ತುಮಕೂರು:ಈಗಿನ ಶಾಲಾ ಅವಧಿಯಿಂದ ಮಕ್ಕಳತನವನ್ನೇ ಕಿತ್ತುಕೊಳ್ಳುವಂತಾಗಿದೆ. 7-8 ವರ್ಷದವರೆಗಿನ ಮಕ್ಕಳು ಹೆಚ್ಚು ನಿದ್ರೆ ಮಾಡಬೇಕು. ನಿದ್ರಾಹಿನತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಹೃದ್ರೋಗ ತಜ್ಞ ಡಾ.ಸಿ.ಎನ್​.ಮಂಜುನಾಥ್​ ಅವರು ಶಾಲಾ ಸಮಯ ಬದಲಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ 66ನೇ ಮಹಾಧಿವೇಶನದಲ್ಲಿ ‘ಸಿದ್ಧಗಂಗಾ ಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಡಾ.ಮಂಜುನಾಥ್​, ಕನಿಷ್ಠ ಎರಡನೇ ತರಗತಿವರೆಗೆ ಶಾಲೆಯ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಜಾಲಾಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಮೊಬೈಲ್​ ಮಕ್ಕಳ, ಯುವಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕಳೆದ 7 ವರ್ಷಗಳಲ್ಲಿ 6 ಸಾವಿರ ಯುವಕರಿಗೆ ಹೃದಯ ಚಿಕಿತ್ಸೆಯನ್ನು ಮಾಡಲಾಗಿದೆ. ಚಿಕ್ಕವಯಸ್ಸಿನಲ್ಲೇ ಒತ್ತಡ ಪ್ರಾರಂಭವಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಾಢಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದರು.
ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ: ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಕೋವಿಡ್​ಗೆ ತಾಯಿ ಬಲಿ… ಒಂದೊತ್ತಿನ ಊಟಕ್ಕೂ ಬೀದಿಬೀದಿ ಅಲೆಯುತ್ತಿದ್ದ 10 ವರ್ಷದ ಬಾಲಕ ರಾತ್ರೋರಾತ್ರಿ ಕೋಟ್ಯಧಿಪತಿಯಾದ!

ಫಿಫಾ ವಿಶ್ವಕಪ್: ಸೋಲಿನ ಆಘಾತದಿಂದ ಕ್ರೀಡಾಂಗಣದಲ್ಲೇ ಕುಳಿತ ಫೈನಲ್​ ಹೀರೋ ಎಂಬೆಪ್ಪೆಗೆ ಸಮಾಧಾನ ಹೇಳಿದ ಫ್ರೆಂಚ್ ಅಧ್ಯಕ್ಷ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − five =
Remember me
