| ಕೆ.ಎಸ್. ಪ್ರಣವಕುಮಾರ್, ಚಿತ್ರದುರ್ಗ
ವಿಶ್ವದ ಗಮನ ಸೆಳೆದಿರುವ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ನಿರ್ಮಾಣ ಕಾರ್ಯ ಮುಂದುವರಿದಿದ್ದು, ಕರ್ನಾಟಕದ ರೇಖಾ ಚಿತ್ರಗಾರ ರವೀಂದ್ರ ಆಚಾರ್ ಸಿದ್ಧಪಡಿಸುವ ನೀಲಿ ನಕ್ಷೆ ಚಿತ್ರಗಳು ಅಂತಿಮ ಒಪ್ಪಿಗೆ ಪಡೆದಿವೆ. ಮಂದಿರದ ಸ್ತಂಭಗಳಲ್ಲಿ ದೇವಾಧಿದೇವತೆಗಳು ಸೇರಿ ವಿವಿಧ ಕಲಾಕೃತಿಗಳ ಕೆತ್ತನೆಗಳು ಹೊರಹೊಮ್ಮುತ್ತಿವೆ.
ಮಂದಿರದ ಪ್ರತಿ ಕೆತ್ತನೆಯೂ ಅತ್ಯಂತ ಸುಂದರವಾಗಿ ಮೂಡಬೇಕು ಎಂಬುದು ಟ್ರಸ್ಟ್​ನ ಆಶಯವಾಗಿದೆ. ಹೀಗಾಗಿ ದೇಶದ ಎಲ್ಲ ರಾಜ್ಯಗಳ ಪ್ರಖ್ಯಾತ ಶಿಲ್ಪಿಗಳಿಗೆ ನೀಲಿ ನಕ್ಷೆ ತಯಾರಿಸಲು ಸೂಚಿಸಲಾಗಿತ್ತು. ಅದರಲ್ಲಿ ರೇಖಾ ಚಿತ್ರಗಾರ ರವೀಂದ್ರ ಆಚಾರ್ ಕೂಡ ಆಯ್ಕೆಯಾಗಿದ್ದು, 2023ರ ಆಗಸ್ಟ್​ನಿಂದಲೇ ಅವರು ಕಾರ್ಯಪ್ರವೃತ್ತರಾಗಿದ್ದಾರೆ.
ಸ್ತಂಭಗಳಲ್ಲಿ ಕೆತ್ತನೆ ಕಾರ್ಯ ಸುಲಭವಿಲ್ಲ. ಏಕೆಂದರೆ ದಕ್ಷಿಣ ಭಾರತದ ಕಲ್ಲುಗಳಿಗಿಂತ ಉತ್ತರ ಭಾರತದ ಕಲ್ಲುಗಳು ಗಟ್ಟಿಯಾಗಿದ್ದು, ವ್ಯತ್ಯಾಸದಲ್ಲಿ ಸಾಕಷ್ಟು ವಿಭಿನ್ನತೆ ಇದೆ. ಕೆತ್ತನೆಗೆಂದು ಹೊರಟ ಅನೇಕ ಶಿಲ್ಪಿಗಳು ವಾರ-ಹದಿನೈದು ದಿನಕ್ಕೆ ಹಿಂದಿರುಗಿರುವ ನಿದರ್ಶನಗಳೂ ಇವೆ. ರವೀಂದ್ರ ಅವರು ಗದಗಿನ ರಮೇಶ್, ಹೊನ್ನಾವರದ ವಿನಾಯಕ್, ಗಂಗಾವತಿಯ ನಾಗಭೂಷಣ್, ಶಿವಮೊಗ್ಗದ ರಾಜೇಶ್, ಚಿತ್ರದುರ್ಗದ ಕೀರ್ತಿ ಶಿಷ್ಯರ ತಂಡದೊಂದಿಗೆ ಈಗಾಗಲೇ ಕಾರ್ಯನಿರ್ವಹಿಸಿದ್ದಾರೆ. ಈ ಅವಕಾಶ ದೊರೆತಿರುವುದಕ್ಕೆ ಕಲಾವಿದರಲ್ಲೂ ಸಂತಸವಿದೆ. ಬಾಲರಾಮನ ಮೂರ್ತಿ ಲೋಕಾರ್ಪಣೆ ನಂತರ ರವೀಂದ್ರ, ರಮೇಶ್ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದವರು ಎರಡು ತಿಂಗಳ ಬಳಿಕ ರಾಮಮಂದಿರದ ಕಾರ್ಯಕ್ಕೆ ತೆರಳಲಿದ್ದಾರೆ.
ಪರಂಪರಾನುಗತ ಶೈಲಿಯಲ್ಲಿ ಮಂದಿರ ನಿರ್ವಣವಾಗುತ್ತಿದ್ದು, ನೆಲಮಹಡಿಯ 160 ಸ್ತಂಭಗಳಲ್ಲಿ ಶೇ.90ರಷ್ಟು ಕೆತ್ತನೆ ಕಾರ್ಯ ಪೂರ್ಣಗೊಂಡಿದೆ. ಕರ್ನಾಟಕ, ಒಡಿಶಾ ಸೇರಿ ಇನ್ನಿತರ ಕಲಾವಿದರಿಂದ ಏಕದಂತನ 35ಕ್ಕೂ ಹೆಚ್ಚಿನ ಚಿತ್ರಗಳನ್ನು ನಾನಾ ಅವತಾರಗಳಲ್ಲಿ ಕಾಣಬಹುದಾಗಿದೆ. ಮೊದಲ ಮಹಡಿಯ ಗರ್ಭಗುಡಿಯಲ್ಲಿನ ಶ್ರೀರಾಮ ದರ್ಬಾರ್ ಸಭಾಂಗಣದಲ್ಲೂ ಇದೇ ತಂಡಕ್ಕೆ ಕೆತ್ತನೆಗೆ ಅವಕಾಶ ಲಭಿಸುವ ಸಾಧ್ಯತೆ ಹೆಚ್ಚಿದೆ. ಪರಿಪೂರ್ಣವಾದ ಬಳಿಕ ನೃತ್ಯ, ರಂಗ, ಸಭಾ, ಪ್ರಾರ್ಥನಾ ಮತ್ತು ಕೀರ್ತನಾ ಮಂಟಪ ಗಮನ ಸೆಳೆಯಲಿವೆ.
ಒಟ್ಟಾರೆ 392 ಸ್ತಂಭಗಳ ಪೈಕಿ ಪ್ರತಿಯೊಂದರಲ್ಲೂ ದೇವಾಧಿದೇವತೆಗಳ, ದೇವಾಂಗನೆಯರ ಮೂರ್ತಿ, ಬಳ್ಳಿ, ಹೂವು, ದೀಪಗಳು ಸೇರಿ ಅತ್ಯಾಕರ್ಷಕವಾದ 30ಕ್ಕೂ ಹೆಚ್ಚು ಸುಂದರ ಕೆತ್ತನೆಗಳು ಮೂಡಿಬರಲಿವೆ. ಇಡೀ ದೇಗುಲ ನಿರ್ಮಾಣ ಕಾರ್ಯದಲ್ಲಿ 4ರಿಂದ 5 ಸಾವಿರ ಮಂದಿ ತೊಡಗಿದ್ದು, ಅದರಲ್ಲಿ ಭಾರತದ ವಿವಿಧ ರಾಜ್ಯಗಳ 300ರಿಂದ 350 ಮಂದಿ ಶಿಲ್ಪಿಗಳೇ ಇದ್ದಾರೆ. ಈ ಪೈಕಿ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದ ಶಿಲ್ಪಿಗಳೇ ಹೆಚ್ಚಿದ್ದಾರೆ. ಕೋಟ್ಯಂತರ ಭಕ್ತರ ಆರಾಧ್ಯ ದೈವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರದಲ್ಲಿ ಈಗಾಗಲೇ ವಿಘ್ನನಿವಾರಕ ವಿಘ್ನೇಶ್ವರನ ಮೂರ್ತಿ ಕೆತ್ತಿರುವ ಕರುನಾಡಿನ ಶಿಲ್ಪಿಗಳಿಗೆ ಇನ್ನೂ ಒಂದೂವರೆ ವರ್ಷ ವಿವಿಧ ಶಿಲ್ಪಗಳ ಕೆತ್ತನೆಯ ಕಾಯಕವೂ ಲಭಿಸಲಿದೆ.
1 ವಿಗ್ರಹಕ್ಕೆ 22 ದಿನ:
ಮಂದಿರ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವ ಉದ್ದೇಶದಿಂದ ಶೇ.85ರಷ್ಟು ಯಂತ್ರದ ಸಹಾಯದಿಂದ ಕೆತ್ತನೆ ಕಾರ್ಯ ನಡೆದರೆ, ಕೊನೆಯ ಹಂತದ ಇನ್ನುಳಿದ 15ರಷ್ಟು ಉಳಿ ಬಳಸಲಾಗುತ್ತಿದೆ. ಒಂದು ವಿಗ್ರಹ ಕೆತ್ತಲು ಕರ್ನಾಟಕದವರು 22 ದಿನ ತೆಗೆದುಕೊಂಡರೆ, ಉತ್ತರ ಭಾರತದವರು 15 ದಿನಕ್ಕೆ ಪೂರ್ಣಗೊಳಿಸುತ್ತಿದ್ದಾರೆ ಎನ್ನುತ್ತಾರೆ ಶಿಲ್ಪಿಗಳಾದ ರಮೇಶ್, ಕೀರ್ತಿ.
ಟ್ರಸ್ಟ್ ತೋರಿಸುವ ಮಾದರಿ ಚಿತ್ರವನ್ನೇ ನೀಲಿನಕ್ಷೆ ಮೂಲಕ ಸಿದ್ಧಪಡಿಸಬೇಕು. ಪದಾಧಿಕಾರಿಗಳು ಒಪ್ಪಿಗೆ ಸೂಚಿಸಿದ ನಂತರ ಕರ್ನಾಟಕ, ಒಡಿಶಾ, ರಾಜಸ್ಥಾನ 3 ರಾಜ್ಯಗಳ ತಂಡಕ್ಕೂ ನೀಡುತ್ತೇನೆ. ಯಾವ ಕೆತ್ತನೆಯಲ್ಲೂ ಸ್ವಲ್ಪ ವ್ಯತ್ಯಾಸ ಆಗುವಂತಿಲ್ಲ. ಐತಿಹಾಸಿಕವಾಗಿ ಉಳಿಯಲು ಟ್ರಸ್ಟ್ ಹೆಚ್ಚು ಕಾಳಜಿ ವಹಿಸಿದೆ.
| ರವೀಂದ್ರ ಆಚಾರ್ ರೇಖಾ ಚಿತ್ರಗಾರ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:19 − 9 =
Remember me
