ಶಿರಾ:ಉಪಸಮರ ಮುಗಿದ ಬಳಿಕ ಸೇನಾನಿಗಳು ಗೂಡು ಸೇರಿಕೊಳ್ಳುವ ಬದಲು ತಮ್ಮ ಎಂದಿನ ಕಾರ್ಯಚಟುವಟಿಕೆಗೆ ಮರಳಿದ್ದು ಕಂಡುಬಂತು. ಕಳೆದೊಂದು ತಿಂಗಳಿನಿಂದ ಪ್ರಚಾರ ಒತ್ತಡದಲ್ಲಿ ಮುಳಗಿ ಹೋಗಿದ್ದ ಅಭ್ಯರ್ಥಿಗಳ ಮೊಗದಲ್ಲಿ ಅರ್ಧಯುದ್ಧ ಗೆದ್ದ ಸಮಾಧಾನ ಎದ್ದುಕಾಣುತ್ತಿತ್ತು.
ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಟಿ.ಬಿ.ಜಯಚಂದ್ರ, ಬಿಜೆಪಿಯ ಡಾ.ಸಿ.ಎಂ.ರಾಜೇಶ್‌ಗೌಡ ಮತದಾನದ ಮರುದಿನವಾದ ಇಂದು ತಮ್ಮ, ತಮ್ಮ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಂಡರು. ಬಿಜೆಪಿಯ ಆರ್ಭಟಕ್ಕೆ ಸ್ವಲ್ಪ ಬಸವಳಿದಂತೆ ಕಂಡುಬಂದ ಜಯಚಂದ್ರ ಬುಧವಾರ ತಡವಾಗಿ ಎದ್ದು ರೆಡಿ ಆಗಿ ಬೆಳಗಿನ ಉಪಹಾರ ಮುಗಿಸುತ್ತಿದ್ದಂತೆ ನಗರದ ಅವರ ನಿವಾಸಕ್ಕೆ ಪಕ್ಷದ ಮುಖಂಡರು, ಕಾರ್ಯಕರ್ತರು ಬರತೊಡಗಿದರು. ಕ್ಷೇತ್ರದ ಕೆಲವು ಹಳ್ಳಿಗಳಿಗೆ ತೆರಳಿ ಬಿಜೆಪಿ ಅಭ್ಯರ್ಥಿ ಡಾ.ಸಿ.ಎಂ.ರಾಜೇಶ್‌ಗೌಡ ಕಾರ್ಯಕರ್ತರಿಗೆ, ಮುಖಂಡರಿಗೆ ಕೃತಜ್ಞತೆ ತಿಳಿಸಿದರು.
ವಿಶ್ರಾಂತಿಗೆ ಮೊರೆಹೋದ ಅಮ್ಮಾಜಮ್ಮ:ಕರೊನಾ ನಂತರ ಗುಣಮುಖರಾಗಿ ಚುನಾವಣಾ ಅಖಾಡಕ್ಕೆ ಧುಮುಕಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಗೆ ರಾಜಕೀಯ ಗದ್ದಲ, ಚುನಾವಣಾ ಪ್ರಚಾರ ಎಲ್ಲವೂ ಹೊಸದು. ಪತಿ ಶಾಸಕರಾಗಿ, ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರೂ ಒಮ್ಮೆಯೂ ವಿಧಾನಸೌಧ ಮೆಟ್ಟಿಲು ತುಳಿಯದ ಅಮ್ಮಾಜಮ್ಮ ಈ ಬಾರಿ ಹಳ್ಳಿ, ಹಳ್ಳಿಯಲ್ಲಿ ಸುತ್ತಿ ಮತಯಾಚಿಸಿದರು. ಧೂಳು, ಬಿಸಿಲಿನಿಂದ ಬಸವಳಿದಿದ್ದ ಅಮ್ಮಾಜಮ್ಮ ಇಂದು ತುಮಕೂರಿನ ನಿವಾಸದಲ್ಲಿ ವಿಶ್ರಾಂತಿಗೆ ಮೊರೆ ಹೋಗಿದ್ದರು. ಮನೆಗೆ ಬಂದಿದ್ದ ಪತಿಯ ಸ್ನೇಹಿತರೊಂದಿಬ್ಬರ ಜತೆ ಕುಶಲೋಪರಿ ಮಾತುಕತೆ ನಂತರ ಪೂಜೆ-ಪುನಸ್ಕಾರ, ಮನೆಯ ದೈನಂದಿನ ಕೆಲಸದಲ್ಲಿ ತೊಡಗಿಸಿಕೊಂಡು ವಿಶ್ರಾಂತಿ ಮಾಡಿದರು. ನಂತರ ಮೊಮ್ಮಕ್ಕಳೊಂದಿಗೆ ಕೇರಂ ಆಡಿ ದಣಿವು, ಒತ್ತಡದಿಂದ ಮುಕ್ತರಾದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 8 =
Remember me
