ಬೆಂಗಳೂರು:ಕಾರಿನ ಆಸೆಗೆ ಬಿದ್ದ ವೃದ್ಧನೊಬ್ಬ ಸಾವಿರಾರು ರೂಪಾಯಿ ಕಳೆದುಕೊಂಡು ಮೋಸ ಹೋಗಿರುವ ಘಟನೆ ನಡೆದಿದೆ.
ಹೊಸಕೆರೆಹಳ್ಳಿ ನಿವಾಸಿ ಶ್ರೀನಾಥ್ (76) ಮೋಸ ಹೋದವರು. ಕಳೆದ ಕೆಲ ದಿನಗಳ ಹಿಂದೆ ನ್ಯಾಪ್ಟೋಲ್​ ಆನ್​ಲೈನ್​ ಶಾಪಿಂಗ್​ (Naaptol Online Shopping pvt ltd) ಇಂದ ಒಂದು ಪೋಸ್ಟ್​ (ಅಂಚೆ) ಬಂದಿತ್ತು. ಅದರಲ್ಲಿ ಲಕ್ಕಿ ಡ್ರಾ ಮೂಲಕ ನಿಮಗೆ XUV 500 ಕಾರ್ ಬಹುಮಾನವಾಗಿ ಬಂದಿದೆ ಎಂದಿತ್ತು.
ಇದನ್ನೂ ಓದಿ:ಲವರ್​ ತಲೆ ಕತ್ತರಿಸಿದ ಮಹಿಳೆ: ಪ್ರೇಮ ವೈಫಲ್ಯವಲ್ಲ, ಕಾರಣ ಕೇಳಿದ್ರೆ ಶಾಕ್​ ಆಗೋದು ಖಂಡಿತ!
ಫೋಸ್ಟ್ ನೋಡಿ ಅದರಲ್ಲಿದ್ದ 9432157469 ನಂಬರ್​ಗೆ ಶ್ರೀನಾಥ್ ಕರೆ ಮಾಡಿದ್ದಾರೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ನೀವು ಬಹುಮಾನ ಪಡೆದುಕೊಳ್ಳಲು ತೆರಿಗೆ ಪಾವತಿಸಬೇಕು ಎಂದಿದ್ದಾನೆ. ಅದನ್ನು ನಂಬಿದ ಶ್ರೀನಾಥ್​, ಹಿಂದು-ಮುಂದು ಯೋಚಿಸದೇ ಬ್ಯಾಂಕ್ ಮೂಲಕ ಹಂತ ಹಂತವಾಗಿ ಹಣ ಜಮಾವಣೆ ಮಾಡಿದ್ದಾರೆ.
ಒಟ್ಟು 59 ಸಾವಿರದ 200 ರೂಪಾಯಿಗಳನ್ನು ಅಪರಿಚಿತನ ಅಕೌಂಟ್ ಗೆ ಜಮಾವಣೆ ಮಾಡಿದ್ದಾರೆ. ಬಳಿಕ ಆರೋಪಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದು, ಮೋಸ ಹೋಗಿರೋದು ಬೆಳಕಿಗೆ ಬಂದಿದೆ.
ವಂಚಿಸಿದ ಅಪರಿಚಿತನ ವಿರುದ್ಧ ಸೌತ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇತ್ತ ಕಾರು ಬರುತ್ತದೆ ಎಂದು ಕುಟುಂಬಸ್ಥರೆಲ್ಲರಿಗೂ ತಿಳಿಸಿದ್ದ ಶ್ರೀನಾಥ್, ಮೋಸ ಹೋದ ಬೆನ್ನಲ್ಲೇ ಆರೋಗ್ಯದಲ್ಲಿ ಏರುಪೇರಾಗಿದೆ.(ದಿಗ್ವಿಜಯ ನ್ಯೂಸ್​)
ಇದನ್ನು ಓದಿ:ರೌಡಿ ರೋಮಿಯೋಗಳ ಲೈಂಗಿಕ ಕಿರುಕುಳಕ್ಕೆ ಬೇಸತ್ತು ನೇಣು ಹಾಕಿಕೊಂಡ ಯುವತಿ
ಬಾಯ್​ಫ್ರೆಂಡ್​ಗಳನ್ನು ಓಡಿಸಿ ಬಾಲಕಿಯರ ಮೇಲೆ ಅತ್ಯಾಚಾರ, ವಿಡಿಯೋ ಚಿತ್ರೀಕರಿಸಿಕೊಂಡು ಬ್ಲ್ಯಾಕ್​ಮೇಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eighteen =
Remember me
