ಮಂಗಳೂರು:ಕರಾವಳಿಯಲ್ಲಿ ಶುಕ್ರವಾರ ಒಂದೇ ದಿನ 21 ಕರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ 15 ಮಂದಿ ದುಬೈನಿಂದ ಇತ್ತೀಚೆಗೆ ವಿಮಾನದಲ್ಲಿ ಬಂದವರು ಎಂಬುದು ಖಚಿತವಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಮೇ 12ರಂದು ಆಗಮಿಸಿದ್ದ ಪ್ರಯಾಣಿಕರ ಪೈಕಿ 125 ಮಂದಿ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. ಉಡುಪಿಯ 49 ಮಂದಿ ಹಾಗೂ ಉತ್ತರ ಕನ್ನಡದ 5 ಮಂದಿ ಆಯಾ ಜಿಲ್ಲೆಗೆ ತೆರಳಿ, ಕ್ವಾರಂಟೈನ್‌ಲ್ಲಿದ್ದಾರೆ.
ಇದನ್ನೂ ಓದಿಮಂಗಗಳಿಗೆ ವಿಷಪ್ರಾಶನ ಮಾಡಿಸಿ, ಹಲ್ಲೆ ನಡೆಸಿದ ದುರುಳರು!
ಇನ್ನೊಂದೆಡೆ, ಹಸಿರು ವಲಯದಲ್ಲಿ ಗುರುತಿಸಿಕೊಂಡಿರುವ ಉಡುಪಿ ಜಿಲ್ಲೆಗೂ ಕರೊನಾ ಶಾಕ್ ನೀಡಿದೆ. ದುಬೈನಿಂದ ಆಗಮಿಸಿದ್ದ ಜಿಲ್ಲೆಯ 49 ಮಂದಿ ಪೈಕಿ ಐವರಿಗೆ ಸೋಂಕು ದೃಢಪಟ್ಟಿದೆ. ಇವರನ್ನು ಪ್ರತ್ಯೇಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರ ಆರೋಗ್ಯ ತಪಾಸಣೆ, ಮುಂಜಾಗ್ರತಾ ಕ್ರಮಕ್ಕೆ ಜಿಲ್ಲಾಡಳಿತ ಮುತುವರ್ಜಿ ವಹಿಸಿದೆ.
ಮೇ 18ರಂದು ದುಬೈಯಿಂದ ಇನ್ನೊಂದು ವಿಮಾನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. 175 ಮಂದಿ ಆಗಮಿಸುವ ನಿರೀಕ್ಷೆ ಇದೆ. ಅದರಲ್ಲಿ ಬಂದವರ ಪೈಕಿ ಎಷ್ಟು ಜನರಿಗೆ ಕರೊನಾ ದೃಢಪಡುತ್ತೋ ಎಂಬ ಆತಂಕದಲ್ಲಿದ್ದಾರೆ ಜಿಲ್ಲೆಯ ಜನತೆ.
ದಾಖಲೆಯ 90ರಿಂದ ಶೂನ್ಯಕ್ಕೆ ಇಳಿದ ಮೈಸೂರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 7 =
Remember me
