ಬೆಂಗಳೂರು : ರಾಜಕಾಲುವೆ ಸಮೀಪ ಮ್ಯಾನ್‌ಹೋಲ್ ನಿರ್ಮಾಣಕ್ಕೆ ಅವೈಜ್ಞಾನಿಕವಾಗಿ ರಸ್ತೆ ಅಗೆದ ಜಲಮಂಡಳಿ ಸಹಾಯಕ ಕಾರ್ಯನಿರ್ವಹಕ ಇಂಜಿನಿಯರ್ ವಿರುದ್ಧ ಬಿಬಿಎಂಪಿ ಎಫ್​ಐಆರ್ ದಾಖಲಿಸಿದೆ. ಬಿಬಿಎಂಪಿ ರಾಜರಾಜೇಶ್ವರಿನಗರ ವಲಯ ಮಳೆ ನೀರು ಕಾಲುವೆ ವಿಭಾಗ ಎಇಇ ಆರ್.ರಾಘವೇಂದ್ರ, ದೂರು ನೀಡಿದ್ದಾರೆ. ಇದರ ಮೇರೆಗೆ ಜಲಮಂಡಳಿ ಎಇಇ ನಯೀಮ್ ಉಲ್ಲಾ ಷರೀಷ್ ವಿರುದ್ಧ ಕೇಸ್ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಗಿರಿನಗರ ಪೊಲೀಸರು ತಿಳಿಸಿದ್ದಾರೆ.
ಅ.21ರ ಬೆಳಗ್ಗೆ 9.30ರಲ್ಲಿ ಗುರುದತ್ತ ಬಡಾವಣೆ 2ನೇ ಮುಖ್ಯರಸ್ತೆ ನಿವಾಸಿಗಳು ಪಾಲಿಕೆಗೆ ಕರೆ ಮಾಡಿ ರಾತ್ರಿ ಸುರಿದ ಮಳೆಯಿಂದ ಕಾಲುವೆ ತಡೆಗೋಡೆ ಕುಸಿದು ಹೋಗಿದೆ. ಇದರಿಂದ ಕೆಲವು ಮನೆಗಳು ಅಪಾಯದ ಹಂಚಿನಲ್ಲಿ ಇವೆ. ಮನೆ ಮುಂಭಾಗದ ರಸ್ತೆ ಕುಸಿದಿರುವ ಪರಿಣಾಮ ಹೊರಬರಲು ಸಾಧ್ಯವಾಗುತ್ತಿಲ್ಲ ಎಂದು ದೂರು ನೀಡಿದರು.
ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಜಲಮಂಡಳಿಯಿಂದ ಕಿರಿದಾದ ರಸ್ತೆಯಲ್ಲಿ ಒಳಚರಂಡಿ ನೀರನ್ನು ಸಾಗಿಸಲು ಕೊಳವೆಗಳನ್ನು ಹಾಗೂ ಮ್ಯಾನ್‌ಹೋಲ್ ಕಾಮಗಾರಿ ಕೈಗೊಂಡಿದ್ದರು. ಇದಕ್ಕೂ ಮೊದಲು ಪಾಲಿಕೆಯಿಂದ ಅನುಮತಿ ಪಡೆಯದೆ ಕಾಂಕ್ರಿಟ್ ರಸ್ತೆಯನ್ನು ಅವೈಜ್ಞಾನಿಕವಾಗಿ ಅಗೆದಿರುವ ಪರಿಣಾಮ ರಾಜಕಾಲುವೆ ತಡೆಗೋಡೆ ಮತ್ತು ರಸ್ತೆ ಕುಸಿದಿರುವುದು ಕಂಡುಬಂದಿದೆ. ರಾಜಕಾಲುವೆ ನೀರು ಅಕ್ಕಪಕ್ಕದ ಮನೆಗಳಿಗೆ ನುಗ್ಗಿ ಅಪಾಯದಲ್ಲಿ ಸಿಲುಕಿದ್ದಾರೆ. ಇದು ಜಲಮಂಡಳಿ ಕೈಗೊಂಡಿರುವ ಅವೈಜ್ಞಾನಿಕ ಕಾಮಗಾರಿಯಿಂದ ದುಸ್ಥಿತಿ ಬಂದಿದೆ ಎಂದು ದೂರಿನಲ್ಲಿ ಎಇಇ ಆರ್. ರಾಘವೇಂದ್ರ ಆರೋಪಿಸಿದ್ದಾರೆ. ಈ ಮೇರೆಗೆ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Sign in to your account
Please enter an answer in digits:12 + 15 =
Remember me
