ಉಡುಪಿ:ಅಯ್ಯೋ, ವಿಧಿಯೇ ನೀ ಎಂಥಾ ಕ್ರೂರಿ? ಎಂದು ಶಪಿಸಬೇಕು ಅನ್ನಿಸುತ್ತೆ ಈ ಘಟನೆಯನ್ನ ನೋಡಿದ್ರೆ. ಮೂವರು ಪುಟ್ಟ ಕಂದಮ್ಮಗಳೊಂದಿಗೆ ಕಾರಿನಲ್ಲಿ ಹೋಗುತ್ತಿದ್ದ ಮಹಿಳೆ ಆ ಮಕ್ಕಳ ಕಣ್ಣೆದುರಲ್ಲೇ ಪ್ರಾಣಬಿಟ್ಟಿದ್ದಾಳೆ!
ಇಂತಹ ಹೃದಯ ವಿದ್ರಾವಕ ಘಟನೆ ಹೆಮ್ಮಾಡಿ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ನಡೆದಿದೆ. ಸುಹಾನಾ(30) ಮೃತಪಟ್ಟವರು. ಸುಹಾನ ಮತ್ತು ಸಿಬ್ಗತುಲಾ ದಂಪತಿ ತಮ್ಮ ಮೂವರು ಮಕ್ಕಳೊಂದಿಗೆ ಕಾರಿನಲ್ಲಿ ಭಟ್ಕಳದಿಂದ ವಾಪಸ್​ ಆಗುತ್ತಿದ್ದರು. ಕಾರನ್ನು ಸಿಬ್ಗತುಲಾ ಚಲಾಯಿಸುತ್ತಿದ್ದರು.
ಹೆಮ್ಮಾಡಿಗೆ ಕಾರು ಬರುತ್ತಿದ್ದಂತೆ ಮುಂದಿನ ಚಕ್ರ ಸ್ಫೋಟಗೊಂಡು ಕಾರು ಪಲ್ಟಿಯಾಗಿದೆ. ಗಂಭೀರವಾಗಿ ಗಾಯಗೊಂಡ ಸುಹಾನ ಮೃತಪಟ್ಟಿದ್ದಾರೆ. ತಮ್ಮ ಕಣ್ಣೆದುರಲ್ಲೇ ಅಮ್ಮ ಕೊನೆಯುಸಿರೆಳೆದರೂ ಏನೂ ಅರಿಯದ ಪುಟ್ಟ ಕಂದಮ್ಮಗಳು ಅಮ್ಮನತ್ತ ಕೈಬೀಸಿ ಎತ್ತಿಕೊಳ್ಳುವಂತೆ ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಪತಿ ಹಾಗೂ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗ್ನವಾಗಿ ನೋಡಿದ್ರು, ಲೈಂಗಿಕವಾಗಿ ಬಳಸಿಕೊಂಡ್ರು.. ಎಲ್ಲ ಮುಗಿದ ಮೇಲೆ ಮಾಡಬಾರದ್ದನ್ನ ಮಾಡಿದ್ರು… ಎಳೆಎಳೆಯಾಗಿ ಬಿಚ್ಚಿಟ್ಟ ಯುವತಿ

ಡಿಕೆಶಿ ಗಂಡಸಲ್ಲ, ನಾನು ಗಂಡಸು.. ನಾಲಾಯಕ್ ಮಹಾನಾಯಕನನ್ನು ಕನಕಪುರದಲ್ಲೇ ಸೋಲಿಸ್ತೀನಿ: ಜಾರಕಿಹೊಳಿ

ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
