ಬೆಂಗಳೂರು:ಒಬ್ಬೊಬ್ಬರಿಗೆ ಒಂದೊಂದು ಖಯಾಲಿ ಇರುತ್ತದೆ. ಅದೇ ರೀತಿ ವಿಪರೀತ ಫೋಟೋ ಶೂಟ್​ ಮಾಡಿಸಿಕೊಳ್ಳುವ ಖಯಾಲಿ ಇದ್ದ ವ್ಯಕ್ತಿಯೊಬ್ಬ ಕ್ಯಾಮೆರಾ ಕದ್ದು ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೈಯ್ಯದ್ ಅಬೂಬಕ್ಕರ್ ಸಿದ್ದಿಕ್​ಗೆ ಜಾಲಿ ಟ್ರಿಪ್ ಮಾಡುವುದು, ಪೊಟೊಶೂಟ್ ಮಾಡುವ ಖಯಾಲಿ ಇತ್ತಂತೆ. ಅದಕ್ಕೆಂದು ಈ ಮೊದಲೆಲ್ಲ ಬಾಡಿಗೆ ಕ್ಯಾಮೆರಾಗಳಿಗೆ ಸಾಕಷ್ಟು ಹುಡುಕಾಡಿದ್ದಾನೆ. ಆದರೆ ಸೈಯದ್​ ಯಾರಿಗೂ ಹೆಚ್ಚಾಗಿ ಪರಿಚಯವಿಲ್ಲದ ಹಿನ್ನೆಲೆಯಲ್ಲಿ ಯಾರೂ ಆತನಿಗೆ ಬಾಡಿಗೆ ಕ್ಯಾಮೆರಾ ಕೊಡುವ ಧೈರ್ಯ ಮಾಡಿಲ್ಲ. ಹಾಗಾಗಿ ಸೈಯದ್​ ಬೇರೆಯದ್ದೇ ಉಪಾಯವೊಂದನ್ನು ಮಾಡಿದ್ದಾನೆ.
ಸೈಯದ್​ ಜನವರಿ 26ರಂದು ಕೆ.ಆರ್ ಪುರಂ‌ನ ರಾಜು ಡಿಜಿಟಲ್ ಸ್ಟುಡಿಯೋಗೆ ಫೋಟೋ ತೆಗೆಸಿಕೊಳ್ಳಲೆಂದು ಹೋಗಿದ್ದಾನೆ. ಪೊಟೊ ತೆಗೆಸಿಕೊಂಡ ನಂತರ ಸ್ಟುಡಿಯೋ ಮಾಲೀಕನನ್ನ ಟೀ ಕುಡಿಯಲು ಕರೆದೊಯ್ದಿದ್ದಾನೆ. ಟೀ ಕುಡಿಯುವ ವೇಳೆಯಲ್ಲಿ ಪರ್ಸ್ ಸ್ಟುಡಿಯೋ ಒಳಗೇ ಬಿಟ್ಟಿದ್ದೇನೆ. ತೆಗೆದುಕೊಂಡು ಬರುತ್ತೇನೆ ಎಂದು ಹೇಳಿ ಮಾಲೀಕನನ್ನು ಟೀ ಅಂಗಡಿಯಲ್ಲೇ ಬಿಟ್ಟು ಸ್ಟುಡಿಯೋಗೆ ತೆರಳಿದ್ದಾನೆ. ನಂತರ ಸ್ಟುಡಿಯೋದಲ್ಲಿದ್ದ 4 ಲಕ್ಷ ಬೆಲೆಬಾಳುವ ಸೋನಿ ಮಾರ್ಕ್ ಕ್ಯಾಮೆರಾ ಸಮೇತ ಎಸ್ಕೇಪ್ ಆಗಿದ್ದಾನೆ.
ಎಷ್ಟೊತ್ತಾದರೂ ಸೈಯದ್​ ವಾಪಾಸು ಬಾರದಿದ್ದರಿಂದ ಅನುಮಾನ ಬಂದ ಸ್ಟುಡಿಯೋ ಮಾಲೀಕ ಸ್ಟುಡಿಯೋಗೆ ಬಂದು ನೋಡಿದಾಗ ಆಘಾತವಾಗಿದೆ. ತಕ್ಷಣ ಆತ ಕೆಆರ್ ಪುರಂ ಠಾಣೆಯಲ್ಲಿ ದೂರು ಸೈಯದ್​ ವಿರುದ್ಧ ದೂರು ನೀಡಿದ್ದಾನೆ. ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇದೀಗ ಅತನನ್ನು ಬಂಧಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಪ್ರೀತಿಸಿ ಕೈ ಕೊಟ್ಟ ಯುವತಿಯ ಮೇಲೆ ಚಾಕುವಿನಿಂದ ಹಲ್ಲೆ! ಯುವಕ ಇದೀಗ ಜೈಲುಪಾಲು

ಗೌರಿ, ಕಲ್ಬುರ್ಗಿಯಂತೆ ನನ್ನ ಹತ್ಯೆ: ವಕೀಲೆಯಿಂದ ಮುಖಕ್ಕೆ ಮಸಿ ಬಳಿಸಿಕೊಂಡ ಭಗವಾನ್​ ಆರೋಪ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
