ಶ್ರೀಶೈಲಂ:ಲಿಂಗ ಪೂಜೆ ಮಾಡುತ್ತಿರುವ ಪ್ರತಿಯೊಬ್ಬರೂ ಕರೊನಾ ವೈರಸ್ ನಿವಾರಣೆಗೆ ಏ.13ರ ಸಂಜೆ 7ಕ್ಕೆ ಲಿಂಗ ಪೂಜೆ ಮಾಡಿ ಪ್ರಾರ್ಥಿಸಬೇಕೆಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಸಲಹೆ ನೀಡಿದ್ದಾರೆ.
ಸರ್ಕಾರಗಳು ಸಾಕಷ್ಟು ಕ್ರಮ ಕೈಗೊಂಡರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ವೈದ್ಯಕೀಯ ವಿಜ್ಞಾನ ಮುಂದುವರಿದರೂ ರೋಗ ನಿವಾರಿಸುವ ಔಷಧ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತ ದೇವರಲ್ಲಿ ಪ್ರಾರ್ಥಿಸುವುದೊಂದೇ ಮಾರ್ಗವಾಗಿದೆ.
‘ಇಷ್ಟಲಿಂಗಮಿದಂ ಸಾಕ್ಷಾದನಿಷ್ಟಪರಿಹಾರಕಂ’ ಎಂಬ ಸಿದ್ಧಾಂತ ಶಿಖಾಮಣಿಯ ಉಕ್ತಿಯಂತೆ ಇಷ್ಟಲಿಂಗದಲ್ಲಿ ಜಗತ್ತಿನ ಅನಿಷ್ಟಗಳನ್ನೆಲ್ಲ ನಷ್ಟಗೊಳಿಸುವ ಶಕ್ತಿಯಿದೆ. ವೀರಶೈವ ಲಿಂಗಾಯತರೆಲ್ಲರೂ ಆರಾಧ್ಯ ದೈವವಾದ ಇಷ್ಟಲಿಂಗವನ್ನು ಪ್ರತಿನಿತ್ಯ ಪೂಜಿಸುವಾಗ ರೋಗಾಣುವಿನಿಂದ ಜಗತ್ತನ್ನು ಸಂರಕ್ಷಿಸು ಎಂದು ತಪ್ಪದೇ ಪ್ರಾರ್ಥಿಸಬೇಕು ಎಂದು ತಿಳಿಸಿದ್ದಾರೆ.
ಸೋಮವಾರ ಸಂಜೆ ಏಕಕಾಲಕ್ಕೆ ಲಿಂಗಪೂಜೆ ಮಾಡಿ ಸಾಮೂಹಿಕವಾಗಿ ಕರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಬೇಕು. ಈಗಾಗಲೇ ನಾವು ಕರೊನಾ ನಿವಾರಣಾ ಪ್ರಾರ್ಥನಾ ಪಂಚಕ ರಚಿಸಿ ಎಲ್ಲರಿಗೂ ಪ್ರತಿನಿತ್ಯ ಪಠಿಸಲು ತಿಳಿಸಿದ್ದೇವೆ ಎಂದು ಜಗದ್ಗುರುಗಳು ಹೇಳಿದ್ದಾರೆ.
ಲಾಕ್​ಡೌನ್​ ಹೊರತಾಗಿಯೂ ಭಾರತದ ಅತಿಶ್ರೀಮಂತರ ಪೈಕಿ ಒಬ್ಬರ ನಿವ್ವಳ ಮೌಲ್ಯ ಹೆಚ್ಚಾಗಿದೆ, ಅವರು ಯಾರು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + nine =
Remember me
