ಬೆಂಗಳೂರು:ರಾಜ್ಯದಲ್ಲಿ 60 ಶತಾಯುಷಿಗಳು ಕೋವಿಡ್-19 ಸೋಂಕಿಗೆ ಒಳಗಾಗಿದ್ದು, ಇವರಲ್ಲಿ ಚಿಕಿತ್ಸೆ ಫಲಿಸದೆ ಮೂವರು ಮೃತಪಟ್ಟಿದ್ದಾರೆ. ಉಳಿದ 57 ಮಂದಿ ಗುಣಮುಖರಾಗಿದ್ದಾರೆ ಎಂದು ರಾಜ್ಯ ಕೋವಿಡ್ ವಾರ್ ರೂಂ ಅಂಕಿ-ಅಂಶದಿಂದ ತಿಳಿದುಬಂದಿದೆ.
ಕರೊನಾದಿಂದ ಸಾವನ್ನಪ್ಪಿರುವ ಮೂವರೂ ಶತಾಯುಷಿಗಳು ಬೆಂಗಳೂರಿನವ ರಾಗಿದ್ದು, ಪುರುಷರು. 102 ವರ್ಷದ ಒಬ್ಬರು ಹಾಗೂ 100 ವರ್ಷದ ಇಬ್ಬರು ಸೋಂಕಿಗೆ ಬಲಿಯಾದವರು. ಇವರಲ್ಲಿ ಯಾರೊಬ್ಬರಿಗೂ ಕೋವಿಡ್ ಹೊರತಾಗಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಇರಲಿಲ್ಲ. ಕರೊನಾಗೆ ಒಳಗಾಗಿದ್ದ 60 ಶತಾಯುಷಿಗಳಲ್ಲಿ ಶೇ.53 ಮಹಿಳೆಯರಿದ್ದಾರೆ. ಈ ಪೈಕಿ 105 ವರ್ಷದ ವೃದ್ಧೆಯೊಬ್ಬರು ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಹೊಂದಿದ್ದರು ಎಂದು ವಾರ್ ರೂಂ ಮಾಹಿತಿ ನೀಡಿದೆ.
90-99 ವರ್ಷದವರೇ ಹೆಚ್ಚು ಬಲಿ: ರಾಜ್ಯದಲ್ಲಿ ನ.29ರವರೆಗೆ ವರದಿಯಾಗಿರುವ ಒಟ್ಟು 8,83,899 ಪ್ರಕರಣಗಳಲ್ಲಿ 11,765 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಪೈಕಿ 90-99 ವರ್ಷದ 1,298 ಮಂದಿಯಲ್ಲಿ 148 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಈ ವಯೋಮಾನದವರ ಮರಣ ಪ್ರಮಾಣ ದರ ಅತೀ ಹೆಚ್ಚು (ಶೇ.11.4) ಇದೆ. ಆದರೆ ಸೋಂಕಿತ 60 ಶತಾಯುಷಿಗಳಲ್ಲಿ ಕೇವಲ ಮೂವರು ಮೃತಪಟ್ಟಿದ್ದು, ಸೋಂಕಿತ ಶತಾಯುಷಿಗಳ ಮರಣ ಪ್ರಮಾಣ ದರ ಶೇ.5 ಇದೆ.
ಮಕ್ಕಳ ಮರಣ ಪ್ರಮಾಣ: ಉಳಿದಂತೆ 9 ವರ್ಷದೊಳಗಿನ 26,103 ಸೋಂಕಿತ ಮಕ್ಕಳಲ್ಲಿ 26 (ಶೇ.0.1) ಹಾಗೂ 10-19 ವರ್ಷದ 57,047 ಸೋಂಕಿತರಲ್ಲಿ 41 (ಶೇ.0.1) ಮಕ್ಕಳು ಮೃತಪಟ್ಟಿದ್ದಾರೆ. 20-29 ವರ್ಷದ 1,81,091 ಸೋಂಕಿತರಲ್ಲಿ 217 (ಶೇ.0.1), 30-39 ವರ್ಷದ 1,92,980 ಸೋಂಕಿತರಲ್ಲಿ 563 (ಶೇ.0.3), 40-49 ವರ್ಷದ 1,57,060 ಸೋಂಕಿತರಲ್ಲಿ 1,393 (ಶೇ.0.9), 50-59 ವರ್ಷದ 1,28,566 ಸೋಂಕಿತರಲ್ಲಿ 2,708 (ಶೇ.2.1), 60-69 ವರ್ಷದ 88,485 ಸೋಂಕಿತರಲ್ಲಿ 3,535 (ಶೇ.4.0), 70-79 ವರ್ಷದ 40,003 ಸೋಂಕಿತರಲ್ಲಿ 2,484 (ಶೇ.6.2) ಹಾಗೂ 80-89 ವರ್ಷದ 11,066 ಸೋಂಕಿತರಲ್ಲಿ 1,005 (ಶೇ.9.1) ಮಂದಿ ಬಲಿಯಾಗಿದ್ದಾರೆ.
ನೂರು ವರ್ಷ ಮೇಲ್ಪಟ್ಟವರ ಹಿನ್ನೆಲೆ ಗಮನಿಸಿದಾಗ ಅವರಲ್ಲಿ ಮಧುಮೇಹ, ರಕ್ತದ ಒತ್ತಡದಂತಹ ಕಾಯಿಲೆಗಳು ತೀರಾ ಕಡಿಮೆ. ಅಲ್ಲದೆ ಅವರ ಜೀವನಶೈಲಿ ಹಾಗೂ ದಿನಚರಿ ಅತ್ಯಂತ ಸರಳ ಹಾಗೂ ಆರೋಗ್ಯಕರವಾದದ್ದು ಆಗಿರುತ್ತದೆ. ಅವರಲ್ಲಿ ಕೋಮಾರ್ಬೆಡಿಟಿಸ್ ಹೊಂದಿರುವವರು ತೀರಾ ವಿರಳ. ಹಾಗಾಗಿ ಅವರು ಸೋಂಕಿನಿಂದ ಚೇತರಿಸಿಕೊಳ್ಳಲು ಸಾಧ್ಯವಾಗಿರಬಹುದು.| ಡಾ.ಸಿ.ಎನ್.ಮಂಜುನಾಥ್ರಾಜ್ಯ ಕೋವಿಡ್-19 ಕಾರ್ಯಪಡೆ ಪ್ರಯೋಗಾಲಯಗಳು, ಪರೀಕ್ಷೆಗಳ ನೋಡಲ್ ಅಧಿಕಾರಿ
ರಾಜ್ಯದಲ್ಲಿ 1,330 ಹೊಸ ಪ್ರಕರಣರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,330 ಕರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 8.86 ಲಕ್ಷಕ್ಕೆ ಏರಿಕೆಯಾಗಿದೆ. ಇದರೊಂದಿಗೆ ದಿನದ ಪಾಸಿಟಿವಿಟಿ ದರ ಶೇ.1.40 ಹೆಚ್ಚಳವಾಗಿದೆ. ಸೋಂಕಿತರಲ್ಲಿ ಮಂಗಳವಾರ 886 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 8.50 ಲಕ್ಷಕ್ಕೆ ಏರಿಕೆಯಾಗಿದೆ. 14 ಮಂದಿ ಸಾವಿನೊಂದಿಗೆ ಮೃತರ ಸಂಖ್ಯೆ 11,792ಕ್ಕೆ ತಲುಪಿದೆ. 23,709 ಸಕ್ರೀಯ ಪ್ರಕರಣಗಳಲ್ಲಿ 336 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 4 =
Remember me
