ಹೊಸಪೇಟೆ:ಸುಳ್ಳು ದಾಖಲೆ ಸೃಷ್ಟಿಸಿ 40 ಲಕ್ಷ ರೂ. ಮೌಲ್ಯದ ಆಸ್ತಿ ಮಾರಾಟಕ್ಕೆ ಮುಂದಾಗಿದ್ದ ಸಬ್ ರಿಜಿಸ್ಟಾರ್ ಸೇರಿ ಐವರ ವಿರುದ್ಧ ಕೇಸ್​ ದಾಖಲಾಗಿದೆ.
ಹೊಸಪೇಟೆಯ ಉಪನೋಂದಣಾಧಿಕಾರಿ ತಿಪ್ಪೇಸ್ವಾಮಿ, ಸ್ಟಾಂಪ್ ರೈಟರ್ ಶಾಂತಿನಾಥ ರಾವ್ ಸಿಂಧೆ ಹಾಗೂ ನಜೀರ್ ಅಹಮದ್, ಶಂಷಾದ್ ಬೇಗಂ ಮತ್ತು ನಗರಸಭೆ ಸಿಬ್ಬಂದಿ ಸೇರಿ ಐವರ ವಿರುದ್ಧ ಪಾಯಲ್ ಜೈನ್ ಎಂಬಾತ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳು ಶಂಷಾದ್ ಬೇಗಂ ಎಂಬ ಹೆಸರು ಸೃಷ್ಟಿಸಿ, ಆ ಹೆಸರಿನ ಮೇಲೆ ಡೋರ್ ನಂಬರ್ 99 ಮತ್ತು ಅಸೆಸ್​ಮೆಂಟ್ 119ರ 16×65 ಅಡಿ ಸುತ್ತಳತೆ ಕಟ್ಟಡವನ್ನು ನಲವತ್ತು ಲಕ್ಷ ರೂ.ಗೆ ಮಾರಾಟಕ್ಕೆ ಇಟ್ಟಿದ್ದರು.
ಆ ಕಟ್ಟಡವನ್ನು ಪಾಯಲ್ ಜೈನ್ ಎಂಬುವರು ಖರೀದಿಸಿದ್ದರು. 2 ಲಕ್ಷ ರೂಪಾಯಿಯನ್ನು ಮುಂಗಡವಾಗಿ ಪಡೆದಿದ್ದ ಆರೋಪಿಗಳು ಕಟ್ಟಡ ನೋಂದಣಿ ಬಳಿಕ ಪಾಯಲ್​ಜೈನ್​ರಿಂದ 38 ಲಕ್ಷ ಹಣವನ್ನ ಚೆಕ್ ಮೂಲಕ ಪಡೆದಿದ್ದರು. ನೋಂದಣಿ ನಂತರ ನಗರಸಭೆಯಲ್ಲಿ ಮುಟೇಷನ್ ಮಾಡಿಸಲು ಹೋದಾಗ ಅಸಲಿ ಸತ್ಯ ಬಯಲಾಗಿದೆ.
ಗೋಹತ್ಯೆ ನಿಷೇಧ ವಿಧೇಯಕ ಪಾಸ್​: 5 ಲಕ್ಷ ರೂ. ದಂಡ, 7 ವರ್ಷ ಜೈಲು ಶಿಕ್ಷೆಗೆ ಅವಕಾಶ

ಮದ್ವೆಗೆ 2 ದಿನ ಇದ್ದಂತೆ ವಧುಗೆ ಕೈಕೊಟ್ಟ ವರ​! ಮದ್ವೆ ದಿನ ವಾಪಸ್​ ಬಂದವನಿಂದ ಮತ್ತೊಂದು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
