ಯಾದಗಿರಿ:ಕರೊನಾ ಸಂದರ್ಭವನ್ನು ಅನೇಕರು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸುವವರು ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ಮೆಡಿಕಲ್​ ಶಾಪ್​ ಸಿಬ್ಬಂದಿ ಮಾಸ್ಕ್​, ಸ್ಯಾನಿಟೈಸರ್​ ಬೆಲೆಗಳನ್ನು ವಿಪರೀತ ಹೆಚ್ಚು ಮಾಡಿದ್ದಾರೆ.
ಈಗ ಇನ್ನೊಂದೆಡೆ ನಕಲಿ ವೈದ್ಯರ ಕಾಟ ಶುರುವಾಗಿದೆ. ಕರೊನಾ ವೈರಸ್​ ಸೋಂಕು ಗುಣಮಾಡುವ ಮಾತ್ರೆಗಳೆಂದು ನಕಲಿ ಹೋಮಿಯೋಪಥಿಕ್​ ಮಾತ್ರೆಗಳನ್ನು ಹಂಚಿದ ಡುಪ್ಲಿಕೇಟ್​ ವೈದ್ಯನ ವಿರುದ್ಧ ಯಾದಗಿರಿಯ ಗುರುಮಿಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಲ್ಲದೆ ಈ ನಕಲಿ ವೈದ್ಯನಿಗೆ ಸಹಕಾರ ನೀಡಿದ ಆರೋಪದಡಿ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷನ ವಿರುದ್ಧವೂ ಕೇಸ್​ ದಾಖಲಾಗಿದೆ.
ಯಾದಗಿರಿಯ ಗುರುಮಿಠಕಲ್​​ ತಾಲೂಕಿನ ಗುಂಜುನುರೂನಲ್ಲಿ ಘಟನೆ ನಡೆದಿದೆ. ಶರಣಗೌಡ ಮಾಲಿಪಾಟೀಲ್​ ಎಂಬಾತ ತಾನು ಸರ್ಕಾರಿ ವೈದ್ಯನೆಂದು ಹೇಳಿಕೊಂಡು ನಕಲಿ ಮಾತ್ರೆಗಳನ್ನು ಹಂಚಿದ್ದಾನೆ. ಆತ ನೀಡಿದ ಮಾತ್ರೆಯ ಪ್ಯಾಕೆಟ್​ ಮೇಲೆ ಡಿ.ಕೆ.ಶಿವಕುಮಾರ್​ ಮತ್ತು ಮಲ್ಲಿಕಾರ್ಜುನ ಖರ್ಗೆ ಫೋಟೋ ಕೂಡ ಇತ್ತು. ಈ ರೀತಿ ಮಾತ್ರೆ ಹಂಚುವಂತೆ ಜಿಲ್ಲಾಡಳಿತ ಯಾರಿಗೂ ಹೇಳಿರಲಿಲ್ಲ. ನಕಲಿ ವೈದ್ಯನ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರಿನಲ್ಲಿ 10 ತಿಂಗಳ ಮಗುವಿಗೂ ಕರೊನಾ ವೈರಸ್​ ಸೋಂಕು; ಸಂಪೂರ್ಣ ಗ್ರಾಮಕ್ಕೇ ದಿಗ್ಬಂಧನ ಹಾಕಿದ ಜಿಲ್ಲಾಡಳಿತ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − nine =
Remember me
