ಬೆಂಗಳೂರು:ಲೋಹ ಲೇಪನ ಮಾಡಿದ ರಟ್ಟಿನ ಹಾಳೆಗಳನ್ನು ತೋರಿಸಿ ಅದೃಷ್ಟ ಖುಲಾಯಿಸುವ ಪುರಾತನ ಕಾಲದ ಅಪರೂಪದ ವಸ್ತುವೆಂದು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ವ್ಯಕ್ತಿಯನ್ನು ಯಶವಂತಪುರ ಪೊಲೀಸರು ಬಂಧಿಸಿದ್ದಾರೆ.
ಹೈದ್ರಾಬಾದ್ ಮೂಲದ ಸುಬ್ರಮಣ್ಯ ಅಲಿಯಾಸ್ ಬಾಲಸುಬ್ರಹ್ಮಣ್ಯ (63) ಬಂಧಿತ. ಆರೋಪಿಯಿಂದ ಹಳೇ ಕಾಲದ ಲಿಪಿಯಂತೆ ಬರೆದಿದ್ದ ಎರಡು ರಟ್ಟಿನ ಹಾಳೆ ವಶಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ಆರೀಫ್ ಎಂಬಾತ ತಲೆಮರೆಸಿಕೊಂಡಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಸುಬ್ರಹ್ಮಣ್ಯ ಮತ್ತು ಆರೀಫ್ ಕೆಲ ವರ್ಷಗಳ ಹಿಂದೆ ಪರಿಚಯವಾಗಿದ್ದರು. ಆರೀಫ್ ರಟ್ಟಿನ ಮೇಲೆ ಹಿತ್ತಾಳೆ ಹಾಗೂ ತಾಮ್ರ ಲೋಹವನ್ನು ಲೇಪಿಸುತ್ತಿದ್ದ. ಅದರ ಮೇಲೆ ಪುರಾತನ ಕಾಲದ ಲಿಪಿ ಹೋಲುವ ಅಕ್ಷರಗಳನ್ನು ಬರೆಯುತ್ತಿದ್ದ.
ವಿಶೇಷ ಶಕ್ತಿ ಎಂದು ನಂಬಿಸಿದ: ಆರೀಫ್​ನಿಂದ ತಾಮ್ರ ಲೇಪನದ ಹಾಳೆಗಳನ್ನು ಪಡೆಯುತ್ತಿದ್ದ ಸುಬ್ರಹ್ಮಣ್ಯ, ಅವುಗಳನ್ನು ಅಮಾಯಕರಿಗೆ ತೋರಿಸಿ ‘ಇದು ಪುರಾತನ ಕಾಲದ ಅಪರೂಪದ ವಸ್ತು. ಮನೆಯಲ್ಲಿಟ್ಟು ಪ್ರತಿನಿತ್ಯ ಪೂಜೆ ಮಾಡಿದರೆ ಕಷ್ಟಗಳೆಲ್ಲ ಪರಿಹಾರವಾಗಿ ಹಣದ ಹೊಳೆ ಹರಿಯುತ್ತದೆ’ ಎಂದು ಹೇಳುತ್ತಿದ್ದ. ಜನರ ಅರಿವಿಗೆ ಬಾರದಂತೆ ತಾಮ್ರ ಲೇಪನದ ಶೀಟ್​ಗೆ ರಾಸಾಯನಿಕ ಮೂಲಕ ಬೆಂಕಿ ಹಚ್ಚಿ, ಅದಕ್ಕೆ ವಿಶೇಷ ಶಕ್ತಿ ಇದೆ ಎಂದು ಬಿಂಬಿಸುತ್ತಿದ್ದ.
ಖಾಸಗಿ ಆಸ್ಪತ್ರೆಗಳ ವಸೂಲಿ ಜೋರು: ದಿಗ್ವಿಜಯ ಸ್ಟಿಂಗ್​ನಲ್ಲಿ ಬಯಲಾಯ್ತು ಅಸಲಿಯತ್ತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 15 =
Remember me
