ಹಾವೇರಿ:ನಾನು ನಿನಗೆ ಹಣ ಕೊಟ್ಟೇನಿ, ಮನೆ ಮಾಡಿ ಕೊಟ್ಟೇನಿ, ನಾನು ಹೇಳಿದಂಗೆ ನೀನು ಕೇಳಬೇಕು, ನನ್ನೊಂದಿಗೆ ಲೈಂಗಿಕವಾಗಿ ಸಹಕರಿಸಬೇಕು… ಎಂದು ಕಿರುಕುಳ ನೀಡುತ್ತಿದ್ದಾನೆ ಎಂದು ವಿವಾಹಿತ ಮಹಿಳೆಯೊಬ್ಬರು ನಗರಸಭೆ ಮಾಜಿ ಸದಸ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಈ ಆರೋಪವನ್ನು ಅಲ್ಲಗಳೆದಿರುವ ಇಲ್ಲಿನ ನಗರಸಭೆ ಮಾಜಿ ಸದಸ್ಯ, ಆ ಮಹಿಳೆ ಸೈಟ್ ಖರೀದಿಸುವಾಗ ನನ್ನ ಬಳಿ ಹಣ ಪಡೆದಿದ್ದಳು. ಆ ಹಣವನ್ನು ವಾಪಸ್​ ಕೊಡುವಂತೆ ಕೇಳಿದ್ದಕ್ಕೆ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾಳೆ. ರಕ್ತ ಬರುವಾಗ ಹಾಗೆ ಹೊಡೆದಿದ್ದಾರೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಹಾವೇರಿ ಹೊರವಲಯದ ನಾಗೆಂದ್ರನಮಟ್ಟಿಯಲ್ಲಿ ಬೀದಿಗೆ ಬಂದ ಇವರಿಬ್ಬರ ಗಲಾಟೆ ಇದೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಹಾವೇರಿ ಮಹಿಳಾ ಪೊಲೀಸ್​ ಠಾಣೆಯಲ್ಲಿ ಮಹಿಳೆಯು ದೂರು ನೀಡಿದ್ದ ಹಿನ್ನೆಲೆಯಲ್ಲಿ ನಗರಸಭೆ ಮಾಜಿ ಸದಸ್ಯ ಮತ್ತು ದೂರುದಾರರನ್ನು ಕರೆಯಿಸಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗಿದೆ. ಈ ವೇಳೆ ಆರೋಪ-ಪ್ರತ್ಯಾರೋಪ ಕೇಳಿಬಂದಿದೆ.
ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
