ಬೆಂಗಳೂರು:ಸಿಲಿಕಾನ್​ ಸಿಟಿ ಸದ್ಯ ಕಂಪ್ಲೀಟ್​ ಲಾಕ್​ಡೌನ್ ಆಗಿದ್ದು, ಈ ಸಂದರ್ಭದಲ್ಲಿ ಕೋವಿಡ್ ಟೆಸ್ಟ್ ಅನಿವಾರ್ಯತೆ ಉಳ್ಳವರು ತಮ್ಮ ಮನೆ ಬಾಗಿಲಿನಲ್ಲೇ ಪರೀಕ್ಷೆಗೆ ಒಳಪಡಬಹುದು.
ಬಿಬಿಎಂಪಿ ವ್ಯಾಪ್ತಿಯ ಹಿರಿಯ ನಾಗರಿಕರು, ಕೋ-ಮೋರ್ಬಿಡ್ ಅಸ್ವಸ್ಥರು, ರೋಗಲಕ್ಷಣ ಉಳ್ಳವರ ಪ್ರಾಥಮಿಕ ಸಂಪರ್ಕಕ್ಕೆ ಒಳಪಟ್ಟವರು ತಮ್ಮ ವಲಯದಲ್ಲಿ ಕಾರ್ಯನಿರ್ವಹಿಸುವ ಮೊಬೈಲ್ ಟೆಸ್ಟಿಂಗ್ ವಾಹನಕ್ಕೆ ಕರೆ ಮಾಡುವ ಮೂಲಕ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬಹುದು.
ಇದನ್ನೂ ಓದಿರಿಮದುವೆ ತಂದ ಆಪತ್ತು; ಕೋವಿಡ್​ಗೆ ವರನ ತಂದೆ, ವಧುವಿನ ತಾಯಿ ಬಲಿ; ಒಂದೇ ಕುಟುಂಬದ 32 ಜನರಿಗೆ ಸೋಂಕು
ಬೆಂಗಳೂರಿನಲ್ಲಿ ಮನೆ ಬಾಗಿಲಲ್ಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ವಲಯವಾರು ಸಹಾಯವಾಣಿ ಇಂತಿದೆ.ಯಲಹಂಕ- 080-28560696/ 87920 32820/5180ಮಹದೇವಪುರ- 080-23010101/102ಬೊಮ್ಮನಹಳ್ಳಿ- 85488 83334/ 89700 0222‌8ಆರ್.ಆರ್. ನಗರ- 080-2600208ದಕ್ಷಿಣ ವಲಯ- 70227 24772ಪೂರ್ವ ವಲಯ -99000 94042ಪಶ್ಚಿಮ ವಲಯ 080-68248454/ 72041 79723
ಕೋವಿಡ್ ಟೆಸ್ಟಿಂಗ್ ಈಗ ಮತ್ತಷ್ಟು ಸುಲಭ.
ಈ ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರು ಸಂಚಾರಿ(ಮೊಬೈಲ್)ಕೋವಿಡ್ ಪರೀಕ್ಷಾ ಕೇಂದ್ರದ ಮೂಲಕ ಕೋವಿಡ್ ಟೆಸ್ಟ್ ಮಾಡಿಸಬಹುದು. ಬಿಬಿಎಂಪಿ ವ್ಯಾಪ್ತಿಯ ವಲಯವಾರು ಸಹಾಯವಾಣಿ ಸಂಖ್ಯೆಗಳನ್ನು ಕೆಳಗೆ ನೀಡಲಾಗಿದೆ.#BBMPFightsCovid19pic.twitter.com/kWRIv3maYw
— Rakesh Singh IAS (@BBMPAdmn)July 17, 2020

ಕೋವಿಡ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವ(ಸ್ವ್ಯಾಬ್) ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿರುವ ಯಾವುದೇ ವ್ಯಕ್ತಿ ಫಲಿತಾಂಶ ಲಭ್ಯ ಆಗುವವರೆಗೂ ಮನೆಯಲ್ಲೇ ಪ್ರತ್ಯೇಕತೆ (ಐಸೋಲೇಷನ್) ಕಾಯ್ದುಕೊಳ್ಳಬೇಕು. ನಿಯಮ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗ ಕಾಯ್ದೆ ಅಡಿ ಕ್ರಮ ಕೈಗೊಳ್ಳಲಾಗುತ್ತದೆ. ಆಪ್ತಮಿತ್ರ-ಕೋವಿಡ್19 ಸಹಾಯವಾಣಿ, ಟೆಲಿಮೆಡಿಸಿನ್ ಮತ್ತು ಆಸ್ಪತ್ರೆಗೆ ಉಲ್ಲೇಖಿಸಲು-14410, ಆಂಬುಲೆನ್ಸ್ ಸೇವೆಗೆ -108, ಆಸ್ಪತ್ರೆ ನಿರಾಕರಣೆ ಸಂಬಂಧದ ಕುಂದು ಕೊರತೆಗಾಗಿ-1912, ಸಾಮಾನ್ಯ ಆರೋಗ್ಯ ಸಮಸ್ಯೆ ಕುರಿತ ಮಾಹಿತಿಗಾಗಿ -104 ಸಂಖ್ಯೆಗಳಿಗೆ ಸಾರ್ವಜನಿಕರು ಕರೆ ಮಾಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆ ತಿಳಿಸಿದೆ.
video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − two =
Remember me
