ವಿಜಯನಗರ:ಹೊಸಪೇಟೆ ತಾಲೂಕಿನ ಮರಿಯಮ್ಮಹಳ್ಳಿ ಸಮೀಪದ ಹಾರುವನಹಳ್ಳಿಯಲ್ಲಿ ಇಂದು (ಗುರುವಾರ) ಎರಡು ಇನ್ನೋವಾ ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳು ಸೇರಿದಂತೆ ನಾಲ್ವರು ಮೃತಪಟ್ಟಿದ್ದಾರೆ.
ಅಪಘಾತಕ್ಕೆ ಒಳಗಾಗಿದ್ದು ಒಂದು ಸರ್ಕಾರಿ ಕಾರು, ಇನ್ನೊಂದು ಖಾಸಗಿ ಕಾರು. ಇವೆರಡೂ ಮುಖಾಮುಖಿ ಡಿಕ್ಕಿಯಾಗಿದ್ದು, ಸರ್ಕಾರಿ ಕಾರಿನಲ್ಲಿದ್ದ ಕೃಷ್ಣ ಜಲಭಾಗ್ಯ ನಿಗಮ ಮಂಡಳಿ ಅಧಿಕಾರಿಗಳಾದ ಕೋದಂಡ ರಾಮಸ್ವಾಮಿ(55) ಮತ್ತು ಜಿತೇಂದ್ರ ಪನ್ವರ್(50), ಖಾಸಗಿ ಕಾರಿನಲ್ಲಿದ್ದ ಕಾವ್ಯ(35) ಮತ್ತು ಶರಣಬಸವ(10) ದುರ್ಮರಣಕ್ಕೀಡಾಗಿದ್ದಾರೆ. 8 ಜನರ ಸ್ಥಿತಿ ಗಂಭೀರವಾಗಿದೆ.
ತಿಪಟೂರಿನಿಂದ ಕುಷ್ಟಗಿಯತ್ತ ಹೊರಟಿದ್ದ ಖಾಸಗಿ ಕಾರಿನ ಟೈಯರ್​ ಹಾರುವನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಲಾಸ್ಟ್ ಆಗಿದೆ. ಪರಿಣಾರ ಹೆದ್ದಾರಿ ಡಿವೈಡರ್ ಮೇಲೆ ಹಾರಿದ ಈ ಕಾರು ಹೊಸಪೇಟೆ ಕಡೆಯಿಂದ ಬೆಂಗಳೂರಿಗೆ ಹೊರಟಿದ್ದ ಸರ್ಕಾರಿ ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದಿದೆ. ಮರಿಯಮ್ಮನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎರಡೂ ಕಾರು ನಜ್ಜುಗುಜ್ಜಾಗಿವೆ.
ಸಿಡಿ ಕೇಸ್​ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ

ಸಿಡಿ ಕೇಸ್​ಗೆ ಟಕ್ಕರ್​ ಕೊಟ್ಟ ವಕೀಲೆ ಮೀರಾ ರಾಘವೇಂದ್ರ!

2004ರಲ್ಲಿ ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ ಇವತ್ತು ತುಂಬಿದ ಕೊಡ! ಅಂದಿನ ಹಣದ ರಹಸ್ಯ ಕೆದಕಿದ ಜಮೀರ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
