ದಾವಣಗೆರೆ:ನಿಯಂತ್ರಣ ತಪ್ಪಿದ ಕಾರೊಂದು ಬುಧವಾರ ಬೆಳಗ್ಗೆ ದಾವಣಗೆರೆ ಸಮೀಪದ ಬಾತಿ ಕೆರೆಗೆ ಬಿದ್ದಿದ್ದು, ಅದರಲ್ಲಿ ಪ್ರಯಾಣಿಸುತ್ತಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರು ಹರಿಹರ ಕಡೆಯಿಂದ ದಾವಣಗೆರೆಯತ್ತ ಬರುತ್ತಿತ್ತು. ಬಾತಿ ಕೆರೆ ಬಳಿ ಬಂದಾಗ ನಿಯಂತ್ರಣ ತಪ್ಪಿ ನೀರಿಗೆ ಉರುಳಿತು. ಆ ಸದ್ದು ಕೇಳಿ ಸಮೀಪದಲ್ಲಿದ್ದ ಯುವಕರು ಧಾವಿಸಿ ಕಾರಲ್ಲಿದ್ದವರನ್ನು ರಕ್ಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:#MarriageStrike : ಮದುವೆ ವಿರುದ್ಧ ಪುರುಷರ ಅಭಿಯಾನ!
ಹರಿಹರ ಬಳಿಯ ಅಮರಾವತಿ ಕಾಲನಿ ನಿವಾಸಿಗಳಾದ ಮುನೀಷ್ ಧವನ್, ಅವರ ಪತ್ನಿ ಮತ್ತು ತಾಯಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅವರು ದಾವಣಗೆರೆ ಕಡೆಗೆ ಹೊರಟಿದ್ದರು ಎಂದು ತಿಳಿದುಬಂದಿದೆ.
ಗ್ರಾಮೀಣ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಕ್ರೇನ್ ಬಳಸಿ ಕಾರನ್ನು ಕೆರೆಯಿಂದ ಮೇಲೆತ್ತಲಾಯಿತು. ಈ ದೃಶ್ಯವನ್ನು ನೋಡಲು ಸಾರ್ವಜನಿಕರು ಸೇರಿದ್ದರು. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಎರಡೂ ಡೋಸ್ ಲಸಿಕೆ ಪಡೆದಿದ್ರೂ ಇಲ್ಲಿದೆ ಒಂದು ಆತಂಕಕಾರಿ ವಿಷಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 3 =
Remember me
