ಬೆಂಗಳೂರು:ಸಾಲ ಮರುಪಾವತಿಸದೆ ಬಾಕಿ ಉಳಿಸಿಕೊಂಡ ಕಾರುಗಳನ್ನು ಅಡಮಾನ ಇಟ್ಟುಕೊಂಡು, ಅವುಗಳಿಗೆ ನಕಲಿ ಎನ್​ಒಸಿ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿ ವಂಚಿಸುತ್ತಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗೋವಾ ಮೂಲದ ವ್ಯಕ್ತಿ ಸೇರಿ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗೋವಾದ ಆಸ್ಟಿನ್ ಕಾರಾಡೋಸ್ ಅಲಿಯಾಸ್ ಚಿಂಟು (37) ಮತ್ತು ಫ್ರೇಜರ್​ಟೌನ್ ನಿವಾಸಿ ಸೈಯದ್ ರಿಯಾಜ್ (35) ಬಂಧಿತರು. ಇವರಿಂದ 2.56 ಕೋಟಿ ರೂ. ಮೌಲ್ಯದ ರೇಂಜ್ ರೋವರ್, ಜಾಗ್ವಾರ್ ಸೇರಿ ವಿವಿಧ ಕಂಪನಿಗಳ 17 ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇದನ್ನೂ ಓದಿ:ನಟ ದರ್ಶನ್ ಧರಿಸಿದ್ದ ವಿಗ್ ತೆಗೆದು ತಲೆ ಬೋಳಿಸಿಕೊಂಡ್ರಾ?! ದರ್ಶನ್​ಗೆ ವಿಗ್​​ ಮೆಂಟೇನ್ ಮಾಡುವ ಸಮಸ್ಯೆ?
ಕಳ್ಳತನ ಮಾಡಿರುವ ಕಾರುಗಳು, ವಿಮೆ ಪಾವತಿಸದ, ಲೋನ್ ಬಾಕಿ ಇರುವ ವಾಹನಗಳನ್ನು ಸೈಯದ್ ರಿಯಾಜ್ ಕಡಿಮೆ ಮೊತ್ತಕ್ಕೆ ಖರೀದಿಸುತ್ತಿದ್ದ ಅಥವಾ ಅಡಮಾನ ಇಟ್ಟುಕೊಳ್ಳುತ್ತಿದ್ದ. ಬಳಿಕ ಕಾರುಗಳ ಮೇಲೆ ಯಾವುದೇ ಲೋನ್ ಅಥವಾ ವಿಮೆ ಇಲ್ಲ ಎಂಬಂತೆ ಬಿಂಬಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಬೇರೆ ರಾಜ್ಯಗಳ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ. ಕಳ್ಳತನ ಮಾಡಿದ್ದ ಕಾರುಗಳಿಗೆ ಗುಜರಿ ವಾಹನಗಳ ಇಂಜಿನ್ ಮತ್ತು ಚಾಸ್ಸಿಸ್ ನಂಬರ್ ಹಾಗೂ ನಂಬರ್ ಪ್ಲೇಟ್​ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದ. ಇದೇ ರೀತಿ ಸುಮಾರು 10ಕ್ಕೂ ಹೆಚ್ಚು ಮಂದಿಗೆ ಮಾರಾಟ ಮಾಡಲಾಗಿದೆ ಎಂದು ಆಯುಕ್ತರು ಹೇಳಿದರು.
ದುಬಾರಿ ಕಾರುಗಳೇ ಟಾರ್ಗೆಟ್:
ಮತ್ತೊಂದು ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಗೋವಾ ಮೂಲದ ಆಸ್ಟಿನ್, ಕೆಲ ತಿಂಗಳ ಹಿಂದೆ ಮೈಸೂರಿನ ಉದ್ಯಮಿಯೊಬ್ಬರಿಂದ ರೇಂಜ್ ರೋವರ್ ಕಾರು ಖರೀದಿಸಿದ್ದ. ಈ ಕಾರಿಗೆ ಹರಿಯಾಣ ನೋಂದಣಿಯ ಕಾರಿನ ನಂಬರ್ ಪ್ಲೇಟ್ ಅಳವಡಿಸಿ, ನಕಲಿ ಎನ್​ಒಸಿ ಸೃಷ್ಟಿಸಿ, ದೆಹಲಿಯ ಗ್ರಾಹಕನಿಗೆ ಮಾರಿದ್ದ. ರಾಜ್ಯದ ವ್ಯಕ್ತಿಯೊಬ್ಬರಿಂದ ಖರೀದಿಸಿದ್ದ ಜಾಗ್ವಾರ್ ಕಾರಿಗೂ ಅದೇ ರೀತಿ ನಕಲಿ ನಂಬರ್ ಪ್ಲೇಟ್ ಹಾಕಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಆಯುಕ್ತರು ತಿಳಿಸಿದರು.
ತುಟಿಕ್​ ಪಿಟಿಕ್​ ಎನ್ನದೇ ತಲೆಬಗ್ಗಿಸಬೇಕು ನೀನು: ಶಾಹೀನ್ ಆಫ್ರಿದಿ ವಿರುದ್ಧ ಸಿಡಿದೆದ್ದ ಪಾಕ್​ ಮಾಜಿ ಆಟಗಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 1 =
Remember me
