ಬೆಂಗಳೂರು: ‘ಬಲಿಷ್ಠ’ರು ಬಚಾವಾಗಲು ಉರುಳಿಸಿದ ದಾಳಕ್ಕೆ ರೈತರ ಸುಸ್ತಿ ಸಾಲ ವಸೂಲಿ ಕಾರ್ಯಾಚರಣೆಯೇ ಸುಸ್ತಾಗಿದೆ. ವಸೂಲಿ ಆದೇಶವನ್ನು ಸರ್ಕಾರ ತಿಂಗಳೊಳಗೆ ವಾಪಸ್ ಪಡೆದಿದ್ದರಿಂದಾಗಿ ರಾಜ್ಯ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ (ಕಾಸ್ಕಾರ್ಡ್) ಬ್ಯಾಂಕ್ ನಿರುತ್ಸಾಹದಿಂದ ಕೈಚೆಲ್ಲಿದೆ.
ಪ್ರಭಾವ, ಒತ್ತಡಕ್ಕೆ ಮಣಿಯದ ಕಾರಣ ಅಲ್ಪಾವಧಿಯಲ್ಲಿ 11 ಕೋಟಿ ರೂ. ಕಟ್ ಬಾಕಿ ವಸೂಲಾಗಿದೆ. ಹೀಗೆಯೇ ಮುಂದುವರಿಸಿದ್ದರೆ ಮಾರ್ಚ್ ಒಳಗೆ ನಬಾರ್ಡ್ ನಿಗದಿತ ಸುಸ್ತಿ ವಸೂಲಿ ಗುರಿ ಮುಟ್ಟುತ್ತಿದ್ದೆವು ಎಂದು ಸಹಕಾರ ಇಲಾಖೆ ಮೂಲಗಳು ತಿಳಿಸಿವೆ. ಈ ಕ್ರಮಕ್ಕೆ ರಾಜಕೀಯ ಲೇಪನವಾದ ನಂತರ ಪರಿಸ್ಥಿತಿ ತಿರುವು ಮುರುವು ಆಗಿದೆ. ರಾಜಕೀಯ ಅಡಕತ್ತರಿಯಿಂದ ಹೊರ ಬರದಿದ್ದರೆ ಕಾಸ್ಕಾರ್ಡ್ ಬ್ಯಾಂಕ್ ಭವಿಷ್ಯವೇ ಅತಂತ್ರವಾಗಲಿದೆ ಎಂದು ಈ ಮೂಲಗಳು ಕಳವಳ ವ್ಯಕ್ತಪಡಿಸಿವೆ.
ಕಾಸ್ಕಾರ್ಡ್ ಹಾಗೂ 177 ಪಿಕಾರ್ಡ್ ಬ್ಯಾಂಕ್​ಗಳ ಮೂಲಕ ರೈತರಿಗೆ ಮಧ್ಯಮಾವಧಿ, ದೀರ್ಘಾವಧಿ ರೂಪದಲ್ಲಿ ವಿತರಿಸಿದ್ದ 1,600 ಕೋಟಿ ರೂ. ಸಾಲದಲ್ಲಿ 1,280 ಕೋಟಿ ರೂ. ಮರು ಪಾವತಿಯಾಗಿದೆ. ಬಾಕಿ 320 ಕೋಟಿ ರೂ. ಸುಸ್ತಿ ಸಾಲವಾಗಿ ಪರಿವರ್ತನೆಯಾಗಿದೆ. ಟ್ರಾ್ಯಕ್ಟರ್, ಭೂ ಅಭಿವೃದ್ಧಿ ಚಟುವಟಿಕೆಗಳಿಗೆಂದು ದೀರ್ಘಾವಧಿ ಸಾಲ ಪಡೆದ ‘ಉಳ್ಳವರು’ ಹಲವು ವರ್ಷಗಳಿಂದ ಉದ್ದೇಶಪೂರ್ವಕವಾಗಿ ಬಾಕಿ ಇಟ್ಟುಕೊಂಡಿದ್ದು, ಈ ಸಾಲ ಬಡ್ಡಿ ಸೇರಿ 625 ಕೋಟಿ ರೂ. ಆಗಿದೆ.
ಎಚ್ಚರಿಕೆ ಮಿಶ್ರಿತ ಸಲಹೆ: ಬ್ಯಾಂಕ್ ಲೇವಾದೇವಿ ಚೆನ್ನಾಗಿಟ್ಟುಕೊಂಡು ವೃತ್ತಿಪರವಾಗಿ ಕಾರ್ಯನಿರ್ವಹಿ ಸದಿದ್ದರೆ ನಬಾರ್ಡ್ ಆರ್ಥಿಕ ನೆರವನ್ನು ಕ್ರಮೇಣ ನಿಲ್ಲಿಸುತ್ತದೆ. ರಾಜ್ಯದ ಏಳು ಲಕ್ಷ ರೈತರ ಹಿತ, ಶಾಶ್ವತ ಆಸ್ತಿ ಸೃಜನೆಯಲ್ಲಿ ಈ ಬ್ಯಾಂಕ್ ಪಾತ್ರ ಮಹತ್ವದ್ದಾಗಿದೆ. ದೀರ್ಘಾವಧಿ ಸುಸ್ತಿ ಸಾಲದ ಸುಳಿಯಿಂದ ಹೊರ ಬರದಿದ್ದರೆ ಅಪೆಕ್ಸ್ ಬ್ಯಾಂಕ್​ನಲ್ಲಿ ಕಾಸ್ಕಾರ್ಡ್ ಬ್ಯಾಂಕ್ ವಿಲೀನ ಅನಿವಾರ್ಯವಾಗಲಿದೆ ಎಂದು ಉನ್ನತಾಧಿಕಾರಿಗಳು ಎಚ್ಚರಿಕೆ ಮಿಶ್ರಿತ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸಂಕಷ್ಟ ಪರಿಹಾರ ಸೂತ್ರ: ರೈತರಿಗೆ ಅಗ್ಗದ ದರ (ಶೇ.3)ದಲ್ಲಿ ಸಾಲ ನೀಡುವ ಬ್ಯಾಂಕ್​ಗಳನ್ನು ಉಳಿಸಲು ‘ಸಂಕಷ್ಟ ಪರಿಹಾರ ಸೂತ್ರ’ವನ್ನು ಅಧಿಕಾರಿ ವರ್ಗ ಸಿದ್ಧಪಡಿಸಿದೆ. ಸೀಮಿತ ಅವಧಿಯೊಳಗೆ ಅಸಲು ಪೂರ್ತಿ ಕಟ್ಟಿದ ರೈತರಿಗೆ ಬಡ್ಡಿ ಮನ್ನಾ ಮಾಡುವುದು ಈ ಸೂತ್ರದ ತಿರುಳು. ಒಂದು ಬಾರಿ ಇಂತಹದೊಂದು ಅವಕಾಶ ಕೊಡಬೇಕೆಂದು ಸರ್ಕಾರಕ್ಕೆ ಮೊರೆಯಿಡಲು ಸಿದ್ಧತೆ ನಡೆದಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸರ್ಕಾರ ಈ ಸೂತ್ರ ಒಪ್ಪಿವುದೆ? ಎಂಬುದೇ ಅನುಮಾನ.
ಧಮ್ಕಿ ಹಾಕಿ ವಾಪಸ್:19 ಲಕ್ಷ ರೂ. ಕಟ್ ಬಾಕಿ ವಸೂಲಿಗೆಂದು ರೈತ ಸಂಘಟನೆ ಮುಖಂಡರೊಬ್ಬರ ಟ್ರಾ್ಯಕ್ಟರ್ ಜಪ್ತಿ ಮಾಡಲಾಗಿತ್ತು. ಬ್ಯಾಂಕ್ ಅಧಿಕಾರಿಗಳಿಗೆ ಈ ಮುಖಂಡ ಧಮ್ಕಿ ಹಾಕಿ, ಹಲ್ಲೆಗೂ ಪ್ರಯತ್ನಿಸಿ ಟ್ರಾ್ಯಕ್ಟರ್ ವಾಪಸ್ ಒಯ್ದರು. ಭದ್ರಾವತಿ ತಾಲೂಕಿನ ಹಳ್ಳಿಯೊಂದರಿಂದ 1.50 ಕೋಟಿ ರೂ. ಸಾಲ ವಸೂಲಿ ಬಾಕಿ ಇದೆ. ಇವು ಉದ್ದೇಶಪೂರ್ವಕ ಸುಸ್ತಿ ಸಾಲಗಾರರ ಕೆಲ ಉದಾಹರಣೆಗಳಷ್ಟೇ ಎಂಬುದು ಮೂಲಗಳ ಮಾಹಿತಿ.
ಕೊಡು-ಕೊಳ್ಳುವುದು ಚೆನ್ನಾಗಿದ್ದರೆ ಬ್ಯಾಂಕ್ ಸುಸ್ಥಿತಿಯಲ್ಲಿರುತ್ತವೆ. ರೈತರ ಹಿತದೃಷ್ಟಿಯಿಂದ ಸುಸ್ತಿ ಸಾಲದ ಮೇಲಿನ ಬಡ್ಡಿ ಮನ್ನಾ ಅವಕಾಶ ಕಲ್ಪಿಸಲು ಸರ್ಕಾರಕ್ಕೆ ಮನವಿ ಮಾಡಲಿದ್ದೇವೆ.
| ಎ.ಸಿ.ದಿವಾಕರ್, ವ್ಯವಸ್ಥಾಪಕ ನಿರ್ದೇಶಕ, ಕಾಸ್ಕಾರ್ಡ್ ಬ್ಯಾಂಕ್

ಮೃತ್ಯುಂಜಯ ಕಪಗಲ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
