ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ(ಸೋಮವಾರ) ಸಂಜೆ ಚಲಿಸುತ್ತಿದ್ದ ಕಾರು ರಸ್ತೆಯಲ್ಲೇ ಹೊತ್ತಿ ಉರಿದ್ದಿತ್ತು. ಇದರ ಬೆನ್ನಲ್ಲೇ ಇಂದು ಸಂಜೆ ಮತ್ತೊಂದು ವಾಹನ ರಸ್ತೆಯಲ್ಲೇ ಬೆಂಕಿಗೆ ಆಹುತಿಯಾಗಿದೆ.
ಕಡಬ ತಾಲೂಕಿನ ಮಣ್ಣಗುಂಡಿ ಎಂಬಲ್ಲಿ ಮಂಗಳವಾರ ಸಂಜೆ ಶಿರಾಡಿಯಿಂದ‌ ನೆಲ್ಯಾಡಿಗೆ ಬರುತ್ತಿದ್ದ ಪ್ಯಾಸೆಂಜರ್​ ವಾಹನ ಸಂಪೂರ್ಣ ಭಸ್ಮವಾಗಿದ್ದು, ಚಾಲಕ ಸೇರಿ ಮೂವರು ಅಪಾಯದಿಂದ ಪಾರಾಗಿದ್ದಾರೆ.ಇದನ್ನೂ ಓದಿರಿಮುಂಗುಸಿ ಸೆರೆಯಾಗಬೇಕಿದ್ದ ಬೋನಲ್ಲಿ ಚಿರತೆ ಲಾಕ್​ ಆಗಿದ್ದೇ ರೋಚಕ!
ಚಲಿಸುತ್ತಿದ್ದ ವಾಹನದಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ವಾಹನ ನಿಲ್ಲಿಸಿದ ಚಾಲಕ ಮತ್ತು ಪ್ರಯಾಣಿಕರಿಬ್ಬರು ಕೂಡಲೇ ಕೆಳಗಿಳಿದಿದ್ದಾರೆ. ಕ್ಷಣಾರ್ಧದಲ್ಲೇ ಧಗಧಗಿಸಿ ಉರಿದ ಕಾರು, ಸುಟ್ಟು ಕರಕಲಾಯಿತು. ಬ್ಯಾಟರಿ ಭಾಗದಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಸೋಮವಾರ ಸಂಜೆ ಕೊಲ್ನಾಡು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಹತ್ತಿಕೊಂಡು ಅದೂ ಕೂಡ ಸಂಪೂರ್ಣ ಭಸ್ಮವಾಗಿತ್ತು. ಕಾರ್ನಾಡು ನಿವಾಸಿ ಫಯಾಝ್ ಅವರು ಕಾರನ್ನು ಪಣಂಬೂರಿನಿಂದ ಮೂಲ್ಕಿಗೆ ಚಲಾಯಿಸಿಕೊಂಡು ಬರುತ್ತಿದ್ದಾಗ ಕಾರಿನ ಬಾನೆಟ್ ಒಳಗಡೆ ಹತ್ತಿಕೊಂಡಿದ್ದ ಬೆಂಕಿ ಇಡೀ ಕಾರನ್ನೇ ಆಹುತಿ ಪಡೆದಿತ್ತು.
ಮುಂಗುಸಿ ಸೆರೆಯಾಗಬೇಕಿದ್ದ ಬೋನಲ್ಲಿ ಚಿರತೆ ಲಾಕ್​ ಆಗಿದ್ದೇ ರೋಚಕ!

ಸಿಎಂ ಯಡಿಯೂರಪ್ಪರ ಮನೆಗೆ ಸಂತರ ದಂಡು! 40 ಸ್ವಾಮೀಜಿಗಳ ಬೇಡಿಕೆ ಏನು?

ಬಾಲಿವುಡ್​ ಹಿರಿಯ ನಟ ರಾಜೀವ್ ಕಪೂರ್ ಇನ್ನಿಲ್ಲ

ತಹಸೀಲ್ದಾರ್​ ಕಚೇರಿ ಬಳಿ ಹಾವಿನ ಜತೆ ಆಟವಾಡುತ್ತಿದ್ದ ವೃದ್ಧ ಕ್ಷಣಾರ್ಧದಲ್ಲೇ ಪ್ರಾಣಬಿಟ್ಟ!

ವಿದ್ಯಾರ್ಥಿನಿ ಜತೆ ಲೆಕ್ಚರರ್​ ಮಗನ ಕಾಮಪುರಾಣ! 3 ವರ್ಷದಿಂದ ಲವ್​-ಸೆಕ್ಸ್​-ಅಬಾರ್ಷನ್​​: ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − twelve =
Remember me
