆ ಹೊಡೆದ ಕೊಲುಗಳು, ಮುಳ್ಳುತಂತಿಗಳನ್ನು ಬಳಸುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ. ಪ್ರಾಣಿಗಳ ಹಸಿವು ನೀಗಿಸುವ ಕೆಲಸ ಮಾಡಿದರೆ, ಅವುಗಳು ಜನರ ತಂಟೆಗೆ ಬರುವುದಿಲ್ಲ ಎಂದು ಲಕ್ಷ್ಮೀ ಜನರಿಗೆ ತಿಳಿಹೇಳುವ ಕೆಲಸವನ್ನೂ ಮಾಡುತ್ತಾರೆ.
ನಗರ ಜೀವನದ ಜಂಜಡಗಳಲ್ಲಿ ಮುಳುಗಿಹೋಗಿರುವ ಜನರು ಪ್ರಕೃತಿಯೊಂದಿಗಿನ ನಂಟನ್ನೆ ಕಡಿದುಕೊಂಡುಬಿಟ್ಟಿರುತ್ತಾರೆ. ಹೀಗಾಗಿ ಮೂಕಪ್ರಾಣಿಗಳೂ ಮನುಷ್ಯರಂತೆಯೇ ಅವುಗಳಿಗೂ ಹಸಿವು ನೀರಡಿಕೆ ಇರುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳದೆ ಪ್ರಾಣಿಗಳ ವಿಚಾರದಲ್ಲಿ ಕಠೋರವಾಗಿ ವರ್ತಿಸುತ್ತಾರೆ. ಪ್ರಾಣಿಪಕ್ಷಿಗಳು ಕೂಡ ನಾವು ಬದುಕುವ ಪ್ರಕೃತಿಯ ಒಂದು ಭಾಗ ಎಂದು ಅರ್ಥ ಮಾಡಿಕೊಂಡು ಬೀದಿ ನಾಯಿಗಳಿಗೆ, ಬಿಡಾಡಿ ಹಸುಗಳಿಗೆ, ಪಕ್ಷಿಗಳಿಗೆ ಆಹಾರ, ನೀರು ಒದಗಿಸುವ ಮೂಲಕ ಸಮಾಜದಿಂದ ಪಡೆದುಕೊಂಡಿದ್ದನ್ನು ಸಮಾಜಕ್ಕೆ ಮರಳಿಸುವುದು ನಮ್ಮ ಕರ್ತವ್ಯ ಎಂದು ಲಕ್ಷ್ಮೀ ಹೇಳುತ್ತಾರೆ. ಲಕ್ಷ್ಮೀ ಅವರ ಪ್ರಾಣಿ ಪ್ರೀತಿ ಮತ್ತು ಸೇವಾಮನೋಭಾವಕ್ಕೆ ಕ್ಯಾಡ್​ಬರಿ ಡೈರಿ ಮಿಲ್ಕ್​ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 4 =
Remember me
