ಬೆಂಗಳೂರು:ದೇಶದ್ರೋಹಿ ಚಟುವಟಿಕೆಗಳಲ್ಲಿ ಭಾಗಿ ಆಗಿದ್ದರೆನ್ನಲಾದ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಇಂದು ಬೆಂಗಳೂರಿನಲ್ಲಿ ಬಂಧಿಸಿದ್ದು, ವಿಚಾರಣೆ ವೇಳೆ ಆರೋಪಿಗಳಿಂದ ಹಲವಾರು ರೋಚಕ ಸಂಗತಿಗಳು ಬಹಿರಂಗಗೊಂಡಿವೆ. ಆದರೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಅವರನ್ನು ಟೆರರಿಸ್ಟ್ ಎಂದು ಈಗಲೇ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಬೆಂಗಳೂರಿನಲ್ಲಿ ಹೆಬ್ಬಾಳ ಠಾಣೆ ವ್ಯಾಪ್ತಿಯಲ್ಲಿ 5 ಜನ ಅಪರಾಧಿಗಳನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಏಳು ಕಂಟ್ರಿಮೇಡ್​ ಪಿಸ್ತೂಲ್, ವಾಕಿ-ಟಾಕಿ, ಆಯುಧಗಳು ಸಿಕ್ಕಿವೆ. ವಿಚಾರಣೆ ಮಾಡಿದಾಗ ಕೇಂದ್ರ ಕಾರಾಗೃಹದ ಜೊತೆ ಸಂಪರ್ಕ ಹೊಂದಿದ್ದೂ ಗೊತ್ತಾಗಿದೆ ಎಂದು ಸಚಿವರು ಹೇಳಿದ್ದಾರೆ.
ಇದನ್ನೂ ಓದಿ:ತನಿಖೆ ವೇಳೆ ರೋಚಕ ಸಂಗತಿಗಳ ಬಗ್ಗೆ ಬಾಯ್ಬಿಟ್ಟ ಶಂಕಿತ ಉಗ್ರರು..
ಬಂಧಿತರು ಕೆಲವು ಕೃತ್ಯ ಮಾಡುವ ಬಗ್ಗೆ ಮಾಹಿತಿ ಸಿಕ್ಕಿದೆ. ಇದು ಬೆಂಗಳೂರು ಹಾಗೂ ಇತರೆಡೆಗೆ ಅಪಾಯಕಾರಿ ವಿಚಾರ. ಅವರನ್ನು ವಿಚಾರಣೆ ಮಾಡಿ ಟೆರರಿಸ್ಟ್ ಕನೆಕ್ಷನ್ ಇದೆಯಾ ಅಂತ ನೋಡುತ್ತಿದ್ದಾರೆ. ಅದನ್ನು ನೋಡಿ ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಟೆರರಿಸ್ಟ್ ಅಂತ ಈಗಲೇ ಹೇಳಲು ಸಾಧ್ಯವಿಲ್ಲ ಎಂದು ಗೃಹಸಚಿವರು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:ಸೀಬೆಹಣ್ಣು ಕೀಳಲು ಮರ ಹತ್ತಿದ್ದವಳ ಕೊರಳಿಗೆ ವೇಲೇ ಉರುಳಾಗಿ ಸಾವು!
ಅವರು ವಾಕಿಟಾಕಿ ಯಾಕೆ ಉಪಯೋಗಿಸುತ್ತಿದ್ದರು? ಅದನ್ನು ಯಾಕೆ ವಿರೂಪ ಮಾಡಿದ್ದರು ಎನ್ನುವ ನಿಟ್ಟಿನಲ್ಲಿಯೂ ತನಿಖೆ ನಡೆಯಲಿದೆ. ಮೊದಲು ನಮ್ಮ ಪೊಲೀಸರು ತನಿಖೆ ನಡೆಸಿದ ಬಳಿಕ ಎನ್​ಐಎ ತನಿಖೆ ಆಗ್ರಹ ವಿಚಾರ ಎಂದೂ ಪರಮೇಶ್ವರ್ ತಿಳಿಸಿದರು.
ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

ಚಿಕಿತ್ಸೆಗೆಂದು ದಾಖಲಾಗಿದ್ದ ಡಾಕ್ಟರ್​ ಬೆಳಗಾಗುವಷ್ಟರಲ್ಲಿ ಇಲ್ಲ!; ಪತ್ನಿಗೆ ಶವ ಸಿಗುವವರೆಗೂ ಆಸ್ಪತ್ರೆಯವರಿಗೆ ವಿಷ್ಯ ಗೊತ್ತಾಗ್ಲಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + 8 =
Remember me
