ಅಂಗವೈಕಲ್ಯ ಶಾಪವಲ್ಲ, ಸಮಾಜದ ಮುಖ್ಯವಾಹಿನಿಯಲ್ಲಿ ಎಲ್ಲರಂತೆ ಸರಿಸಮಾನವಾದ ಬದುಕು ಬಾಳಲು ಅವರಿಗೂ ಅವಕಾಶ ಕಲ್ಪಿಸಿಕೊಡಬೇಕು ಎಂಬ ಕನಸಿನಿಂದ ಅಂಗವಿಕಲರಿಗಾಗಿ ಒಂದು ಬಿಪಿಒ ಸಂಸ್ಥೆಯನ್ನೇ ಆರಂಭಿಸಿದವರು ಬೆಂಗಳೂರಿನ ಪವಿತ್ರಾ ವೈ.ಎಸ್. ವಿಶಿಷ್ಠ ಸಾಧನೆಯ ಕನಸು, ಕತ್ತಲೆಯಲ್ಲಿರುವವರಿಗೆ ನೆರವಾಗುವ ಉದಾರ ಮನಸ್ಸಿನಿಂದ ಸಾವಿರಾರು ಅಂಗವಿಕಲರಿಗೆ ಬದುಕು ಕಟ್ಟಿಕೊಟ್ಟಿರುವ ಪವಿತ್ರಾ ಅವರಿಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.
ಸಾಫ್ಟ್​ವೇರ್ ಕಂಪೆನಿ, ಟೆಕ್ಕಿಗಳೆಂದರೆ ಜನರ ಕಲ್ಪನೆಯೇ ಬೇರೆ. ಆದರೆ, ಇಲ್ಲಿ ಎರಡೂ ಕೈ ಇಲ್ಲದವರು, ಕಾಲಿಲ್ಲದವರು, ಅಂಧರು, ಆಟಿಸಂನಿಂದ ಬಳಲುತ್ತಿರುವವರು ಎಲ್ಲರೂ ನಾವೇನು ಕಮ್ಮಿ ಎನ್ನುವಂತೆ ಬಿಪಿಒ ವೃತ್ತಿಪರರಾಗಿ ದುಡಿಯುತ್ತಿದ್ದಾರೆ. ವಿದೇಶಗಳಿಂದ ಕರೆ ಮಾಡುವ ಗ್ರಾಹಕರೊಂದಿಗೆ ಸಂವಹಿಸುತ್ತ ಪ್ರಾಜೆಕ್ಟ್ ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಇದೆಲ್ಲ ಸಾಧ್ಯವಾಗಿರುವುದು ಬೆಂಗಳೂರಿನ ರಾಜಾಜಿನಗರದಲ್ಲಿರುವ ವಿಂಧ್ಯಾ ಇ-ಇನ್ಪೋಮೀಡಿಯಾ ಬಿಪಿಒ ಸಂಸ್ಥೆಯಲ್ಲಿ ಈ ಸಾಧನೆಯ ಹಿಂದಿರುವ ಪ್ರೇರಕ ಶಕ್ತಿ ಓರ್ವ ಉತ್ಸಾಹಿ ಮಹಿಳೆ. ಅವರೇ ಪವಿತ್ರಾ ವೈ.ಎಸ್.
ಪದವಿ ನಂತರ ಸ್ವಾವಲಂಬಿಯಾಗಿ ನನ್ನ ಕಾಲಮೇಲೆ ನಿಲ್ಲಬೇಕೆಂಬ ಹಂಬಲ ಹೊಂದಿದ್ದ ಪವಿತ್ರಾ, ನವೋದ್ಯಮಗಳ ಸಾಧ್ಯತೆಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದಾಗ ಹಲವು ವಿಚಾರಗಳು ಅವರ ಗಮನಕ್ಕೆ ಬಂದವು. ಮೊದಲನೆಯದಾಗಿ ಅದೆಷ್ಟೋ ಅಂಗವಿಕಲರಿಗೆ ಶೈಕ್ಷಣಿಕ ಅರ್ಹತೆ ಹೊಂದಿದ್ದರೂ, ಉದ್ಯೋಗ ಸಿಗದೆ ಪರದಾಡುತ್ತಿರುವುದು ಗಮನಕ್ಕೆ ಬಂತು. ಬಿಪಿಒ ತರಬೇತಿ ಕೇಂದ್ರಗಳಲ್ಲಿ ಸದಾ ಅಭ್ಯರ್ಥಿಗಳು ತುಂಬಿ ತುಳುಕುತ್ತಿದ್ದರೂ, ಸಾಫ್ಟ್​ವೇರ್ ಉದ್ಯೋಗಕ್ಕೆ ಬೇಕಾದ ಪ್ರಾಯೋಗಿಕ ತರಬೇತಿ ಅಲ್ಲಿ ಸಿಗುತ್ತಿಲ್ಲ ಎನ್ನುವುದೂ ಅರಿವಿಗೆ ಬಂತು. ಹೀಗಾಗಿ ತಾನೇ ಏಕೆ ವೃತ್ತಿಪರ ಸಂಸ್ಥೆ ಆರಂಭಿಸಬಾರದು ಎಂಬ ಚಿಂತನೆಯೇ ಪವಿತ್ರಾ 2006ರಲ್ಲಿ ವಿಂಧ್ಯಾ ಇ-ಇನ್ಪೋಮೀಡಿಯಾ ಆರಂಭಿಸುವುದಕ್ಕೆ ಪ್ರೇರಣೆಯಾಯಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಆರಂಭವಾದ ಸಂಸ್ಥೆಯಲ್ಲಿ ಸದ್ಯ 1500ಕ್ಕೂ ಹೆಚ್ಚು ಸಿಬ್ಬಂದಿ ಇದ್ದು, ಅವರಲ್ಲಿ 90ಶೇ. ಬಹುವಿಧದ ಅಂಗವೈಕಲ್ಯ ಹೊಂದಿರುವವರು.
ಅಂಗವಿಕಲರಿಗಾಗಿ ಕಂಪೆನಿ ಕಟ್ಟಿದ ಮೇಲೆ ಅವರೆಲ್ಲರನ್ನೂ ಬಿಪಿಒ ಸಂಸ್ಥೆಗಳ ಕಾರ್ಯವೈಖರಿಗೆ ತಕ್ಕಂತೆ ಸಜ್ಜುಗೊಳಿಸುವುದು ಸುಲಭವಾಗಿರಲಿಲ್ಲ. ಶೈಕ್ಷಣಿಕ ಅರ್ಹತೆ ಇದ್ದರೂ, ಉದ್ಯೋಗಸ್ಥಳದ ಅಗತ್ಯಗಳಿಗೆ ತಕ್ಕಂತೆ, ಸಂಸ್ಥೆಯ ಗುಣಮಟ್ಟದಲ್ಲಿ ಕೊರತೆಯಾಗದಂತೆ ಅಂಗವಿಕಲರ ಕೌಶಲ ತರಬೇತಿಗೆ ಪವಿತ್ರಾ ಖುದ್ದು ಕಣಕ್ಕಿಳಿದರು. ಹಲವು ಉದ್ಯಮ ತಜ್ಞರು, ಸ್ನೇಹಿತರು ಹಾಗೂ ಬೇರೆ ಬೇರೆ ಸಂಸ್ಥೆಗಳಲ್ಲಿ ಯಾವ ರೀತಿ ವೃತ್ತಿತರಬೇತಿ ನೀಡಲಾಗುತ್ತದೆ ಎಂಬ ಮಾಹಿತಿ, ಸಲಹೆಗಳು ಅವರ ನೆರವಿಗೆ ಬಂದವು. ಕೆಲವು ಸಮಾನಮನಸ್ಕ ಸ್ನೇಹಿತರು, ವಿಷಯ ತಜ್ಞರ ನೆರವಿನಿಂದ ಅಂಗವಿಕಲ ಉದ್ಯೋಗಿಗಳನ್ನು ಬಿಪಿಒ ಕೆಲಸಕ್ಕೆ ಸಜ್ಜುಗೊಳಿಸಿದರು. ಕಾಲಕ್ರಮೇಣ ಸಿಬ್ಬಂದಿ ಸಂಖ್ಯೆ, ಪ್ರಾಜೆಕ್ಟ್​ಗಳು, ವರ್ತಕರು ಹೆಚ್ಚತೊಡಗಿದರು. ಪ್ರಸಕ್ತ ಹಲವು ಪ್ರತಿಷ್ಠಿತ ಸಂಸ್ಥೆಗಳಿಗೆ ‘ವಿಂಧ್ಯಾ’ ಸೇವೆ ಒದಗಿಸುತ್ತಿದೆ.
ವಿಂಧ್ಯಾ ಸಂಸ್ಥೆ ಇಂದು ಹಲವು ಪ್ರಾದೇಶಿಕ ಭಾಷೆಗಳಲ್ಲಿ ಸೇವೆ ನೀಡುತ್ತಿದೆ. ಆಯಕಟ್ಟಿನ ಹುದ್ದೆಗಳ ನಿರ್ವಹಣೆಗೂ ಅಣಿಯಾಗುವಂತೆ ತರಬೇತಿ ಮೂಲಕ ಅಂಗವಿಕಲರನ್ನು ತಯಾರು ಮಾಡಲಾಗುತ್ತಿದೆ. ಒಂದೇ ಕೈ ಹೊಂದಿರುವ ಗಜೇಂದ್ರ ಖಾಂಡ್ವೇಕರ್ ಓರ್ವ ಸಾಮಾನ್ಯ ಉದ್ಯೋಗಿಯಾಗಿ ಸೇರಿಕೊಂಡವರು, ಇಲ್ಲಿನ ಕೌಶಲ ತರಬೇತಿ ಹಾಗೂ ವ್ಯಕ್ತಿಗತ ಸಾಮರ್ಥ್ಯದಿಂದ ಅವಕಾಶಗಳನ್ನು ಬಾಚಿಕೊಂಡು ಇದೀಗ ಇದೀಗ ಅಸಿಸ್ಟಂಟ್ ಮ್ಯಾನೇಜರ್ ಹುದ್ದೆವರೆಗೂ ತಲುಪಿದ್ದಾರೆ. ಈ ರೀತಿ ಅವಕಾಶಗಳ ಮೆಟ್ಟಿಲನ್ನೇರಿ ಟೀಮ್ ಲೀಡರ್​ಗಳಾಗಿರುವ ಹಲವು ಅಂಗವಿಕಲರು ಇಲ್ಲಿದ್ದಾರೆ. ಪವಿತ್ರಾ ನಮಗೆ ಕೆಲಸ ಕೊಟ್ಟ ಮಾಲಕಿ ಮಾತ್ರವೇ ಅಲ್ಲ, ಬಿಪಿಒ ಅಗತ್ಯಕ್ಕೆ ತಕ್ಕಂತೆ ವೃತ್ತಿಪರ ತರಬೇತಿ ನೀಡಿ, ಆತ್ಮವಿಶ್ವಾಸ ತುಂಬಿದ್ದಾರೆ ಎಂದು ಅವರೆಲ್ಲ ಹೇಳುತ್ತಾರೆ.
ಅಂಗವಿಕಲರು ಘನತೆಯಿಂದ ಎಲ್ಲರಂತೆಯೇ ಬಾಳುವಂತೆ ಮಾಡಬೇಕು ಎನ್ನುವುದೇ ಈ ಸಂಸ್ಥೆ ಆರಂಭಕ್ಕೆ ನನಗೆ ಪ್ರೇರಣೆ. ನಮ್ಮ ಸಂಸ್ಥೆಯಲ್ಲಿ ಎಲ್ಲಾ ಬಗೆಯ ದೈಹಿಕ ಅಂಗವೈಕಲ್ಯ, ಆಟಿಸಂ ಮತ್ತಿತರ ಸಮಸ್ಯೆಗಳಿರುವ ಉದ್ಯೋಗಿಗಳಿದ್ದಾರೆ. ಅವರೆಲ್ಲರಿಗೂ ಅವರ ದೈಹಿಕ ಸಾಧ್ಯತೆ, ವಿಷಯ ಜ್ಞಾನ, ಕೌಶಲ ಆಧರಿಸಿ ಆಧರಿಸಿ ಅವರಿಗೆ ಹೊಂದುವಂಥ ಕೆಲಸ, ಜವಾಬ್ದಾರಿ ನೀಡಲಾಗುತ್ತದೆ. ಅದಕ್ಕೆ ಪೂರಕ ತರಬೇತಿ ಕೊಡುವುದಕ್ಕೇ ವ್ಯವಸ್ಥೆ ರೂಪಿಸಲಾಗಿದೆ ಎಂದು ಪವಿತ್ರಾ ಹೇಳುತ್ತಾರೆ. ಇಲ್ಲಿ ಹಲವು ಅವರ ಮನೆಯಿಂದಲೇ ಬಂದು ಕೆಲಸ ಮಾಡುತ್ತಾರೆ. ಅನೇಕರಿಗೆ ವಸತಿ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಒಟ್ಟಾರೆ ನಮ್ಮ ಸಂಸ್ಥೆಯನ್ನೂ ಸಂಪೂರ್ಣ ಅಂಗವಿಕಲಸ್ನೇಹಿಯನ್ನಾಗಿ ರೂಪಿಸಲಾಗಿದೆ ಎನ್ನುತ್ತಾರೆ.
ವಿಂದ್ಯಾ ಸಂಸ್ಥೆಯಲ್ಲಿ ಕರ್ನಾಟಕ, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಮಹಾರಾಷ್ಟ್ರ, ಆಂಧ್ರಪ್ರದೇಶ, ಜಮ್ಮು-ಕಾಶ್ಮೀರ ಸೇರಿ ದೇಶದ ಬಹುತೇಕ ರಾಜ್ಯಗಳ ಅಂಗವಿಕಲರು ಒಂದು ಕುಟುಂಬದಂತೆ ಬದುಕುತ್ತ ಯಶಸ್ಸಿನ ಪ್ರಪಂಚ ಕಟ್ಟಿಕೊಂಡಿದ್ದಾರೆ. ಹೈದರಾಬಾದ್​ನಲ್ಲೂ ಸಂಸ್ಥೆಯ ಶಾಖೆ ಇದ್ದು, ಅಲ್ಲೂ ಹತ್ತಾರು ಅಂಗವಿಕಲರಿಗೆ ಉದ್ಯೋಗ ಕಲ್ಪಿಸಲಾಗಿದೆ. ಅಂಗವಿಕಲರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಪವಿತ್ರಾ ವೈ.ಎಸ್. ಅವರಿಗೆ ಕ್ಯಾಡ್​ಬರಿ ಡೈರಿಮಿಲ್ಕ್ ಧನ್ಯವಾದ ಅರ್ಪಿಸುತ್ತದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 19 =
Remember me
