ತುಮಕೂರು:ಕೊರಟಗೆರೆ ತಾಲೂಕಿನ ತುಂಬಾಡಿ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಸಮೀಪ ಜ.30ರ ಬೆಳಗಿನ ಜಾವ ಕಾರಿನಲ್ಲಿ ಚಾಲಕ ಶವವಾಗಿ ಬಿದ್ದಿದ್ದ ಪ್ರಕರಣವನ್ನ ಪೊಲೀಸರು ಭೇದಿಸಿದ್ದು, ಕೊಲೆ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಜ.29ರ ಮಧ್ಯರಾತ್ರಿ ಮಹಿಂದ್ರಾ ವೆರಿಟೋ ಕಾರಿನ ಚಾಲಕ, ಬೆಂಗಳೂರಿನ ಅತ್ತಿಬೆಲೆ ನಿವಾಸಿ ನಿಸಾರ್​ ಅಹಮದ್​(34)ನನ್ನು ಕೊಂದ ದುಷ್ಕರ್ಮಿ, ಕಾರು ಅಪಘಾತ ಆಗಿದೆ ಎಂಬಂತೆ ಬಿಂಬಿಸಿ ಪರಾರಿಯಾಗಿದ್ದ. ಬೆಳಗಿನಜಾವ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಚುರುಕುಗೊಳಿಸಿದ್ದರು. ಬಾಡಿಗೆದಾರನ ಸೋಗಿನಲ್ಲಿ ಕಾರು ಹತ್ತಿದ್ದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಗೋಪನಹಳ್ಳಿಯ ವೀರೇಂದ್ರ(24), ಕಾರು ಚಾಲಕನ ಎದೆಗೆ ಚಾಕು ಇರಿದು ಕೊಂದಿದ್ದಾನೆ. ಅಷ್ಟಕ್ಕೂ ಈತ ಚಾಲಕನನ್ನ ಕೊಂದದ್ದು ಏಕಂತೆ ಗೊತ್ತಾ? ಅದ್ದೂರಿಯಾಗಿ ಅಕ್ಕನ ಮದುವೆ ಮಾಡಲು!ಇದನ್ನೂ ಓದಿರಿಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!
ಆನೇಕಲ್​ ತಾಲೂಕಿನ ಅತ್ತಿಬೆಲೆಯಲ್ಲಿ ಕೆಲಸ ಮಾಡಿಕೊಂಡಿದ್ದ ವೀರೇಂದ್ರನಿಗೆ ಅಕ್ಕ ಇದ್ದಾಳೆ. ಆಕೆಯ ಮದುವೆಯನ್ನ ಅದ್ದೂರಿಯಾಗಿ ಮಾಡುವ ಕನಸು ಕಂಡಿದ್ದ ವೀರೇಂದ್ರ ಹಣದ ಮೂಲ ಹುಡುಕುತ್ತಿದ್ದ. ಅಷ್ಟರಲ್ಲಿ ನಿಸಾರ್​ ಅಹಮದ್​ನ ಕಾರಿನಲ್ಲಿ ಜ.29ರ ರಾತ್ರಿಯೇ ಬೆಂಗಳೂರಿನಿಂದ ಕೊರಟಗೆರೆಗೆ ಹೊರಟಿದ್ದ. ಮಾರ್ಗಮಧ್ಯೆ ಚಾಲಕನನ್ನು ಮುಗಿಸಿ, ಕಾರು ಸಮೇತ ಪರಾರಿಯಾಗಲು ವೀರೇಂದ್ರ ಸಂಚು ರೂಪಿಸಿದ್ದ. ಅದರಂತೆ ನೆಲಮಂಗಲದಲ್ಲೇ ಕೊಲೆಗೆ ಯತ್ನಿಸಬೇಕು ಅನ್ನುವಷ್ಟರಲ್ಲಿ ಪೊಲೀಸರು ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆಯಿಂದಾಗಿ ಪ್ಲಾನ್​ ಕೈಕೊಟ್ಟಿತ್ತು. ನೆಲಮಂಗಲದ ಸಂಗಮ ಹೋಟೆಲ್​ನಲ್ಲಿ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದರು.ಅಲ್ಲಿಂದ ಕೊರಟಗೆರೆಗೆ ಬಂದಿದ್ದು, ನನ್ನ ಮಾವ ಬರ್ತಾರೆ. ಕಾರಿನ ಬಾಡಿಗೆ ಹಣ ಕೊಡ್ತಾರೆ ಎಂದು ವಿರೇಂದ್ರ ಹೇಳಿದ್ದ. ರಾತ್ರಿ ಆಗಿದ್ದರಿಂದ ರಸ್ತೆಬದಿ ಕಾರು ನಿಲ್ಲಿಸಿದ್ದ ಚಾಲಕ ಸೀಟಿನಲ್ಲೇ ಕುಳಿತು ನಿದ್ರೆಗೆ ಜಾರಿದ್ದ. ಅಷ್ಟರಲ್ಲಿ ಚಾಕುವಿನಿಂದ ಆತನ ಎದೆಗೆ ಇರಿದು ಕೊಂದ ವೀರೇಂದ್ರ, ಅಲ್ಲಿಂದ ಕಾರು ತೆಗೆದುಕೊಂಡು ಹೋಗಲು ಆಗದೆ ಭಯದಿಂದ ಪರಾರಿಯಾಗಿದ್ದ.
ಈ ಕೊಲೆ ಸಂಬಂಧ ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ‌.ವಂಶಿಕೃಷ್ಣ ವಿಶೇಷ ತಂಡ ರಚಿಸಿದ್ದರು. ಕೊನೆಗೂ ಸಿಕ್ಕ ಆರೋಪಿ, ಪೊಲೀಸರ ಬಳಿ ಸತ್ಯ ಬಾಯ್ಬಿಟ್ಟಿದ್ದಾನೆ. ಇದೇ 16ರಂದು(ಫೆ.16) ನನ್ನ ಅಕ್ಕನ ಮದುವೆ ಇದೆ. ಗ್ರ್ಯಾಂಡ್​ ಆಗಿ ಮದುವೆ ಮಾಡಿ, ಬಳಿಕ ವಿವಿಧ ದೇವಸ್ಥಾನಗಳಿಗೆ ಕಾರಿನಲ್ಲಿ ಕರೆದುಕೊಂಡು ಹೋಗುವ ಉದ್ದೇಶದಿಂದ ಈ ಕೃತ್ಯ ಎಸಗಿದೆ ಎಂದಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಶೃಂಗೇರಿಯಲ್ಲಿ ಬಾಲಕಿ ಮೇಲೆ 30ಕ್ಕೂ ಹೆಚ್ಚು ಜನರಿಂದ ಅತ್ಯಾಚಾರ: ಸರ್ಕಲ್​ ಇನ್​ಸ್ಪೆಕ್ಟರ್​ ಅಮಾನತು

ಅಡಕೆ ರೂಪದಲ್ಲಿ ಮನೆಗೆ ಬಂದ ಜವರಾಯ 1 ವರ್ಷದ ಮಗುವಿನ ಪ್ರಾಣ ಹೊತ್ತೊಯ್ದ!

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ವೇಶ್ಯೆ ಸೋಗಲ್ಲಿ ಯುವಕರ ಕೋಣೆಗೆ ಆಂಟಿ ಎಂಟ್ರಿ! ಸಲ್ಲಾಪದ ವೇಳೆ ವರಸೆ ಬದಲು, ಬೆಸ್ತುಬಿದ್ದವ ಮಾಡಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + thirteen =
Remember me
