ಬೆಂಗಳೂರು:ಹೊಸ ಶೈಕ್ಷಣಿಕ ವರ್ಷಾರಂಭದಲ್ಲಿ ವಿದ್ಯಾರ್ಥಿಗಳಿಗೆ ಅರಿವಿನ ಉಡುಗೊರೆ ನೀಡುವ ದಿ ಹಿಂದು ಎಜುಕೇಷನ್ ಪ್ಲಸ್​ನಿಂದ ವಿದ್ಯಾಭ್ಯಾಸಕ್ಕೆ ಪೂರಕ ಸಮಾಲೋಚನೆ (ಕರಿಯರ್ ಕೌನ್ಸೆಲಿಂಗ್) ಹಮ್ಮಿಕೊಳ್ಳಲಾಗಿದೆ. ಮುಂದಿನ ಓದಿಗೆ ಕೈದೀವಿಗೆಯಾಗುವ ಜತೆಗೆ ವೃತ್ತಿ, ಜೀವನೋಪಾಯಕ್ಕೆ ಸೋಪಾನವಾಗಿರುವ ಈ ಕಾರ್ಯಕ್ರಮವು ಶೈಕ್ಷಣಿಕ ಹಾಗೂ ವೃತ್ತಿಪರ ಮಾರ್ಗದರ್ಶನದ ವೇದಿಕೆಯಾಗಿದೆ. ಜತೆಗೆ ಪಾಲಕರು, ವಿದ್ಯಾರ್ಥಿಗಳು, ಭಾಷಣಕಾರರು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಸಂಪರ್ಕದ ಕೊಂಡಿಯಾಗಿದೆ.
20ನೇ ಆವೃತ್ತಿ ಕಾರ್ಯಕ್ರಮ:ಎಳೆಯರಿಗೆ ಜ್ಞಾನದ ಕಾಣಿಕೆ ನೀಡುವ ದಿ ಹಿಂದು ಎಜುಕೇಷನ್ ಪ್ಲಸ್​ನ 20ನೇ ಆವೃತ್ತಿ ಕಾರ್ಯಕ್ರಮಗಳು ಈ ವರ್ಷದ ಜೂನ್ ಮತ್ತು ಜುಲೈನಲ್ಲಿ ನಡೆಯಲಿವೆ. ರಾಜ್ಯದ ಒಂಭತ್ತು ನಗರಗಳ 10 ಸ್ಥಳಗಳಲ್ಲಿ ಆಯೋಜಿಸಲಾಗಿದೆ. ಸಿಇಟಿ, ಕಾಮೆಡ್ ಕೆ, ನೀಟ್, ಸಾಮಾನ್ಯ ಶಿಕ್ಷಣ (ವಿಶಿಷ್ಟ ವ್ಯಾಸಂಗಗಳು) ನಂತಹ ಶೈಕ್ಷಣಿಕ ವಿಷಯಗಳನ್ನು ಕರಿಯರ್ ಕೌನ್ಸೆಲಿಂಗ್​ಗೆ ಒಳಗೊಂಡಿರುತ್ತದೆ. ಅಲ್ಲದೆ, ಕಾನೂನು, ಶುದ್ಧ ವಿಜ್ಞಾನ, ಕಲೆ, ವಿಜ್ಞಾನ ಮತ್ತು ವಾಣಿಜ್ಯ, ಮ್ಯಾನೇಜ್​ವೆುಂಟ್, ಪಿಜಿಡಿಎಂ, ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವೃತ್ತಿಪರ ವ್ಯಾಸಂಗದ ಬಗ್ಗೆ ಸಮಾಲೋಚನೆ ನಡೆಯಲಿದೆ.
ಪ್ರಾಯೋಜಕರು:ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ಬೆಂಗಳೂರು, ರಾಮಯ್ಯ ವಿಶ್ವವಿದ್ಯಾಲಯ ಬೆಂಗಳೂರು ಮತ್ತು ರೇವಾ ವಿಶ್ವವಿದ್ಯಾಲಯ ಬೆಂಗಳೂರು.
ಗೋಲ್ಡ್ ಪ್ರಾಯೋಜಕತ್ವ:ಕೆಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು, ನಿಟ್ಟೆ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬೆಂಗಳೂರು, ಸಿದ್ದಗಂಗಾ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತುಮಕೂರು.
ಸಿಲ್ವರ್ ಪ್ರಾಯೋಜಕರು:ಎಸಿಎಸ್ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು. ಕೆ.ಎಸ್. ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್ ಬೆಂಗಳೂರು. ರಾಜಾರಾಜೇಶ್ವರಿ ಇಂಜಿನಿ ಯರಿಂಗ್ ಕಾಲೇಜು ಬೆಂಗಳೂರು. ತಪ್ಮಿ, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ಘಟಕ.
ಇತರ ಸಹ ಪ್ರಾಯೋಜಕರು:ಸಿಎಂಆರ್ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರು. ಶಹೀನ್ ಗ್ರೂಪ್ ಇನ್​ಸ್ಟಿಟ್ಯೂಷನ್ಸ್ ಬೀದರ್, ಶ್ರೀ ಸಾಯಿರಾಂ ಇಂಜಿನಿಯರಿಂಗ್ ಕಾಲೇಜು ಬೆಂಗಳೂರು.
ಇಂಗ್ಲಿಷ್ ಕೌಶಲ ಪರೀಕ್ಷೆ:ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ‘ಸ್ಟೆಪ್’ ಇಂಗ್ಲಿಷ್ ಕೌಶಲ ಪರೀಕ್ಷೆ ನಡೆಯಲಿದೆ. ಆ ಮೂಲಕ ಇಂಗ್ಲಿಷ್ ಮೇಲೆ ಸಾಧಿಸಿದ ಪ್ರಭುತ್ವ ತಿಳಿಯುವ ಜತೆಗೆ ಆ ಭಾಷೆ ಬಗೆಗಿನ ಅನಗತ್ಯ ಭಯ ತೊಡೆದು ಹಾಕಲಿದೆ.
ಉಚಿತ:ಕಾರ್ಯಕ್ರಮಕ್ಕೆ ಪ್ರವೇಶ ಉಚಿತವಾಗಿದ್ದು, ಮೊದಲು ಬಂದ 300 ಪ್ರವೇಶಾರ್ಥಿಗಳಿಗೆ ಅಚ್ಚರಿ ಕೊಡುಗೆ ಸಿಗಲಿದೆ. ನೋಂದಣಿ ಸಮಯ: ಬೆಳಗ್ಗೆ 8.30ರ ನಡುವೆ ಕಾರ್ಯಕ್ರಮ: ಬೆಳಗ್ಗೆ 9.30ರಿಂದ ಮಧ್ಯಾಹ್ನ 1ರವರೆಗೆ ವಿವರಗಳಿಗೆ ಸಂರ್ಪಸಿ: 9739273958/ 9448160126/ 9448871815


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 13 =
Remember me
