‘ಕ್ಯಾನ್ಸರ್ ’ಮಹಾಮಾರಿ ಎಂತಹ ವ್ಯಕ್ತಿಯೇ ಆಗಿದ್ದರೂ ಆತ್ಮಸ್ಥೈರ್ಯ ಕುಗ್ಗಿಸಿ ಬಿಡುತ್ತದೆ. ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಶೇ.95 ಗುಣಹೊಂದಬಹುದು. ಆದರೆ ಜಾಗೃತಿ ಕೊರತೆ ಹಾಗೂ ಹಿಂಜರಿಕೆಯಿಂದಾಗಿ ಬಹಳಷ್ಟು ರೋಗಿಗಳು 3-4ನೇ ಹಂತಕ್ಕೆ ತಲುಪಿದಾಗ ಚಿಕಿತ್ಸೆಗೆ ಮುಂದಾಗುತ್ತಾರೆ. ಪರಿಣಾಮ ಸಾಯುವವರ ಸಂಖ್ಯೆ ಹೆಚ್ಚುತ್ತಿದೆ. ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ವಿಜಯವಾಣಿ ಬೆಂಗಳೂರು ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕ್ಯಾನ್ಸರ್ ಕುರಿತ ಸಂವಾದದಲ್ಲಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ವಿ.ಲೋಕೇಶ್, ರೋಗ ಪತ್ತೆ, ಚಿಕಿತ್ಸೆ, ಜಾಗೃತಿ, ಸಂಶೋಧನೆ ಕುರಿತು ಮಾಹಿತಿ ಹಂಚಿಕೊಂಡರು.
ಬೆಂಗಳೂರು:ಕ್ಯಾನ್ಸರ್ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸುವುದರ ಜತೆಗೆ ಜಾಗೃತಿ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಗರ್ಭಕಂಠದ ಕ್ಯಾನ್ಸರ್ ತಡೆಗೆ 9 ರಿಂದ 14 ವರ್ಷ ವಯಸ್ಸಿನ ಹೆಣ್ಣು ಮಕ್ಕಳಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಘೋಷಿಸಿರುವುದು ಸ್ವಾಗತಾರ್ಹ. ಇದರಿಂದ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ ನಿಮೂಲನೆ ಸಾಧ್ಯವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ದೇಶದಲ್ಲಿ ಪ್ರತಿ ವರ್ಷ 13.92 ಲಕ್ಷ ಕ್ಯಾನ್ಸರ್ ರೋಗಿಗಳು ಪತ್ತೆಯಾಗುತ್ತಿದ್ದು, 8.51 ಲಕ್ಷ ಮಂದಿ ಸಾವನ್ನಪು್ಪತ್ತಿದ್ದಾರೆ. ಕರ್ನಾಟಕದಲ್ಲಿ 87,500 ಹೊಸ ರೋಗಿಗಳು ಪತ್ತೆಯಾಗುತ್ತಿದ್ದು, 25,700 ಮಂದಿ ಮೃತಪಡುತ್ತಿದ್ದಾರೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ವಾರ್ಷಿಕ 14,700 ರೋಗಿಗಳು ಪತ್ತೆಯಾಗುತ್ತಿದ್ದು, 3,600 ಮಂದಿ ಸಾವನ್ನಪ್ಪುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರತಿ ವರ್ಷ ಜಾಗೃತಿ:ಪ್ರತಿ ವರ್ಷ ಜಾಗೃತಿ ಕಾಯಿಲೆಯನ್ನು ಎಷ್ಟು ಬೇಗ ಪತ್ತೆ ಹೆಚ್ಚಿ, ಚಿಕಿತ್ಸೆಗೆ ಪಡೆದುಕೊಳ್ಳುತ್ತಾರೆ ಎನ್ನುವುದರ ಆಧಾರದಲ್ಲಿ ಗುಣಮುಖ ಪ್ರಮಾಣ ನಿರ್ಧಾರವಾಗುತ್ತದೆ. ಹೀಗಾಗಿ 30 ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆ.4ರಂದು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತಿದೆ. ಈ ವರ್ಷ ‘ಕ್ಯಾನ್ಸರ್ ಆರೈಕೆ ಅಂತರವನ್ನು ಮುಚ್ಚಿ’ ಎಂಬ ಘೋಷವಾಕ್ಯದೊಂದಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಆಹಾರದ ಮಹತ್ವ:ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚಿನ ದಿನಗಳಲ್ಲಿ ಭಾರತೀಯರು ಪಾಶ್ಚಿಮಾತ್ಯ ಜೀವನಶೈಲಿ ಮತ್ತು ಆಹಾರ ಪದ್ಧತಿ ಅಳವಡಿಸಿಕೊಳ್ಳುತ್ತಿರುವುದರಿಂದ ದೇಶದಲ್ಲಿಯೂ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ಅಧ್ಯಯನಗಳ ಪ್ರಕಾರ ನಿತ್ಯ ಮಿಶ್ರ ಹಣ್ಣುಗಳು, ಸೊಪು್ಪ ಹಸಿರು ತರಕಾರಿ, ಧಾನ್ಯಗಳ ಸೇವನೆಯಿಂದ ಉತ್ತಮ ಆರೋಗ್ಯ ಹೊಂದುವುದರ ಜತೆಗೆ ಶೇ.60 ಕ್ಯಾನ್ಸರ್ ಕಾಯಿಲೆ ದೂರವಿಡಬಹುದಾಗಿದೆ. ಇದರ ಜತೆಗೆ ನಿತ್ಯ 5-6 ತಾಸು ನಿದ್ರೆ ಹಾಗೂ ಯೋಗ, ವ್ಯಾಯಾಮ ಮಾಡುವುದರಿಂದ ಆರೋಗ್ಯಕರ ಜೀವನ ಹೊಂದಬಹುದಾಗಿದೆ. ಅತಿಯಾದ ಮಸಾಲೆ ಪದಾರ್ಥ, ಹೆಚ್ಚಿನ ಪ್ರಮಾಣದಲ್ಲಿ ಉಪು್ಪ-ಕಾರ ಸೇವನೆ, ಸಂಸ್ಕರಿಸಿದ ಆಹಾರ ಬಳಕೆ, ತಂಪು ಪಾನೀಯ, ಉಪು್ಪ ಮಿಶ್ರಿತ ಒಣ ಮೀನು, ಗಟ್ಟಿ ಹಾಗೂ ಅತೀ ಹೆಚ್ಚು ಕೊಬ್ಬಿನ ಅಂಶ ಇರುವ ಆಹಾರ ಸೇವನೆಯೂ ಕ್ಯಾನ್ಸರ್​ಗೆ ಕಾರಣವಾಗಲಿದೆ ಎಂದು ಎಚ್ಚರಿಸಿದರು.
ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ:ಕ್ಯಾನ್ಸರ್​ನಿಂದ ಕೇವಲ ರೋಗಿ ಮಾತ್ರವಲ್ಲ, ಇಡೀ ಕುಟುಂಬವೇ ಆರ್ಥಿಕ ಹಾಗೂ ಮಾನಸಿಕವಾಗಿ ಕುಗ್ಗಿ ಹೋಗುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕ್ಯಾನ್ಸರ್ ರೋಗಿಗಳ ಹಾಗೂ ಕುಟುಂಬದವರ ಪಾಲಿಗೆ ಆಶಾಕಿರಣವಾಗಿದೆ. ಸರ್ಕಾರದ ವಿವಿಧ ಯೋಜನೆಗಳಡಿ ಬಡರೋಗಿಗಳಿಗೆ ಸಂಪೂರ್ಣ ಉಚಿತ ಹಾಗೂ ಮಧ್ಯಮವರ್ಗದವರಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಆರೈಕೆ ಒದಗಿಸಲಾಗುತ್ತಿದೆ. ನಿತ್ಯ 2 ಸಾವಿರ ಹೊರರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ವಾರ್ಷಿಕ 25 ಸಾವಿರ ಹೊಸ ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 3.50 ಲಕ್ಷ ಮಂದಿ ನಿಯಮಿತ ಚಿಕಿತ್ಸೆ (ಫಾಲೋಅಪ್ ಟ್ರೀಟ್​ವೆುಂಟ್) ಪಡೆಯುತ್ತಾರೆ. ಸುಮಾರು 60 ಸಾವಿರ ರೇಡಿಯೇಷನ್ ಥೆರಪಿ, 35 ಸಾವಿರಕ್ಕೂ ಹೆಚ್ಚು ಮಂದಿಗೆ ಕಿಮೋಥೆರಪಿ ಚಿಕಿತ್ಸೆ ನೀಡಲಾಗುತ್ತದೆ. ನಾಲ್ಕು ಸಾವಿರಕ್ಕೂ ಹೆಚ್ಚು ಮೇಜರ್ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಸಂಸ್ಥೆ ಆಧುನಿಕ ಸ್ಪರ್ಶ ಪಡೆದುಕೊಂಡಿದ್ದು, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಯಂತ್ರಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ವಾರ್ಷಿಕ 150ಕ್ಕೂ ಅಧಿಕ ರೊಬಾಟಿಕ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಈವರೆಗೂ 65 ಬೋನ್ ಮ್ಯಾರೋ ಟ್ರಾನ್ಸ್​ಪ್ಲಾಂಟ್ (ಅಸ್ಥಿಮಜ್ಜೆ ಕಸಿ ಶಸ್ತ್ರಚಿಕಿತ್ಸೆ) ನಡೆಸಲಾಗಿದೆ. ಹೊರರಾಜ್ಯಗಳ ರೋಗಿಗಳೂ ಆಗಮಿಸುತ್ತಿದ್ದು, ಸಂಸ್ಥೆಯ ಹೊರೆ ತಪ್ಪಿಸಲು ಕಲಬುರಗಿ ಹಾಗೂ ತುಮಕೂರಿನಲ್ಲಿ ಸಂಸ್ಥೆಯ ಶಾಖೆ ಆರಂಭಿಸಲಾಗುತ್ತಿದೆ. ರಾಜ್ಯದ ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಕ್ಯಾನ್ಸರ್ ವಿಭಾಗ ಪ್ರಾರಂಭಿಸುವ ನಿಟ್ಟಿನಲ್ಲಿಯೂ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಈಗಾಗಲೇ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸೇರಿ ಕೆಲವೆಡೆ ಕ್ಯಾನ್ಸರ್ ವಿಭಾಗ ಕಾರ್ಯನಿರ್ವಹಿಸುತ್ತಿವೆ.
ಕ್ಯಾನ್ಸರ್ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯೇ ರಾಮಬಾಣ:ಭಾರತದಲ್ಲಿ ವರ್ಷಕ್ಕೆ ಅಂದಾಜು 14 ಲಕ್ಷ ರೋಗಿಗಳು ವಿವಿಧ ಬಗೆಯ ಕ್ಯಾನ್ಸರ್​ನಿಂದ ಪೀಡಿತರಾಗುತ್ತಿದ್ದಾರೆ. ದುರಂತವೆಂದರೆ 8.5 ಲಕ್ಷಕ್ಕೂ ಅಧಿಕ ಜನರು ಈ ಮಾರಣಾಂತಿಕ ಕಾಯಿಲೆಗೆ ಬಲಿಯಾಗುತ್ತಿದ್ದಾರೆ. ಆದರೆ, ಇದನ್ನು ಆರಂಭದಲ್ಲೇ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಮತ್ತು ಆರೈಕೆ ಮಾಡಿದಲ್ಲಿ ಶೇ. 95 ಗುಣಹೊಂದಬಹುದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಬೇಕಿದೆ ಎನ್ನುತ್ತಾರೆ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಲೋಕೇಶ್. ಕ್ಯಾನ್ಸರ್ ತಗುಲಿರುವುದು ಶೀಘ್ರ ಪತ್ತೆಯಾದರೆ, ಅಷ್ಟೇ ಬೇಗದಲ್ಲಿ ಇದನ್ನು ಗುಣಪಡಿಸಬಹುದು ಎನ್ನುವುದು ಅವರ ಅಭಿಪ್ರಾಯ.
ತಂಬಾಕಿನಿಂದ ದೂರವಿರಿ:ಶೇ. 60ರಷ್ಟು ಕ್ಯಾನ್ಸರ್, ತಂಬಾಕು ಬಳಕೆಯಿಂದ ಬರುತ್ತದೆ. ಶೇ.20 ಅನುವಂಶಿಯ, ಶೇ.20 ಆಹಾರ ಕ್ರಮ, ಜೀವನಶೈಲಿ ಇತ್ಯಾದಿ ಕಾರಣಗಳಿಂದ ಬರುತ್ತದೆೆ. ಪುರುಷರಲ್ಲಿ ಶೇ.11.4 ಶ್ವಾಸಕೋಶ ಕ್ಯಾನ್ಸರ್, ಶೇ. 7.4 ಪ್ರಾಸ್ಟೇಟ್, ಶೇ. 6.5 ಕರುಳಿನ ಕ್ಯಾನ್ಸರ್, ಶೇ. 5.5 ಬಾಯಿ ಕ್ಯಾನ್ಸರ್ ಕಂಡುಬರುತ್ತಿವೆ. ಮಹಿಳೆಯರಲ್ಲಿ ಶೇ.30.7 ಸ್ತನ ಕ್ಯಾನ್ಸರ್, ಶೇ. 9.8 ಗರ್ಭಕಂಠದ ಕ್ಯಾನ್ಸರ್, ಶೇ. 6.6 ಅಂಡಾಶಯ, ಶೇ. 4.8 ಶ್ವಾಸಕೋಶದ, ಶೇ. 3.7 ಕರುಳಿನ ಕ್ಯಾನ್ಸರ್ ಕಂಡುಬರುತ್ತಿವೆ. ಮಕ್ಕಳಲ್ಲಿ ಶೇ. 80 ಅನುವಂಶಿಕವಾಗಿ ಬರಲಿದ್ದು, ಇವರಲ್ಲಿ ಲುಕೇಮಿಯಾ ಹೆಚ್ಚು ಕಂಡು ಬರುತ್ತದೆ. ಈ ಕ್ಯಾನ್ಸರನ್ನು ಶೇ. 90 ಗುಣಪಡಿಸಬಹುದಾಗಿದೆ ಎಂದರು.
ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ ಹೆಚ್ಚಿನ ಮಟ್ಟದಲ್ಲಿ ಅಧ್ಯಯನ ಹಾಗೂ ಸಂಶೋಧನೆಗಳ ಅಗತ್ಯವಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಟಾಟಾ ಮೆಮೋರಿಯಲ್ ಜೊತೆಗೆ ಕೈಜೋಡಿಸಿದೆ. ಇದರಲ್ಲಿ ದೇಶದ ಎಲ್ಲ ಚಿಕಿತ್ಸಾ ಕೇಂದ್ರಗಳು ಸೇರಿವೆ. ಇಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ಸಂಶೋಧನೆಯಲ್ಲಿ ಆಗಿರುವ ಬೆಳವಣಿಗೆಗಳ ಕುರಿತು ಪರಸ್ಪರ ಮಾಹಿತಿ ಹಂಚಿಕೊಳ್ಳಲಾಗುತ್ತದೆ.
ಕಾರಣಗಳು
1.ತಂಬಾಕು ಬಳಕೆಯಿಂದ ಶ್ವಾಸಕೋಶದ ಕ್ಯಾನ್ಸರ್, ತಲೆ ಮತ್ತು ಕುತ್ತಿಗೆ, ಬಾಯಿ, ಪ್ರಾಸ್ಟೇಟ್ ಕ್ಯಾನ್ಸರ್,
2.ಸಂಸ್ಕರಿಸಿದ ಆಹಾರ ಸೇವನೆ ಯಿಂದ ಕರುಳು ಕ್ಯಾನ್ಸರ್
3.ಅತಿಯಾದ ಮಸಾಲೆ ಪದಾರ್ಥಗಳ ಬಳಕೆಯಿಂದ ಅನ್ನನಾಳದ ಕ್ಯಾನ್ಸರ್
4.ಮಹಿಳೆಯರಲ್ಲಿ ಶುಚಿತ್ವ ಕೊರತೆಯಿಂದ ಗರ್ಭಕಂಠದ ಕ್ಯಾನ್ಸರ್
5.ವಂಶವಾಹಿ ಹಾಗೂ ಮನೆಯಲ್ಲಿ ರಾಸಾಯನಿಕ ವಸ್ತುಗಳ ಸಂಗ್ರಹದಿಂದಾಗಿ ಮಕ್ಕಳಲ್ಲಿ ಕ್ಯಾನ್ಸರ್​ಗೆ ಕಾರಣ
6.ಚೂಪಾದ ಹಲ್ಲುಗಳಿಂದ, ಅತಿಯಾದ ಧೂಮಪಾನ ದಿಂದ ನಾಲಿಗೆ ಕ್ಯಾನ್ಸರ್
| ಡಾ. ವಿ. ಲೋಕೇಶ್ ನಿರ್ದೇಶಕರು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ
ಸಾರ್ವಜನಿಕರಿಗೆ ಕ್ಯಾನ್ಸರ್ ಕುರಿತು ಮಾಹಿತಿ ನೀಡಲು ಕಿದ್ವಾಯಿ ಸಂಸ್ಥೆಯು ಡಿಡಿಡಿ.kಜಿಛಡಿಚಜಿ.kಚ್ಟ.ಜಟಡ.ಜ್ಞಿ ವೆಬ್​ಸೈಟ್​ನಲ್ಲಿ ಕ್ಯಾನ್ಸರ್ ಕಾಯಿಲೆಗಳಿಗೆ ಕಾರಣ, ರೋಗಲಕ್ಷಣ, ರೋಗ ಪತ್ತೆ ಹಾಗೂ ಚಿಕಿತ್ಸೆ ಜೊತೆಗೆ ರೋಗಿಗಳ ಆರೈಕೆ ಕುರಿತು ಮಾಹಿತಿ ಒದಗಿಸಿದೆ. ಸಾರ್ವಜನಿಕರು ಉಪಯೋಗ ಪಡೆದುಕೊಳ್ಳಬಹುದಾಗಿದೆ.
| ಡಾ. ವಿಜಯ್, ಎಪಿಡೆಮಿಯಾಲಜಿ ತಜ್ಞ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − ten =
Remember me
