ದಾವಣಗೆರೆ:ಬೆಳಗಾವಿಯಿಂದ ಶಿವಮೊಗ್ಗಕ್ಕೆ ಸ್ನೇಹಿತರನ್ನು ಬಿಟ್ಟು ವಾಪಸ್​ ಊರಿಗೆ ಕಾರಿನಲ್ಲಿ ಬರುತ್ತಿದ್ದ ಯುವಕನೊಬ್ಬ ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಭೀಕರ ಅಪಘಾತಕ್ಕೀಡಾಗಿ ಮೃತಪಟ್ಟ ಘಟನೆ ನಿನ್ನೆ(ಶನಿವಾರ) ರಾತ್ರಿ ಸಂಭವಿಸಿದೆ.
ಬೆಳಗಾವಿ ಜಿಲ್ಲೆ ಬಸವನಕುಡಚಿ ಗ್ರಾಮದ ಎಎಸ್ಐ ಪುತ್ರ ಪ್ರಕಾಶ್ ಚೆಂಬಪ್ಪ(28) ಮೃತ ದುರ್ದೈವಿ. ಶನಿವಾರ ಸಂಜೆ ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ಬರಲು ತೆರಳಿದ್ದ. ವಾಪಸ್​ ಬೆಳಗಾವಿಗೆ ಹೊನ್ನಾಳಿ-ಹರಿಹರ ಮಾರ್ಗವಾಗಿ ಕಾರಿನಲ್ಲಿ ಪ್ರಕಾಶ್ ಒಬ್ಬನೇ ಬರುತ್ತಿದ್ದ.
ಮಾರ್ಗಮಧ್ಯೆ ಮಧ್ಯರಾತ್ರಿ 1 ಗಂಟೆಯಲ್ಲಿ ಮಾಸಡಿ ಗ್ರಾಮದ ಸಮೀಪ ಇರುವ ಮಹೇಶ್ವರ ಹಳ್ಳದ ಹತ್ತಿರ ಹೊನ್ನಾಳಿ-ಹರಿಹರ ರಸ್ತೆಗೆ ನಿರ್ಮಿಸಿರುವ ಸೇತುವೆಗೆ ಕಾರು ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದಿದೆ. ಕಾರಿನಲ್ಲಿ ಎರಡು ಏರ್ ಬ್ಯಾಗ್ ಓಪನ್ ಆಗಿದ್ದು, ಮೃತದೇಹ ಕಾರಿನ ಸೀಟಿನ ಹಿಂಭಾಗದಲ್ಲಿ ಸಿಕ್ಕಿದೆ.
ಹೊನ್ನಾಳಿ- ನ್ಯಾಮತಿ ರಸ್ತೆಯಲ್ಲಿ ಹೊನ್ನಾಳಿಯಿಂದ 3 ಕಿ.ಮೀ. ದೂರದಲ್ಲಿ ಇತ್ತೀಚಿಗೆ ತುಂಗಾನಾಲೆಯಲ್ಲಿ ರೇಣುಕಾಚಾರ್ಯರ ಸಹೋದರನ‌ ಪುತ್ರ ಚಂದ್ರು ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಇದೀಗ ಹೊನ್ನಾಳಿ-ಹರಿಹರದ ರಸ್ತೆಯಲ್ಲಿ ಹೊನ್ನಾಳಿ ದಾಟಿ 3 ಕಿ.ಮೀ. ದೂರದ ಮಾಸಡಿ ಮಹೇಶ್ವರಿ ಹಳ್ಳಕ್ಕೆ ಪ್ರಕಾಶ್ ಕಾರು ಬಿದ್ದಿದೆ. ಕಾಕತಾಳೀಯ ಎಂಬಂತೆ ಎರಡೂ ಅಪಘಾತಗಳು ಒಂದೇ ರೀತಿ ಆಗಿವೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + thirteen =
Remember me
