ರಾಯಚೂರು:ಕೆನರಾ ಬ್ಯಾಂಕ್​ ಉದ್ಯೋಗಿಯೊಬ್ಬರಿಗೆ ಕರೊನಾ ಪಾಸಿಟಿವ್​ ಬಂದಿದ್ದು, ವಿಷಯ ತಿಳಿದ ಅಧಿಕಾರಿಗಳು ಎಲ್ಲ ಸಿಬ್ಬಂದಿಯನ್ನು ಹೊರ ಕಳಿಸಿ ಬ್ಯಾಂಕ್​ಗೆ ಬೀಗ ಹಾಕಿದರು.
ಮಸ್ಕಿ ಪಟ್ಟಣದ ಕೆನರಾ ಬ್ಯಾಂಕ್​ನ ಉದ್ಯೋಗಿಯಾದ ಕುಷ್ಟಗಿ ತಾಲೂಕಿನ ಕೇಸೂರು ಗ್ರಾಮದ ವ್ಯಕ್ತಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟಿದೆ. ಮಸ್ಕಿ ಪಟ್ಟಣದಲ್ಲಿ ವಾಸವಿದ್ದ ನೌಕರ ಮೂರು ದಿನದ ಹಿಂದೆ ಸ್ವ ಗ್ರಾಮಕ್ಕೆ ಬಂದಿದ್ದರು. ತೀವ್ರ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತವಾಗಿ ಕುಷ್ಟಗಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆ ವೇಳೆ ಇವರ ಗಂಟಲು ದ್ರವ ಮತ್ತು ರಕ್ತ ಮಾದರಿ ಸಂಗ್ರಹಿಸಲಾಗಿತ್ತು. ವರದಿ ಪಾಸಿಟಿವ್​ ಬಂದಿದೆ.
ಇದನ್ನೂ ಓದಿರಿನವ ವಿವಾಹಿತ ಆತ್ಮಹತ್ಯೆ, ಕ್ವಾರಂಟೈನ್​ ಕೇಂದ್ರದಲ್ಲಿ ನಡೆದದ್ದಾದರೂ ಏನು?
ನೌಕರನಿಗೆ ಸೋಂಕು ಇರುವುದು ಗೊತ್ತಾಗುತ್ತಿದ್ದಂತೆ ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ದೌಡಾಯಿಸಿದ ಅಧಿಕಾರಿಗಳು ಸಿಬ್ಬಂದಿಯನ್ನು ಬ್ಯಾಂಕ್​ನಿಂದ ಹೊರ ಕಳುಹಿಸಿ ಬೀಗ ಹಾಕಿದರು. ಕೇಸೂರು ಗ್ರಾಮವನ್ನು ಸೀಲ್ಡೌನ್ ಮಾಡಲಾಗಿದೆ. ನೌಕರನ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಹುಡುಕಾಟ ನಡೆದಿದೆ.
ಇದನ್ನೂ ಓದಿರಿಕ್ವಾರಂಟೈನ್​ನಲ್ಲೇ ಮೂರು ಕುಟುಂಬಕ್ಕೆ ಕೆಲಸ ಸಿಕ್ತು!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + 7 =
Remember me
