ಕಲಬುರಗಿ: ಸೈಡ್ ಇಂಡಿಕೇಟರ್ ರಾಂಗ್ ರಾಂಗ್‌ ಹಾಕಿರೋದನ್ನ ಪ್ರಶ್ನಿಸಿದಕ್ಕೆ ಕೊಲೆ ಮಾಡಿರುವ ಪ್ರಕರಣಕ್ಕೆ, ಸ್ಫೋಟಕ ಮಾಹಿತಿಯೊಂದು ದೊರಕಿದೆ. ಈ ಪ್ರಕರಣದಲ್ಲಿ ಮಾಜಿ ಶಾಸಕನ ಪುತ್ರನನ್ನು ಪೊಲೀಸರು ಅರೆಸ್ಟ್​​ ಮಾಡಿದ್ದಾರೆ.
ಪ್ರಮೋದ್ ಕೊಲೆಯಾದ ವ್ಯಕ್ತಿ. ಈತ ಟ್ರಾನ್ಸಪೋರ್ಟ್ ಉದ್ಯಮಿಯಾಗಿದ್ದನು. ಈ ಪ್ರಕರಣಕ್ಕೆ ಸಂಬಧಿಸಿದಂತೆ ಎಮ್ ಬಿ ನಗರ ಪೊಲೀಸರು ಮಾಜಿ ಶಾಸಕನ ಪುತ್ರ ಮತ್ತು ಮೊಮ್ಮಕ್ಕಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಕರೊನಾ ಹೋಯ್ತಲ್ಲ ಅಂತ ನಿಟ್ಟುಸಿರು ಬಿಡುವಾಗಲೇ ಮತ್ತೊಂದು ಎಚ್ಚರಿಕೆ ನೀಡಿದ ಡಬ್ಲ್ಯುಎಚ್​ಒ
ಮಾಜಿ ಶಾಸಕ ನಾಗರಾಜ್ ಹೊಡೆಲ್ ಪುತ್ರ ಸ್ವರಾಜ್ ಅಲಿಯಾಸ್ ಸಾಹಿಲ್ ಬಂಧನ್, ಮತ್ತೊಬ್ಬ ಮೈನರ್ ಬಂಧಿತ ಆರೋಪಿಗಳು.
ನಾಗರಾಜ್ ಹೊಡೆಲ್ ಪುತ್ರ ಸ್ವರಾಜ್ ಅಲಿಯಾಸ್ ಸಾಹಿಲ್ ಡಾನ್ ಆಗಬೇಕು ಅಂತಾ ರೌಡಿಸಂಗೆ ಎಂಟ್ರಿ ಕೊಟ್ಟಿದ್ದನು. ಡಾನ್ ಸಾಹಿಲ್ ಭಾಯ್ ಅಂತಾ ತನ್ನನ್ನ ಕರೆಯುವಂತೆ ಸ್ವರಾಜ್ ಹೇಳುತ್ತಿದ್ದನು. ಡಾನ್ ಆಗಬೇಕು, ತನ್ನನ್ನ ಭಾಯ್ ಅಂತಾ ಕರೆಯಬೇಕು ಅಂತಾ ಚಾಕುವಿನಿಂದ ಇರಿದು ಕೊಲೆ ಮಾಡಿದ ಆರೋಪಿಗಳ ಬಂಧನ ಮಾಡಲಾಗಿದೆ.
ಇದನ್ನೂ ಓದಿ: ಈಜುಕೊಳದಲ್ಲಿ ಮಿಂದೆದ್ದ ಎಮ್ಮೆಗಳು! ದಂಪತಿಗಾದ ನಷ್ಟದ ಮೊತ್ತ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ
ನಡೆದಿದ್ದೇನು?: ಮೃತ ಪ್ರಮೋದ್​​​ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲುಕಿನ ಚಂದನಕೇರಾ ಗ್ರಾಮದ ನಿವಾಸಿ. ಪ್ರಮೋದ್ ಚೊಂಚೋಳಿ ತಾಲ್ಲುಕಿನ ಸಿಮೆಂಟ್ ಫ್ಯಾಕ್ಟರಿಗಳಲ್ಲಿ ಟ್ರಾನ್ಸಪೋರ್ಟ್ ಉದ್ಯಮ ಮಾಡಿಕೊಂಡು ಕಲಬುರಗಿ ನಗರದ ಪೂಜಾ ಕಾಲೋನಿಯ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ.
ರಾತ್ರಿ ಬೈಕ್​​ನಲ್ಲಿ ಬರುತ್ತಿದ್ದ ವೇಳೆ ಜಿ ರಸ್ತೆಯಲ್ಲಿ ಹೋಗುವಾಗ ಮಹಿಂದ್ರಾ ಥಾರ್ ಕಾರೊಂದು ಪಾಸ್ ಆಗ್ತಾ ಇತ್ತು. ಈ ವೇಳೆ ಆ ಕಾರ್ ಸೈಡ್ ಹೊಡೆದು ಮುಂದೆ ಹೋಗಬೇಕು ಅಂತಾ ಅಂದುಕೊಂಡಾಗ ಮಹಿಂದ್ರಾ ವಾಹನದವರು ಎರಡು ಕಡೆಯ ಇಂಡಿಕೇಟರ್ ಅನ್ನ ಆನ್ ಮಾಡಿ ಹಿಂದೆ ಬರುವವರಿಗೆ ಕನ್ಪ್ಯೂಸ್ ಮಾಡುತ್ತಿದ್ದರು. ಕೆಲ ಕಾಲ ಇದೇ ರೀತಿಯಲ್ಲಿ ಕನ್ಪ್ಯೂಸ್ ಮಾಡಿದ್ದರು. ಬಳಿಕ ಬಾರಾ ಹಿಲ್ಸ್ ಏರಿಯಾ ಬಳಿ ಪ್ರಮೋದ್ ಬೈಕ್ ಸೈಡ್ ಗೆ ಹಾಕಿ ಯಾಕೆ ಇಂಡಿಕೇಟರ್ ರಾಂಗ್, ರಾಂಗ್ ಹಾಕಿ ಕನ್ಪ್ಯೂಸ್ ಮಾಡ್ತಿದ್ದೀರಿ ಅಂತಾ ಪ್ರಮೋದ್ ಅವಿನಾಶ್ ಇಬ್ಬರು ಕೂಡ ಮಹಿಂದ್ರಾ ವಾಹನದಲ್ಲಿದ್ದವರಿಗೆ ಪ್ರಶ್ನೆ ಮಾಡೋದಕ್ಕೆ ಮುಂದಾಗಿದ್ದರು..ತಕ್ಷಣ ಮಹಿಂದ್ರಾ ವಾಹನದಲ್ಲಿದ್ದವನು ಕಾರಿನಿಂದ ಇಳಿದವನೆ ತನ್ನ ಬಳಿಯಿದ್ದ ಚಾಕುವಿನಿಂದ ನಾಲ್ಕೈದು ಬಾರಿ ಪ್ರಮೋದ್ ಗೆ ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದೀಗ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಹೊಸ ಸಂಸತ್​ ಭವನದಲ್ಲಿ ಪ್ರಧಾನಿಯಿಂದ ರಾಜದಂಡ ಸೆಂಗೋಲ್​ ಸ್ಥಾಪನೆ: ತಮಿಳಿನ ಸೆಂಗೋಲ್ ಹಿನ್ನೆಲೆ ಇಲ್ಲಿದೆ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
