ಬೆಂಗಳೂರು:ಗಂಡ-ಹೆಂಡತಿ ಜಗಳಕ್ಕೆ ಕಾರು ಪಲ್ಟಿಯಾದ ಘಟನೆ ನಗರದ ಹಲಸೂರು ಗೇಟ್ ಪೊಲೀಸ್​ ಠಾಣೆಯ ಸಮೀಪ ನಿನ್ನೆ (ಜು.14) ರಾತ್ರಿ ನಡೆದಿದೆ.
ಐ 20 ಕಾರು ಮಾರುಕಟ್ಟೆ ಕಡೆಯಿಂದ ಬರುತ್ತಿತ್ತು. ಈ ವೇಳೆ ಕಾರಿನಲ್ಲಿಯೇ ಪತಿ-ಪತ್ನಿ ನಡುವೆ ಮಾತಿನ ಚಕಮಕಿ ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ಡಿಢೀರನೇ ಕಾರಿನ ಸ್ಟೇರಿಂಗ್​ ಎಳೆದಿದ್ದು, ಪರಿಣಾಮ ಕಾರು ರಸ್ತೆಯಲ್ಲೇ ಪಲ್ಟಿ ಹೊಡೆದಿದೆ.
ಇದನ್ನೂ ಓದಿ: ಚಂದ್ರಶಿಕಾರಿಗೆ ಇಸ್ರೋ ಸವಾರಿ; ಚಂದ್ರಯಾನ-3 ಶ್ರೀಹರಿಕೋಟದಿಂದ ಇಂದು ಉಡಾವಣೆ
ದಂಪತಿ ಸಣ್ಣಪುಟ್ಟ ಗಾಯಗಳೊಂದಿಗೆ ಪರಾಗಿದ್ದಾರೆ. ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿರುವ ಶಂಕೆಯೂ ವ್ಯಕ್ತವಾಗಿದೆ. ಘಟನೆ ನಡೆದ ಕೂಡಲೇ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ದೌಡಾಯಿಸಿದರು ಮತ್ತು ಪಲ್ಟಿಯಾಗಿದ್ದ ಕಾರನ್ನು ಸರಿಪಡಿಸಿ ದಂಪತಿಯನ್ನು ರಕ್ಷಣೆ ಮಾಡಿದರು.
ಹಲಸೂರು ಗೇಟ್ ಸಂಚಾರ ಪೊಲೀಸರು ಘಟನೆಯ ಬಗ್ಗೆ ದಂಪತಿಯ ವಿಚಾರಣೆ ನಡೆಸಿದ್ದಾರೆ.(ದಿಗ್ವಿಜಯ ನ್ಯೂಸ್​)
ಫ್ರಾನ್ಸ್​ನಲ್ಲೂ ಭಾರತದ UPI ಬಳಕೆ, ಐಫೆಲ್​ ಟವರ್​ನಿಂದಲೇ ಆರಂಭಿಸಲಾಗುವುದು: ಪ್ರಧಾನಿ ಮೋದಿ ಹೇಳಿಕೆ

45 ವರ್ಷಗಳ ಬಳಿಕ ದಿಲ್ಲಿಯಲ್ಲಿ ಯಮುನೆಯ ರುದ್ರನರ್ತನ; ಜನಜೀವನ ಸಂಪೂರ್ಣ ಅಸ್ತವ್ಯಸ್ತ

ವ್ಯಾಜ್ಯಗಳ ಸೋಲಿನಿಂದ ಹೊರಬರಲು ಕಾನೂನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
