ರಾಯಚೂರು:ಡ್ರಗ್ಸ್​ ಮಾಫಿಯಾವನ್ನು ಮಟ್ಟ ಹಾಕಲು ರಾಜ್ಯಾದ್ಯಂತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದಂತೆ ಎಂತೆಂಥ ಖದೀಮರು ಸಿಕ್ಕಿಬೀಳ್ತಿದ್ದಾರೆ ಗೊತ್ತಾ? ಗಾಂಜಾ ಬೆಳೆಯುವಂತಿಲ್ಲ ಎಂಬ ನಿಷೇಧವಿದ್ದರೂ ದುಷ್ಕರ್ಮಿಗಳು ವಾಮಮಾರ್ಗದಲ್ಲಿ ಗಾಂಜಾ ಬೆಳೆಯುತ್ತಿದ್ದು, ನಿತ್ಯ ಮೂರ್ನಾಲ್ಕು ಅಕ್ರಮ ಬಯಲಾಗುತ್ತಲೇ ಇವೆ. ಡ್ರಗ್ಸ್​ ದಂಧೆಯ ಪಟ್ಟಿಗೆ ಇಂದು(ಶುಕ್ರವಾರ) ಮತ್ತೊಂದು ಕೇಸ್​ ಸೇರ್ಪಡೆಯಾಗಿದೆ.
ಖಚಿತ ಮಾಹಿತಿ ಮೇರೆಗೆ ಲಿಂಗಸೂರು ತಾಲೂಕಿನ ಗುರುಗುಂಟಾ ಕ್ರಾಸ್ ಬಳಿ ದಾಳಿ ನಡೆಸಿದ ಪೊಲೀಸರೇ ದುಷ್ಕರ್ಮಿಗಳ ಐಡಿಯಾ ಕಂಡು ದಂಗಾದರು. ಯಾರಿಗೂ ಅನುಮಾನ ಬಾರದಂತೆ ತೊಗರಿ ಹೊಲದಲ್ಲಿ ಗಾಂಜಾ ಬೆಳೆದಿದ್ದರು.
ಇದನ್ನೂ ಓದಿರಿರೈತನ ಜಮೀನು ಪಡೆದು ಬರೋಬ್ಬರಿ ನಾಲ್ಕೂವರೆ ಎಕರೆಯಲ್ಲಿ ಗಾಂಜಾ ಬೆಳೆದ ದುಷ್ಕರ್ಮಿ
ಗುರುಗುಂಟಾ ಕ್ರಾಸ್ ಬಳಿಯ ಜಮೀನೊಂದರಲ್ಲಿ ತೊಗರಿ ಸಾಲುಗಳ ನಡುವೆ ಗಾಂಜಾ ಬೆಳೆದಿರುವ ಕುರಿತು ರಾಂಪುರ ಠಾಣೆ ಪಿಎಸ್ಐ ಗುಡ್ಡಪ್ಪ ನೇತೃತ್ವದ ತಂಡ ಶುಕ್ರವಾರ ಬೆಳಗ್ಗೆ ದಾಳಿ ನಡೆಸಿತ್ತು.
ತೊಗರಿ ಬೆಳೆಯ ಮಧ್ಯೆ ಗಾಂಜಾ ಗಿಡಗಳು ಸೊಂಪಾಗಿ ಬೆಳೆದಿದ್ದವು. ಅಕ್ರಮವಾಗಿ ಗಾಂಜಾ ಬೆಳೆದಿದ್ದ ಆರೋಪದಡಿ ಗುಜ್ಜರದೊಡ್ಡಿಯ ಪರಸಪ್ಪ ಹಾಗೂ ಅಮರೇಶ ಎಂಬುವವರನ್ನು ಬಂಧಿಸಿರುವ ಪೊಲೀಸರು, 9 ಕೆಜಿ 100 ಗ್ರಾಂ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಕಳೆದ ವಾರವಷ್ಟೇ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ ಬಳ್ಳಾರಿ ಮೂಲದ ವ್ಯಕ್ತಿಯೊಬ್ಬ ರೈತರಿಂದ ಗುತ್ತಿಗೆ ಪಡೆದ ನಾಲ್ಕೂವರೆ ಎಕರೆ ಜಮೀನಿನಲ್ಲಿ ಗಾಂಜಾ ಬೆಳೆದಿದ್ದನ್ನು ಪೊಲೀಸರು ಜಪ್ತಿ ಮಾಡಿದ್ದರು. ಮಂಡ್ಯ ಮತ್ತು ಬೆಳಗಾವಿ, ಬೀದರ್​ ಜಿಲ್ಲೆಯಲ್ಲೂ ದುಷ್ಕರ್ಮಿಗಳು ಕಬ್ಬಿನ ಗದ್ದೆಯಲ್ಲಿ ಗಾಂಜಾ ಬೆಳೆದು ಸಿಕ್ಕಿಬಿದ್ದಿದ್ದರು. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನಿಲುವಾಗಿಲು ಗ್ರಾಮದಲ್ಲಿ ವೃದ್ಧನೊಬ್ಬ ಮನೆಯ ಹಿತ್ತಲಲ್ಲೇ ಹೂವಿನ ಕುಂಡದಲ್ಲಿ ಗಾಂಜಾ ಬೆಳೆದಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದರು.
ಅಬ್ಬಬ್ಬಾ! ಇಂತಹ ವಂಚಕರ ಕೃತ್ಯವನ್ನ ಹೇಳ ಹೊರಟರೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಡ್ರಗ್ಸ್​ ಮಾಫಿಯಾವನ್ನು ಬುಡ ಸಮೇತ ಕಿತ್ತೊಗೆಯಲು ಯತ್ನಿಸುತ್ತಿರುವ ಪೊಲೀಸರ ಕಾರ್ಯಾಚರಣೆಯು ದಂಧೆಕೋರರಿಗೆ ನಡುಕ ಹುಟ್ಟಿಸಿದೆ.
ಡೋಪಿಂಗ್​ ಟೆಸ್ಟ್​ಗೆ ಯೂರಿನ್​ ಕೇಳಿದ್ರೆ ರಾಗಿಣಿ ಕೊಟ್ಟದ್ದು ಮಾತ್ರ ಬೇರೇನೋ…

‘ಏನಪ್ಪ ಜಮೀರ್ ನಿನ್ನ ಹೆಸರು ಮೀಡಿಯಾದಲ್ಲಿ ಬರ್ತಿದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 5 =
Remember me
