ಪಂಕಜ ಕೆ.ಎಂ.ಬೆಂಗಳೂರು:ಯುವಜನರಲ್ಲಿ ಕ್ಯಾನ್ಸರ್ ರೋಗ ನಿರ್ಣಯ ಪ್ರಮಾಣ ಹೆಚ್ಚುತ್ತಿದ್ದು, 2010-2019ರ ಅವಧಿಯಲ್ಲಿ 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪ್ರತಿ ಒಂದು ಲಕ್ಷ ಜನರಲ್ಲಿ ಈ ಸಮಸ್ಯೆ 100ರಿಂದ 103ಕ್ಕೆ ಏರಿಕೆಯಾಗಿದೆ ಎಂದು ಜಾಗತಿಕ ಅಧ್ಯಯನವೊಂದು ಬಹಿರಂಗಪಡಿಸಿದೆ.
ಕ್ಯಾನ್ಸರ್ ಕಾಯಿಲೆಗಳಲ್ಲಿ ಸ್ತನ ಕ್ಯಾನ್ಸರ್ ಕಿರಿಯ ವಯಸ್ಸಿನವರಲ್ಲಿ ಸಾಮಾನ್ಯವಾಗಿದೆ. ಕೊಲೊನ್ ಮತ್ತು ಜೀರ್ಣಾಂಗವ್ಯೆಹದ ಕ್ಯಾನ್ಸರ್ ಸೇರಿ ಜಠರದಲ್ಲಿನ ಕ್ಯಾನ್ಸರ್ ಸಮಸ್ಯೆಗಳು ಶೇ.15 ಏರಿಕೆಯಾಗಿದೆ. ಪುರುಷರಿಗೆ ಹೋಲಿಸಿದೆ ಮಹಿಳೆಯರಲ್ಲಿ ಕ್ಯಾನ್ಸರ್ ರೋಗನಿರ್ಣಯ ಸಾಧ್ಯತೆ ಹೆಚ್ಚು ಕಂಡುಬಂದಿದೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರಲ್ಲಿ ಕ್ಯಾನ್ಸರ್ ಪ್ರಮಾಣ ಶೇ.5 ಕಡಿಮೆಯಾಗಿದೆ.
ಪ್ರಾದೇಶಿಕವಾರು ಹೇಳುವುದಾದರೆ ಏಷ್ಯನ್ನರಲ್ಲಿ, ಪೆಸಿಫಿಕ್ ದ್ವೀಪವಾಸಿಗಳು, ಹಿಸ್ಪಾನಿಕ್ಸ್, ಅಮೆರಿಕನ್ ಇಂಡಿಯನ್ಸ್ ಮತ್ತು ಅಲಾಸ್ಕಾ ಸ್ಥಳೀಯರಲ್ಲಿ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದೆ. ಇದೇ ವೇಳೆ ಕಪ್ಪು ಜನರಲ್ಲಿ ಕ್ಯಾನ್ಸರ್ ಪ್ರಮಾಣ ಕುಸಿದಿದ್ದು, ಬಿಳಿಯರಲ್ಲಿ ಸ್ಥಿರವಾಗಿದೆ ಎಂದು ಅಧ್ಯಯನ ವರದಿ ತಿಳಿಸಿದೆ.
ಕ್ಯಾನ್ಸರ್‌ಗೆ ಕಾರಣ ಅಸ್ಪಷ್ಟ:ಯುವಜನರಲ್ಲಿ ಅದರಲ್ಲೂ 30ರಿಂದ 39 ವರ್ಷ ವಯೋಮಾನದವರಲ್ಲಿ ಕ್ಯಾನ್ಸರ್ ಅಪಾಯ ಹೆಚ್ಚಿದೆ. ಇದಕ್ಕೆ ಕಾರಣ ಏನು ಎಂಬುದು ಅಸ್ಪಷ್ಟವಾಗಿದೆ. ಆದಾಗಿಯೂ ಸಂಭಾವ್ಯ ಕಾರಣಗಳಲ್ಲಿ ಬೊಜ್ಜು, ಮದ್ಯಪಾನ, ಧೂಮಪಾನ, ನಿದ್ರಾಹೀನತೆ, ಜಡ ಜೀವನಶೈಲಿ ಹಾಗೂ ಪರಿಸರ ಮಾಲಿನ್ಯ ಮತ್ತು ಕಾರ್ಸಿನೋಜೆನ್‌ಗಳು ಸೇರಿವೆ.
ಆಹಾರದಿಂದ ಜಠರ ಕ್ಯಾನ್ಸರ್?:ಬದಲಾದ ಆಹಾರ ಪದ್ಧತಿಯಿಂದ ಜಠರ ಸಂಬಂಧಿ ಕ್ಯಾನ್ಸರ್‌ಗಳು ಹೆಚ್ಚಿವೆ. ಅದರಲ್ಲೂ ಹೆಚ್ಚಾಗಿ ್ಯಾಟಿ ುಡ್, ಜಂಕ್ ುಡ್ ಹಾಗೂ ಹೈ ಶುಗರ್ ಬಳಕೆಯಿಂದ ದೇಹದಲ್ಲಿನ ವಿಜರಲ್ ್ಯಾಟ್ ಈ ರೀತಿಯ ಕ್ಯಾನ್ಸರ್ ಕಾಯಿಲೆಗಳಿಗೆ ಕಾರಣವಾಗುತ್ತಿದೆ. ಹಾಗಾಗಿ ನಮ್ಮ ಹಿಂದಿನ ಆಹಾರ ಪದ್ಧತಿಯನ್ನು ಅದರಲ್ಲೂ ಮನೆಯಲ್ಲಿ ತಯಾರಿಸಿದ ತಾಜಾ ಹಾಗೂ ಶುದ್ಧ ಆಹಾರ ಸೇವನೆ ರೂಢಿಸಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ ಕ್ಯಾನ್ಸರ್ ರೋಗ ತಜ್ಞ ಡಾ. ವಿಶಾಲ್ ರಾವ್.
ಕ್ಯಾನ್ಸರ್ ಹೆಚ್ಚಲು ತಂಬಾಕು ಕಾರಣ:ಇತರ ದೇಶಗಳಿಗೆ ಹೋಲಿಸಿದರೆ ಅದರಲ್ಲೂ ಭಾರತದಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ತಂಬಾಕು ಪ್ರಮುಖ ಕಾರಣವಾಗಿದೆ. ನಮ್ಮ ಯುವಜನರು ಬೀಡಿ, ಸಿಗರೇಟ್, ಗುಟ್ಕಾದಂತಹ ತಂಬಾಕು ಅತಿಯಾಗಿ ಬಳಸುವುದರಿಂದ ಬಾಯಿ ಮತ್ತು ಕುತ್ತಿಗೆ ಕ್ಯಾನ್ಸರ್‌ಗೆ ಒಳಗಾಗುತ್ತಿದ್ದಾರೆ. ಇದಲ್ಲದೆ 18 ಬೇರೆ ಬೇರೆ ಕ್ಯಾನ್ಸರ್‌ಗಳಿಗೂ ತಂಬಾಕು ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾಗಿದೆ ಎಂಬುದಾಗಿ ತಜ್ಞರು ವಾದ ಮುಂದಿಟ್ಟಿದ್ದಾರೆ.
ಎಚ್ಚರಿಕೆ ಕ್ರಮಗಳು:* ಸಮಯಕ್ಕೆ ಸರಿಯಾಗಿ ನಿದ್ರೆ ಮಾಡುವುದು ಅತೀ ಮುಖ್ಯ* ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಬೇಕು* ಸದಾ ಕುಳಿತಲ್ಲಿಯೇ ಕೂರದೆ ಚಟುವಟಿಕೆಯಿಂದ ಇರಬೇಕು* ಕರಿದ, ಖಾರದ ಹಾಗೂ ಜಂಕ್ ುಡ್ ಸೇವನೆಯಿಂದ ದೂರ ಇರಬೇಕು* ತಂಬಾಕು, ಮದ್ಯಪಾನ ಸೇವನೆ ಹಾಗೂ ಸೇವಿಸುವವರಿಂದ ದೂರು ಇರಿ* ನಿಯಮಿತವಾದ ವ್ಯಾಯಾಮ, ಯೋಗ, ಧ್ಯಾನ ಆರೋಗ್ಯಕ್ಕೆ ಉತ್ತಮ.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + ten =
Remember me
